IPL 2022 Mega Auctio: ಈ ಐದು ಆಟಗಾರರ ಮೇಲೆ ಕಣ್ಣಿಟ್ಟಿದೆ RCB

| Updated By: ಝಾಹಿರ್ ಯೂಸುಫ್

Updated on: Feb 10, 2022 | 9:50 PM

IPL 2022 Mega Auction: ಈ ಹರಾಜಿನಲ್ಲಿ ಕೆಲ ಅನ್​ಕ್ಯಾಪ್ಡ್​ (ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರರು) ಆಟಗಾರರನ್ನು ಖರೀದಿಸಲು ಆರ್​ಸಿಬಿ ಕೂಡ ಪ್ಲ್ಯಾನ್ ರೂಪಿಸಿದೆ.

1 / 7
ಐಪಿಎಲ್ ಸೀಸನ್ 15 ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ  10 ತಂಡಗಳು ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಉಳಿದ ಆಟಗಾರರನ್ನು ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನ ಮೂಲಕ ಖರೀದಿಸಲಿದೆ.

2 / 7
ಈ ಹರಾಜಿನಲ್ಲಿ ಕೆಲ ಅನ್​ಕ್ಯಾಪ್ಡ್​ (ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರರು) ಆಟಗಾರರನ್ನು ಖರೀದಿಸಲು ಆರ್​ಸಿಬಿ ಕೂಡ ಪ್ಲ್ಯಾನ್ ರೂಪಿಸಿದೆ. ಅದರಂತೆ ಆರ್​ಸಿಬಿ ಹಿಟ್​ ಲೀಸ್ಟ್​ನಲ್ಲಿರುವ 5 ಅನ್​ಕ್ಯಾಪ್ಡ್​ ಆಟಗಾರರು ಯಾರೆಂದು ನೋಡುವುದಾದರೆ....

3 / 7
ರಾಹುಲ್ ತ್ರಿಪಾಠಿ: ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡದಲ್ಲಿ ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತ್ರಿಪಾಠಿಯ ಖರೀದಿಗೆ ಹೆಚ್ಚಿನ ಫ್ರಾಂಚೈಸಿ ಆಸಕ್ತಿ ತೋರಲಿದೆ. ಈ ಪಟ್ಟಿಯಲ್ಲಿ ಆರ್​ಸಿಬಿ ಕೂಡ ಮುಂಚೂಣಿಯಲ್ಲಿರಲಿದೆ.

4 / 7
ಯಶ್ ಧುಲ್: ಅಂಡರ್​ 19  ಟೀಮ್ ಇಂಡಿಯಾದ ನಾಯಕ ಯಶ್ ಧುಲ್ ಈ ಬಾರಿ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಯುವ ಆಟಗಾರನ ಮೇಲೆ ಆರ್​ಸಿಬಿ ಕೂಡ ಕಣ್ಣಿಟ್ಟಿದೆ.

5 / 7
ಅವೇಶ್ ಖಾನ್: ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ವೇಗಿ ಅವೇಶ್ ಖಾನ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಮುಂದಾಗಲಿದೆ. ಅದರಂತೆ ಆರ್​ಸಿಬಿ ಕೂಡ ಅವೇಶ್ ಖಾನ್ ಖರೀದಿಗೆ ಪೈಪೋಟಿ ನಡೆಸಲಿದೆ.

6 / 7
ಡೆವಾಲ್ಡ್ ಬ್ರೆವಿಸ್: ಸೌತ್ ಆಫ್ರಿಕಾದ ಯುವ ಬ್ಯಾಟ್ಸ್​ಮನ್ ಡೆವಾಲ್ಡ್ ಬ್ರೆವಿಸ್ ಕೂಡ ಈ ಬಾರಿ ಅಂಡರ್ 19 ವಿಶ್ವಕಪ್​ನಲ್ಲಿ ಅಬ್ಬರಿಸಿದ್ದರು. ಕ್ರಿಕೆಟ್​ ಅಂಗಳದಲ್ಲಿ ಬೇಬಿ ಎಬಿ ಎಂದೇ ಗುರುತಿಸಿಕೊಂಡಿರುವ ಬ್ರೆವಿಸ್ ಅವರ ಖರೀದಿಗೂ ಆರ್​ಸಿಬಿ ಆಸಕ್ತಿ ಹೊಂದಿದೆ.

7 / 7
ಶಾರೂಖ್ ಖಾನ್: ಈ ಬಾರಿಯ ಮೆಗಾ ಹರಾಜಿನಲ್ಲಿ ಶಾರೂಖ್​ ಖಾನ್​ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ. ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್​ ಪರ ಆಡಿದ್ದ ಶಾರೂಖ್ ಇದೀಗ ಹೊಸ ಹಿಟ್ಟರ್​ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ಫಿನಿಶರ್ ಆಗಿ ಆರ್​ಸಿಬಿ ಕೂಡ ಶಾರೂಖ್ ಖಾನ್ ಖರೀದಿಗೆ ಮುಂದಾಗಲಿದೆ.