
ಒಟ್ಟಿನಲ್ಲಿ ಐಪಿಎಲ್ನಲ್ಲಿ 2011ರ ಬಳಿಕ ಮತ್ತೊಮ್ಮೆ 10 ತಂಡಗಳನ್ನು ಕಣಕ್ಕಿಳಿಯಲ್ಲಿದ್ದು, ಅದರಂತೆ ಯಾವ ಹೊಸ ತಂಡಗಳು ಸೇರ್ಪಡೆಯಾಗಲಿದೆ ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಾರ್ಮ್ ರೋಹಿತ್ ಶರ್ಮಾ ಅವರನ್ನು ಚಿಂತೆಗೀಡು ಮಾಡಿದೆ. ಮೊದಲ ಹಂತದಲ್ಲಿ ಹಾರ್ದಿಕ್ 6 ಪಂದ್ಯಗಳಲ್ಲಿ ಕೇವಲ 52 ರನ್ ಮಾತ್ರ ಗಳಿಸಿದ್ದರು. ಇನ್ನು ಬೌಲಿಂಗ್ ಮಾಡಲು ಸಂಪೂರ್ಣ ಫಿಟ್ ಆಗಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಆಲ್ರೌಂಡರ್ ಪ್ರದರ್ಶನದ ಬಗ್ಗೆ ಮುಂಬೈ ಹೆಚ್ಚು ಚಿಂತಿತವಾಗಿದೆ. ಇನ್ನು ಮುಂಬೈ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಸ್ಪೋಟಕ ಇನಿಂಗ್ಸ್ ಕೂಡ ಅತ್ಯಗತ್ಯ. ಹೀಗಾಗಿ ದ್ವಿತಿಯಾರ್ಧದಲ್ಲಿ ಹಾರ್ದಿಕ್ ಕಂಬ್ಯಾಕ್ನ್ನು ಮುಂಬೈ ಇಂಡಿಯನ್ಸ್ ನಿರೀಕ್ಷಿಸುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್: ಕಳೆದ ಸೀಸನ್ನಲ್ಲಿ 7 ನೇ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಅನುಭವಿಗಳದ್ದೇ ಚಿಂತೆ. ಅದರಲ್ಲೂ ತಂಡದ ಬೆನ್ನೆಲುಬಾಗಿರುವ ಸುರೇಶ್ ರೈನಾ ಮತ್ತು ಎಂಎಸ್ ಧೋನಿ ಫಾರ್ಮ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಏಕೆಂದರೆ ಮೊದಲಾರ್ಧದಲ್ಲಿ ರೈನಾ 123 ರನ್ ಮತ್ತು ಧೋನಿ 37 ರನ್ ಮಾತ್ರ ಗಳಿಸಿದ್ದರು. ಇನ್ನು ಧೋನಿಯ ಬ್ಯಾಟ್‌ನಿಂದ ರನ್ ಬರದಿರುವುದು ಚೆನ್ನೈ ತಂಡದ ಕೆಳ ಕ್ರಮಾಂಕದ ಮೇಲೆ ಪರಿಣಾಮ ಬೀರಿದೆ. ಇತ್ತ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಗಾಯಗೊಂಡಿರುವುದು ಕೂಡ CSK ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡವು ಈ ಬಾರಿ ನಾಲ್ಕು ಹೊಸ ವಿದೇಶಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಅದರಂತೆ ಆರ್ಸಿಬಿ ಬಳಗದಲ್ಲಿ ವನಿಂದು ಹಸರಂಗ, ದುಷ್ಮಂತ ಚಮೀರಾ, ಜಾರ್ಜ್ ಗಾರ್ಟನ್, ಟಿಮ್ ಡೇವಿಡ್ ಎಂಟ್ರಿಯಾಗಿದೆ. ಆದರೆ ಇವರ್ಯಾರು ಐಪಿಎಲ್ ಅನುಭವ ಹೊಂದಿಲ್ಲ ಎಂಬುದು ವಿಶೇಷ. ಹೀಗಾಗಿ ಬದಲಿ ವಿದೇಶಿ ಆಟಗಾರರನ್ನು ಕಣಕ್ಕಿಳಿಸುವ ಸಂದರ್ಭ ಬಂದರೆ ಚೊಚ್ಚಲ ಬಾರಿ ಐಪಿಎಲ್ ಆಡಲಿರುವ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಇದೀಗ ಉಳಿದಿರುವುದು ಕೇವಲ 7 ಪಂದ್ಯಗಳು ಮಾತ್ರ. ಇದು ಕೂಡ ಹೊಸ ಆಟಗಾರರ ಮೇಲೆ ಒತ್ತಡವನ್ನು ಉಂಟು ಮಾಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್

ಪಂಜಾಬ್ ಕಿಂಗ್ಸ್: ಪಂಜಾಬ್ ತಂಡವು ನಾಯಕ ಕೆಎಲ್ ರಾಹುಲ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕ್ರಿಸ್ ಗೇಲ್ ಹಾಗೂ ನಿಕೋಲಸ್ ಪೂರನ್ ಅವರಿಂದ ನಿರೀಕ್ಷಿತ ಆಟ ಮೂಡಿ ಬಂದಿಲ್ಲ. ಅದರಲ್ಲೂ ಮೊದಲಾರ್ಧದಲ್ಲಿ ಮಧ್ಯಮ ಕ್ರಮಾಂಕ ಕೈಕೊಟ್ಟಿರುವುದು ಪಂಜಾಬ್ ತಂಡದ ಚಿಂತೇಗೆ ಕಾರಣವಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡದ ಬ್ಯಾಟ್ಸ್ಮನ್ಗಳು ಮೊದಲಾರ್ಧದಲ್ಲಿ ಎಡವಿದ್ದರು. ತಂಡದ ಪರ ನಿತೀಶ್ ರಾಣಾ ಅತ್ಯಧಿಕ 201 ರನ್ ಗಳಿಸಿರುವುದು ಹೆಚ್ಚು. ಇದಾಗ್ಯೂ ಸ್ಟಾರ್ ಆಟಗಾರರಾದ ನಾಯಕ ಇಯಾನ್ ಮೊರ್ಗನ್ 93 ರನ್ ಮತ್ತು ದಿನೇಶ್ ಕಾರ್ತಿಕ್ 123 ರನ್ ಮಾತ್ರ ಕಲೆಹಾಕಿದ್ದಾರೆ. ಇನ್ನು ಆಂಡ್ರೆ ರಸೆಲ್ ಕಡೆಯಿಂದಲೂ ಈ ಹಿಂದಿನ ಆಟ ಮೂಡಿ ಬಂದಿಲ್ಲ. ಹೀಗಾಗಿ ದ್ವಿತಿಯಾರ್ಧದಲ್ಲೂ ಬ್ಯಾಟ್ಸ್ಮನ್ಗಳು ಮತ್ತೆ ಕೈಕೊಡಲಿದ್ದಾರಾ ಎಂಬ ಚಿಂತೆ ಕೆಕೆಆರ್ಗೆ ಇದೆ.

ಸನ್ ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ತಂಡದಲ್ಲಿ ಮನೀಶ್ ಪಾಂಡೆ ಹೊರತುಪಡಿಸಿ, ಯಾವುದೇ ಭಾರತೀಯ ಬ್ಯಾಟ್ಸ್ಮನ್ ಮೊದಲ ಪಂದ್ಯದಲ್ಲಿ 60ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ಶಂಕರ್ 58, ಕೇದಾರ್ ಜಾಧವ್ 40 ಮತ್ತು ಸಮದ್ ಕೇವಲ 36 ರನ್ ಕಲೆಹಾಕಿದ್ದಾರೆ. ಇದೀಗ ಜಾನಿ ಬೈರ್ ಸ್ಟೋ ಕೂಡ ಕೈಕೊಟ್ಟಿದ್ದಾರೆ. ಹೀಗಾಗಿ ಹೊಸ ಆರಂಭಿಕನನ್ನು ಕಂಡುಕೊಳ್ಳುವ ಅನಿವಾರ್ಯತೆ ಎಸ್ಆರ್ಹೆಚ್ ತಂಡಕ್ಕಿದೆ. ಒಂದೆಡೆ ಭಾರತೀಯ ಆಟಗಾರರ ವೈಫಲ್ಯ ಎಸ್ಆರ್ಹೆಚ್ ತಂಡದ ಚಿಂತೆಯನ್ನು ಹೆಚ್ಚಿಸಿದೆ.

ರಾಜಸ್ಥಾನ ರಾಯಲ್ಸ್: ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಸ್ಥಾನ ತುಂಬುವುದು ಸವಾಲಾಗಿದೆ. ತಂಡಕ್ಕೆ ಎವಿನ್ ಲೂಯಿಸ್ ಹಾಗೂ ಗ್ಲೆನ್ ಫಿಲಿಪ್ಸ್ ಆಗಮನವಾಗಿದೆ. ಇದಾಗ್ಯೂ ಇಬ್ಬರು ತಂಡದಲ್ಲಿ ಹೊಂದಿಕೊಳ್ಳಲು ಒಂದಷ್ಟು ಸಮಯ ಬೇಕಿದೆ. ಆದರೆ ಉಳಿದಿರುವುದು ಕೇವಲ 7 ಪಂದ್ಯ ಮಾತ್ರ. ಹೊಸ ಆಟಗಾರರು ತಂಡದಲ್ಲಿ ಹೊಂದಿಕೊಳ್ಳುವಷ್ಟರಲ್ಲಿ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದಿರಲಿದೆ. ಇನ್ನು ಜೋಫ್ರಾ ಆರ್ಚರ್ ಕೂಡ ಅಲಭ್ಯರಾಗಿರುವುದು ಆರ್ಆರ್ ಚಿಂತೆಯನ್ನು ಹೆಚ್ಚಿಸಿದೆ.