IPL 2022 Retention Rules: ಆಟಗಾರರ ಉಳಿಸಿಕೊಳ್ಳಲು ಇರುವ ನಿಯಮಗಳೇನು?

IPL 2022 retention rules: ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕು. ಒಂದು ವೇಳೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕಾಗುತ್ತದೆ.

TV9 Web
| Updated By: ಝಾಹಿರ್ ಯೂಸುಫ್

Updated on:Nov 29, 2021 | 10:46 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 ರಿಟೈನ್ ಪಟ್ಟಿ ಸಲ್ಲಿಸಲು ನಾಳೆ (ನ.30) ಕೊನೆಯ ದಿನಾಂಕ. ಈ ಬಾರಿ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳಿಗೆ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಹೊಸ 2 ಫ್ರಾಂಚೈಸಿಗೆ 3 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ. ಅಂದರೆ ಹಳೆಯ ಫ್ರಾಂಚೈಸಿ ರಿಟೈನ್ ಪಟ್ಟಿ ಸಲ್ಲಿಸಿದ ಬಳಿಕ ಹೊಸ ಫ್ರಾಂಚೈಸಿಗಳಿಗೆ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಇರಲಿದೆ.

1 / 8
ಇಲ್ಲಿ ಒಟ್ಟು ಹರಾಜು ಮೊತ್ತವನ್ನು 90 ಕೋಟಿಗೆ ಏರಿಸಲಾಗಿದೆ. ಕಳೆದ ಸೀಸನ್​ನಲ್ಲಿ ಈ ಮೊತ್ತವು 85 ಕೋಟಿ ರೂ. ಆಗಿತ್ತು. ಅಂದರೆ ರಿಟೈನ್ ಹಾಗೂ ಆಯ್ಕೆ ಮಾಡಲಾದ ಆಟಗಾರರ ಮೊತ್ತವನ್ನು ಒಟ್ಟು ಹರಾಜು ಮೊತ್ತದಿಂದ ಕಡಿತ ಮಾಡಲಾಗುತ್ತದೆ. ಇದಾದ ಬಳಿಕ ಮೆಗಾ ಹರಾಜು ನಡೆಯಲಿದೆ.

2 / 8
ಹೊಸ ಫ್ರಾಂಚೈಸಿ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 8 ಕೋಟಿ ವ್ಯಯಿಸಬೇಕಾಗುತ್ತದೆ. ಅದರಂತೆ 33 ಕೋಟಿಯೊಳಗೆ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಳ್ಳಬಹುದು. ಆ ಬಳಿಕವಷ್ಟೇ ಮೆಗಾ ಹರಾಜು ನಡೆಯಲಿದೆ. ಇದರಿಂದ ಹರಾಜಿನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವ 6 ಸ್ಟಾರ್ ಆಟಗಾರರನ್ನು ಆಯ್ಕೆ ಮಾಡುವ ಆಯ್ಕೆ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗೆ ಸಿಗಲಿದೆ.

3 / 8
ಇನ್ನು ಉಳಿದ 8 ಫ್ರಾಂಚೈಸಿಗಳಿಗೂ ಆಟಗಾರರ ರಿಟೈನ್​ಗಾಗಿ ಮೊತ್ತ ನಿಗದಿ ಮಾಡಲಾಗಿದೆ. ಅಂದರೆ ಇಲ್ಲಿ ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಲು ಬಯಸಿದರೆ 42 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕು. ಒಂದು ವೇಳೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕಾಗುತ್ತದೆ. ಇದಾಗ್ಯೂ ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರನನ್ನು ಉಳಿಸಿಕೊಂಡರೆ 4 ಕೋಟಿ ರೂ. ನೀಡಬೇಕು ಎಂದು ಷರತ್ತು ವಿಧಿಸಲಾಗಿದೆ. ಅದರಂತೆ ಆಟಗಾರರ ರಿಟೈನ್ ವೇತನ ಮೊತ್ತ ಹೀಗಿದೆ.

4 / 8
 4 ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, 3ನೇ ಆಟಗಾರನಿಗೆ 8 ಕೋಟಿ ರೂ , 4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 42 ಕೋಟಿ ಆಗಲಿದೆ.

5 / 8
3 ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 15 ಕೋಟಿ ರೂ,2ನೇ ಆಟಗಾರನಿಗೆ 11 ಕೋಟಿ ರೂ, 3ನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 33 ಕೋಟಿ ರೂ. ವ್ಯಯಿಸಬೇಕು.

6 / 8
2 ಆಟಗಾರರನ್ನು ಉಳಿಸಿಕೊಂಡರೆ: ಮೊದಲ ಆಟಗಾರನಿಗೆ 14 ಕೋಟಿ ರೂ, 2ನೇ ಆಟಗಾರನಿಗೆ 10 ಕೋಟಿ ರೂ. ನೀಡಬೇಕು. ಅದರಂತೆ ಒಟ್ಟು ಮೊತ್ತ 24 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ ರೂ. ನೀಡಬೇಕಾಗುತ್ತದೆ. ಇದಾಗ್ಯೂ ರಾಷ್ಟ್ರೀಯ ತಂಡದಲ್ಲಿ ಆಡದ ಒಬ್ಬ ಆಟಗಾರನನ್ನು ಉಳಿಸಿಕೊಂಡರೆ 4 ಕೋಟಿ ನೀಡಬೇಕಾಗುತ್ತದೆ.

7 / 8
ಪ್ರತಿ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ಉಳಿಸಿಕೊಳ್ಳೊತ್ತಾರೋ ಅದಕ್ಕನುಗುಣವಾಗಿ, ಒಟ್ಟು ಹರಾಜು ಮೊತ್ತ 90 ಕೋಟಿಯಿಂದ ಆ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಉದಾಹರಣೆಗೆ ಆರ್​ಸಿಬಿ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ 90 ಕೋಟಿಯಿಂದ 42 ಕೋಟಿ ರೂ. ಕಡಿತ ಮಾಡಲಾಗುತ್ತದೆ. ಅದರಂತೆ ಆರ್​ಸಿಬಿ ಉಳಿದಿರುವ 48 ಕೋಟಿ ರೂ. ಒಳಗೆ  ಉಳಿದ ಆಟಗಾರರನ್ನು ಖರೀದಿಸಬೇಕಾಗುತ್ತದೆ.

8 / 8

Published On - 10:19 pm, Mon, 29 November 21

Follow us