AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಕೊಹ್ಲಿ, ಗಿಲ್ ಅಲ್ಲವೇ ಅಲ್ಲ! ಈ ಸೀಸನ್​ನ ತನ್ನ ನೆಚ್ಚಿನ ಆಟಗಾರನನ್ನು ಹೆಸರಿಸಿದ ಡಿವಿಲಿಯರ್ಸ್

Ab De Villiers: ಈ ಸೀಸನ್​ನ ಅತ್ಯಧಿಕ ರನ್ ಸ್ಕೋರರ್ ಶುಭ್​ಮನ್ ಗಿಲ್ ಹಾಗೂ ತನ್ನ ನೆಚ್ಚಿನ ಗೆಳೆಯ ಕಿಂಗ್ ಕೊಹ್ಲಿಯ ಹೆಸರನ್ನು ಬದಿಗಿಟ್ಟು ರಾಜಸ್ಥಾನ್ ತಂಡದ ಯುವ ಓಪನರ್ ಯಶಸ್ವಿ ಜೈಸ್ವಾಲ್​ರನ್ನು ತನ್ನ ನೆಚ್ಚಿನ ಆಟಗಾರನೆಂದು ಹೇಳಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: May 29, 2023 | 5:12 PM

Share
ಇಂದು ಗುಜರಾತ್ ಹಾಗೂ ಚೆನ್ನೈ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯದೊಂದಿಗೆ ಈ ಬಾರಿಯ ಐಪಿಎಲ್​ಗೆ ವ ರ್ಣರಂಜಿತ ತೆರೆ ಬೀಳುತ್ತಿದೆ. ಈ ನಡುವೆ ಫೈನಲ್​ಗೂ ಮುನ್ನ ಈ ಸೀಸನ್​ನ ತನ್ನ ನೆಚ್ಚಿನ ಆಟಗಾರನನ್ನು ಹೆಸರಿಸಿರುವ ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ರಾಜಸ್ಥಾನ್ ರಾಯಲ್ಸ್ ಓಪನರ್​ ಮೇಲೆ ಒಲವು ತೋರಿದ್ದಾರೆ.

1 / 6
ಫೈನಲ್ ಪಂದ್ಯಕ್ಕೂ ಮುನ್ನ ತನ್ನ ನೆಚ್ಚಿನ ಬ್ಯಾಟರ್ ಬಗ್ಗೆ ಮಾತನಾಡಿರುವ ಎಬಿಡಿ, ಈ ಸೀಸನ್​ನ ಅತ್ಯಧಿಕ ರನ್ ಸ್ಕೋರರ್ ಶುಭ್​ಮನ್ ಗಿಲ್ ಹಾಗೂ ತನ್ನ ನೆಚ್ಚಿನ ಗೆಳೆಯ ಕಿಂಗ್ ಕೊಹ್ಲಿಯ ಹೆಸರನ್ನು ಬದಿಗಿಟ್ಟು ರಾಜಸ್ಥಾನ್ ತಂಡದ ಯುವ ಓಪನರ್ ಯಶಸ್ವಿ ಜೈಸ್ವಾಲ್​ರನ್ನು ತನ್ನ ನೆಚ್ಚಿನ ಆಟಗಾರನೆಂದು ಹೇಳಿಕೊಂಡಿದ್ದಾರೆ.

2 / 6
ಇದಕ್ಕೆ ಸೂಕ್ತ ಕಾರಣವನ್ನು ನೀಡಿರುವ ಮಿ.360, ಈ ಸೀಸನ್​ನಲ್ಲಿ ತನ್ನ ನೆಚ್ಚಿನ ಆಟಗಾರನ ಬಗ್ಗೆ ಹೇಳಬೇಕೆಂದರೆ ಅದು ಯಶಸ್ವಿ ಜೈಸ್ವಾಲ್. ಈತನ ಬತ್ತಳಿಕೆಯಲ್ಲಿ ಎಲ್ಲಾ ರೀತಿಯ ಕ್ರಿಕೆಟ್​ ಶಾಟ್​ಗಳಿವೆ. ಕ್ರಿಕೆಟ್ ಪುಸ್ತಕದ ಎಲ್ಲಾ ಹೊಡೆತಗಳನ್ನು ಈತ ಕರಗತ ಮಾಡಿಕೊಂಡಿದ್ದಾನೆ ಎಂದಿದ್ದಾರೆ.

3 / 6
ಯಶಸ್ವಿ ಮೈದಾನದಲ್ಲಿ ಶಾಂತ ಹಾಗೂ ಸಂಯೋಜಿತ ಮನೋಧರ್ಮದಿಂದ ಬ್ಯಾಟ್ ಬೀಸುತ್ತಾರೆ. ಹೀಗಾಗಿ ಆತನ ಆಟ ನನಗೆ ಇಷ್ಟವಾಗುತ್ತದೆ. ಇನ್ನು ಗಿಲ್ ಹಾಗೂ ಯಶಸ್ವಿ ಇಬ್ಬರನ್ನೂ ನೋಡಿದರೆ, ಈ ಇಬ್ಬರಲ್ಲಿ ಗಿಲ್ ಯಶಸ್ವಿಗಿಂತ ದೊಡ್ಡವರು. ಹೀಗಾಗಿ ಯಶಸ್ವಿಗೆ ಇನ್ನು ಸಾಕಷ್ಟು ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಯಶಸ್ವಿ ಬಳಿ ಶ್ರೇಷ್ಠ ಆಟಗಾರನಾಗುವ ಎಲ್ಲಾ ಅರ್ಹತೆಗಳಿವೆ ಎಂದು ಎಬಿಡಿ ಹೇಳಿದ್ದಾರೆ.

4 / 6
ಇನ್ನು ಈ ಐಪಿಎಲ್​ನಲ್ಲಿ ಯಶಸ್ವಿ ಪ್ರದರ್ಶನವನ್ನು ನೋಡುವುದಾದರೆ, ಆಡಿದ 14 ಪಂದ್ಯಗಳಲ್ಲಿ ಜೈಸ್ವಾಲ್, 163.61 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 625 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಅರ್ಧ ಶತಕ ಹಾಗೂ 1 ಚೊಚ್ಚಲ ಶತಕವೂ ಸೇರಿದೆ. ಇದರೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅತಿವೇಗದ ಅರ್ಧಶತಕ ಸಿಡಿಸಿ ದಾಖಲೆಗಳನ್ನು ಮುರಿದಿದ್ದಾರೆ.

5 / 6
ಈ ಸೀಸನ್​ನಲ್ಲಿ ತನ್ನ ಆಟದಿಂದ ಎಲ್ಲರನ್ನು ಮೆಚ್ಚಿಸದ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಲಂಡನ್‌ಗೆ ತೆರಳಿದ್ದಾರೆ. ಅವರನ್ನು ಬಿಸಿಸಿಐ ತಂಡದ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆ ಮಾಡಿದೆ. ವಾಸ್ತವವಾಗಿ ಜೈಸ್ವಾಲ್ ಅವರು ರುತುರಾಜ್ ಗಾಯಕ್ವಾಡ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದು, ರುತುರಾಜ್ ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿರುವುದರಿಂದ ತಂಡದಿಂದ ಹೊರಗುಳಿದಿದ್ದಾರೆ.

6 / 6