AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arjun Tendulkar: ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಪ್ರದರ್ಶನ ಹೇಗಿತ್ತು? ಇಲ್ಲಿದೆ ಸಂಕ್ಷಿಪ್ತ ವಿವರ

IPL 2023 Kannada: ಈ ಪಂದ್ಯದಲ್ಲಿ ಕೆಕೆಆರ್ 186 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

TV9 Web
| Edited By: |

Updated on: Apr 16, 2023 | 11:07 PM

Share
IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡಿದ್ದರು. ಕಳೆದ 2 ಸೀಸನ್​ಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಸಚಿನ್ ತೆಂಡೂಲ್ಕರ್ ಪುತ್ರನಿಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿರಲಿಲ್ಲ.

1 / 6
ಇದೀಗ ತವರು ಮೈದಾನದಲ್ಲೇ ಕಣಕ್ಕಿಳಿಯುವ ಭಾಗ್ಯ ಸಿಕ್ಕಿದೆ. ಅದರಂತೆ ಚೊಚ್ಚಲ ಪಂದ್ಯವಾಡಿದ ಅರ್ಜುನ್ ತೆಂಡೂಲ್ಕರ್​ಗೆ ಮೊದಲ ಓವರ್ ಎಸೆಯುವ ಅವಕಾಶ ನೀಡಲಾಗಿತ್ತು.

2 / 6
ಅದರಂತೆ ಕೆಕೆಆರ್ ಆರಂಭಿಕ ಆಟಗಾರ ರಹಮನುಲ್ಲಾ ಗುರ್ಬಾಝ್​ಗೆ ಮೊದಲ ಎಸೆತ ಎಸೆದ ಅರ್ಜುನ್ ಯಾವುದೇ ರನ್ ನೀಡಿರಲಿಲ್ಲ. ಇನ್ನು 2ನೇ ಎಸೆತದಲ್ಲಿ 2 ರನ್ ನೀಡಿದರು. 3ನೇ ಎಸೆತದಲ್ಲಿ 1 ರನ್. ನಾಲ್ಕನೇ ಎಸೆತದಲ್ಲಿ ಲೆಗ್ ಬೈ 1 ರನ್. ಐದನೇ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ. ಹಾಗೆಯೇ ಕೊನೆಯ ಎಸೆತದಲ್ಲಿ 1 ರನ್ ನೀಡಿದ್ದರು. ಅಂದರೆ ಅರ್ಜುನ್ ತೆಂಡೂಲ್ಕರ್ ತಮ್ಮ ಮೊದಲ ಓವರ್​ನಲ್ಲಿ ನೀಡಿದ್ದು ಕೇವಲ 5 ರನ್​ ಮಾತ್ರ.

3 / 6
ಆದರೆ 2ನೇ ಓವರ್​ನಲ್ಲಿ ಅರ್ಜುನ್ ತೆಂಡೂಲ್ಕರ್ ದುಬಾರಿಯಾದರು. ಇನಿಂಗ್ಸ್​ನ 3ನೇ ಓವರ್​ ಎಸೆದ ಅರ್ಜುನ್ ಮೊದಲ 2 ಎಸೆತಗಳಲ್ಲಿ ಯಾವುದೇ ರನ್ ನೀಡಿರಲಿಲ್ಲ. ಆದರೆ ಮೂರನೇ ಎಸೆತವನ್ನು ವೈಡ್ ಎಸೆದರು. ಇದಾದ ಬಳಿಕ ವೆಂಕಟೇಶ್ ಅಯ್ಯರ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. 5ನೇ ಎಸೆತದಲ್ಲಿ ವೆಂಕಿ ಫೋರ್ ಬಾರಿಸಿದರೆ, 6ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಈ ಓವರ್​ನಲ್ಲಿ ಒಟ್ಟು 13 ರನ್​ ಬಿಟ್ಟು ಕೊಟ್ಟರು.

4 / 6
ಅಂದರೆ ಚೊಚ್ಚಲ ಪಂದ್ಯದಲ್ಲಿ ಕೇವಲ 2 ಓವರ್​ ಬೌಲಿಂಗ್ ಮಾಡಿದ್ದ ಅರ್ಜುನ್ ತೆಂಡೂಲ್ಕರ್ ಒಟ್ಟು 18 ರನ್ ನೀಡಿದರೂ ಯಾವುದೇ ವಿಕೆಟ್ ಪಡೆದಿಲ್ಲ. ಹಾಗೆಯೇ ಆಲ್​ರೌಂಡರ್​ ಆಗಿದ್ದರೂ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿರಲಿಲ್ಲ. ಇದಾಗ್ಯೂ ಮುಂದಿನ ಪಂದ್ಯದಲ್ಲಿ ಅರ್ಜುನ್​ಗೆ ಅವಕಾಶ ನೀಡಲಿದ್ದಾರಾ ಕಾದು ನೋಡಬೇಕಿದೆ.

5 / 6
ಇನ್ನು ಈ ಪಂದ್ಯದಲ್ಲಿ ಕೆಕೆಆರ್ 186 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 17.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇದರೊಂದಿಗೆ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ಗೆಲುವನ್ನು ಸಂಭ್ರಮಿಸಿದರು.

6 / 6
Follow Us
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ

ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ

ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ

ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?

‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ

ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ