- Kannada News Photo gallery Cricket photos IPL 2023: Arjun Tendulkar fared in IPL debut as MI beat KKR
Arjun Tendulkar: ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ಸಂಕ್ಷಿಪ್ತ ವಿವರ
IPL 2023 Kannada: ಈ ಪಂದ್ಯದಲ್ಲಿ ಕೆಕೆಆರ್ 186 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
Updated on: Apr 16, 2023 | 11:07 PM

IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡಿದ್ದರು. ಕಳೆದ 2 ಸೀಸನ್ಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಸಚಿನ್ ತೆಂಡೂಲ್ಕರ್ ಪುತ್ರನಿಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ.

ಇದೀಗ ತವರು ಮೈದಾನದಲ್ಲೇ ಕಣಕ್ಕಿಳಿಯುವ ಭಾಗ್ಯ ಸಿಕ್ಕಿದೆ. ಅದರಂತೆ ಚೊಚ್ಚಲ ಪಂದ್ಯವಾಡಿದ ಅರ್ಜುನ್ ತೆಂಡೂಲ್ಕರ್ಗೆ ಮೊದಲ ಓವರ್ ಎಸೆಯುವ ಅವಕಾಶ ನೀಡಲಾಗಿತ್ತು.

ಅದರಂತೆ ಕೆಕೆಆರ್ ಆರಂಭಿಕ ಆಟಗಾರ ರಹಮನುಲ್ಲಾ ಗುರ್ಬಾಝ್ಗೆ ಮೊದಲ ಎಸೆತ ಎಸೆದ ಅರ್ಜುನ್ ಯಾವುದೇ ರನ್ ನೀಡಿರಲಿಲ್ಲ. ಇನ್ನು 2ನೇ ಎಸೆತದಲ್ಲಿ 2 ರನ್ ನೀಡಿದರು. 3ನೇ ಎಸೆತದಲ್ಲಿ 1 ರನ್. ನಾಲ್ಕನೇ ಎಸೆತದಲ್ಲಿ ಲೆಗ್ ಬೈ 1 ರನ್. ಐದನೇ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ. ಹಾಗೆಯೇ ಕೊನೆಯ ಎಸೆತದಲ್ಲಿ 1 ರನ್ ನೀಡಿದ್ದರು. ಅಂದರೆ ಅರ್ಜುನ್ ತೆಂಡೂಲ್ಕರ್ ತಮ್ಮ ಮೊದಲ ಓವರ್ನಲ್ಲಿ ನೀಡಿದ್ದು ಕೇವಲ 5 ರನ್ ಮಾತ್ರ.

ಆದರೆ 2ನೇ ಓವರ್ನಲ್ಲಿ ಅರ್ಜುನ್ ತೆಂಡೂಲ್ಕರ್ ದುಬಾರಿಯಾದರು. ಇನಿಂಗ್ಸ್ನ 3ನೇ ಓವರ್ ಎಸೆದ ಅರ್ಜುನ್ ಮೊದಲ 2 ಎಸೆತಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ. ಆದರೆ ಮೂರನೇ ಎಸೆತವನ್ನು ವೈಡ್ ಎಸೆದರು. ಇದಾದ ಬಳಿಕ ವೆಂಕಟೇಶ್ ಅಯ್ಯರ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. 5ನೇ ಎಸೆತದಲ್ಲಿ ವೆಂಕಿ ಫೋರ್ ಬಾರಿಸಿದರೆ, 6ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಓವರ್ನಲ್ಲಿ ಒಟ್ಟು 13 ರನ್ ಬಿಟ್ಟು ಕೊಟ್ಟರು.

ಅಂದರೆ ಚೊಚ್ಚಲ ಪಂದ್ಯದಲ್ಲಿ ಕೇವಲ 2 ಓವರ್ ಬೌಲಿಂಗ್ ಮಾಡಿದ್ದ ಅರ್ಜುನ್ ತೆಂಡೂಲ್ಕರ್ ಒಟ್ಟು 18 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿಲ್ಲ. ಹಾಗೆಯೇ ಆಲ್ರೌಂಡರ್ ಆಗಿದ್ದರೂ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿರಲಿಲ್ಲ. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಅರ್ಜುನ್ಗೆ ಅವಕಾಶ ನೀಡಲಿದ್ದಾರಾ ಕಾದು ನೋಡಬೇಕಿದೆ.

ಇನ್ನು ಈ ಪಂದ್ಯದಲ್ಲಿ ಕೆಕೆಆರ್ 186 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.4 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ಗೆಲುವನ್ನು ಸಂಭ್ರಮಿಸಿದರು.
