IPL 2022: 7ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ ಯುವ ವೇಗಿ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಕಿಂಗ್ಸ್​

IPL 2022 Mega Auction: ಪೆರಿಯಸಾಮಿ ಮತ್ತು ಟೀಮ್ ಇಂಡಿಯಾ ವೇಗಿ ಟಿ. ನಟರಾಜನ್ ತಮಿಳುನಾಡಿನ ಚಿನ್ನಪ್ಪಂಪಟ್ಟಿ ಗ್ರಾಮದ ನಿವಾಸಿಗಳು ಎಂಬುದು ಮತ್ತೊಂದು ವಿಶೇಷ. (ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

TV9 Web
| Updated By: ಝಾಹಿರ್ ಯೂಸುಫ್

Updated on: Dec 19, 2021 | 4:34 PM

ಎಲ್ಲಾ ಫ್ರಾಂಚೈಸಿಗಳು ಐಪಿಎಲ್ 2022 ರ  ಮೆಗಾ ಹರಾಜಿಗಾಗಿ ಸಿದ್ದತೆಗಳನ್ನು ಆರಂಭಿಸಿದೆ. ಈ ವಿಷಯದಲ್ಲಿ ಪಂಜಾಬ್ ಕಿಂಗ್ಸ್ ಕೂಡ ಹಿಂದೆ ಬಿದ್ದಿಲ್ಲ. ಈ ಬಾರಿ ಕೇವಲ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಪಂಜಾಬ್ ಬಹುತೇಕ ಹೊಸ ಆಟಗಾರರನ್ನು ಖರೀದಿಸುವ ಇರಾದೆಯಲ್ಲಿದೆ. ಅದರಂತೆ ಇದೀಗ ತಮಿಳುನಾಡು ವೇಗಿಯನ್ನು ಟ್ರಯಲ್ಸ್​ಗೆ ಕರೆದಿದೆ.

1 / 8
27 ವರ್ಷದ ತಮಿಳುನಾಡಿನ ವೇಗಿ ಗಣೇಶನ್ ಪೆರಿಯಸಾಮಿ ಪಂಜಾಬ್ ಕಿಂಗ್ಸ್ ಟ್ರಯಲ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್​ ತಂಡದ ಮುಖ್ಯ ಕೋಚ್  ಅನಿಲ್ ಕುಂಬ್ಳೆ ಹಾಗೂ ಇತರರ ಮುಂದಿ ಪೆರಿಯಸಾಮಿ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಹೀಗಾಗಿ ಮೆಗಾ ಹರಾಜಿನಲ್ಲಿ ಗಣೇಶನ್ ಪೆರಿಯಸಾಮಿ ಅವರ ಖರೀದಿಗೆ ಪಂಜಾಬ್ ಕಿಂಗ್ಸ್​ ಬಿಡ್ ಮಾಡುವ ಸಾಧ್ಯತೆಯಿದೆ.

2 / 8
ಪೆರಿಯಸಾಮಿ ಈ ಹಿಂದೆ ಕೂಡ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ 2020 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅಕಾಡೆಮಿಯ  ತಂಡದ ನೆಟ್ ಬೌಲರ್ ಆಗಿ ತೊಡಗಿಸಿಕೊಂಡಿದ್ದರು. ಇದೀಗ ಪಂಜಾಬ್ ಕಿಂಗ್ಸ್​ ಪೆರಿಯಸಾಮಿಯನ್ನು ಖರೀದಿಸುವ ಬಗ್ಗೆ ಆಸಕ್ತಿ ತೋರಿಸಿದ್ದು, ಅದಕ್ಕೂ ಮುನ್ನ ಟ್ರಯಲ್ಸ್ ನಡೆಸಲಾಗಿದೆ.

3 / 8
ತಮಿಳುನಾಡು ಪರ 9 ಟಿ20 ಪಂದ್ಯಗಳನ್ನು ಆಡಿರುವ ಪೆರಿಯಸಾಮಿ  9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಅವರು ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವ ಬೌಲಿಂಗ್ ಆ್ಯಕ್ಷನ್​ನಿಂದ ಎಂಬುದು ವಿಶೇಷ. ಹೌದು, ಪೆರಿಯಸಾಮಿ ಅವರ ಬೌಲಿಂಗ್ ಶೈಲಿ ಯಾರ್ಕರ್ ಮಾಂತ್ರಿಕ ಲಸಿತ್ ಮಾಲಿಂಗ ಅವರನ್ನು ಹೋಲುತ್ತದೆ. ಅಷ್ಟೇ ಅಲ್ಲದೆ ಪೆರಿಯಸಾಮಿ ಕೂಡ ಯಾರ್ಕರ್ ಎಸೆತಗಳಿಗೆ ಎತ್ತಿದ ಕೈ ಎಂಬುದು ವಿಶೇಷ.

4 / 8
 ಅಂದಹಾಗೆ ಪೆರಿಯಸಾಮಿ ಮತ್ತು ಟೀಮ್ ಇಂಡಿಯಾ ವೇಗಿ ಟಿ. ನಟರಾಜನ್ ತಮಿಳುನಾಡಿನ ಚಿನ್ನಪ್ಪಂಪಟ್ಟಿ ಗ್ರಾಮದ ನಿವಾಸಿಗಳು ಎಂಬುದು ಮತ್ತೊಂದು ವಿಶೇಷ. ಇಬ್ಬರೂ ಕಡುಬಡತನದಿಂದಲೇ ಐಪಿಎಲ್​ ತನಕ ಬೆಳೆದು ನಿಂತಿದ್ದಾರೆ. ಆದರೆ ಪೆರಿಯಸಾಮಿ ದೈಹಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಬೆಳೆಯುತ್ತಿರುವುದು ವಿಶೇಷ.

5 / 8
ಏಕೆಂದರೆ ಗಣೇಶನ್ ಪೆರಿಯಸಾಮಿ ತಮ್ಮ 7 ನೇ ವಯಸ್ಸಿನಲ್ಲಿ ಸಿಡುಬು ರೋಗದಿಂದಾಗಿ ಅವರು ತಮ್ಮ ಬಲಗಣ್ಣಿನ ದೃಷ್ಟಿ ಕಳೆದುಕೊಂಡರು. ಇದಾಗ್ಯೂ ಅವರು ಬಾಲ್ಯದಿಂದಲೂ ಕ್ರಿಕೆಟ್ ಅನ್ನು ತನ್ನ ನೆಚ್ಚಿನ ಕ್ರೀಡೆಯಾಗಿ ಆಯ್ಕೆ ಮಾಡಿಕೊಂಡಿದ್ದರು. ಒಂದೇ ಕಣ್ಣಿನ ದೃಷ್ಟಿಯನ್ನು ತನ್ನ ಸಾಮರ್ಥ್ಯವಾಗಿ ಬಳಸಿಕೊಂಡ ಪೆರಿಯಸಾಮಿ ಗುರಿ ಇಡುವುದನ್ನು ಕರಗತ ಮಾಡಿಕೊಂಡರು.

6 / 8
 ಅದರಂತೆ 2019 ರ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಅಪಾಯಕಾರಿ ಬೌಲರ್ ಎನಿಸಿಕೊಂಡಿದ್ದರು. ಏಕೆಂದರೆ ಆ ಸೀಸನ್​ನಲ್ಲಿ ಪೆರಿಯಸಾಮಿ ಉರುಳಿಸಿದ್ದು ಬರೋಬ್ಬರಿ 21 ವಿಕೆಟ್‌ಗಳನ್ನು ಎಂಬುದು ವಿಶೇಷ. ಇದೀಗ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಚೊಚ್ಚಲ ಐಪಿಎಲ್ ಅವಕಾಶ ಗಣೇಶನ್ ಪೆರಿಯಸಾಮಿ ಎದುರು ನೋಡುತ್ತಿದ್ದಾರೆ.

7 / 8
 ಗಣೇಶನ್ ಪೆರಿಯಸಾಮಿ

ಗಣೇಶನ್ ಪೆರಿಯಸಾಮಿ

8 / 8
Follow us
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್

ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ

ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?

ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್