- Kannada News Photo gallery Cricket photos IPL 2023 Auction: Kane Williamson and Ajinkya Rahane Sold Kannada News zp
IPL 2023 Auction: ಮೂಲಬೆಲೆಗೆ ಮಾರಾಟವಾದ ವಿಲಿಯಮ್ಸನ್-ರಹಾನೆ
IPL 2023 Auction Kane Williamson and Ajinkya Rahane: ಮುಂದಿನ ಸೀಸನ್ ಐಪಿಎಲ್ನಲ್ಲಿ ಕೇನ್ ವಿಲಿಯಮ್ಸನ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಹಾಗೆಯೇ ಧೋನಿ ಬಳಗದಲ್ಲಿ ಅಜಿಂಕ್ಯ ರಹಾನೆ ಕಾಣಿಸಿಕೊಳ್ಳಲಿದ್ದಾರೆ.
Updated on:Dec 23, 2022 | 4:54 PM

ಐಪಿಎಲ್ ಸೀಸನ್ 16ನ ಮಿನಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ನ್ಯೂಜಿಲೆಂಡ್ನ ಹಿರಿಯ ಆಟಗಾರ ಕೇನ್ ವಿಲಿಯಮ್ಸನ್ ಹಾಗೂ ಭಾರತದ ಆಟಗಾರ ಅಜಿಂಕ್ಯ ರಹಾನೆ ಉತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ.

ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ವಿಲಿಯಮ್ಸನ್ ಅವರನ್ನು ಈ ಬಾರಿ ಎಸ್ಆರ್ಹೆಚ್ ತಂಡವು ರಿಲೀಸ್ ಮಾಡಿತ್ತು. ಅದರಂತೆ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕೇನ್ ವಿಲಿಯಮ್ಸನ್ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ಬೇಸ್ ಪ್ರೈಸ್ (2 ಕೋಟಿ ರೂ.) ನೀಡಿ ಖರೀದಿಸಿದೆ.

ಮತ್ತೊಂದೆಡೆ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅಜಿಂಕ್ಯ ರಹಾನೆ ಅವರ ಖರೀದಿಗೆ ಯಾವುದೇ ಪೈಪೋಟಿ ಕಂಡು ಬಂದಿರಲಿಲ್ಲ. ಇದಾಗ್ಯೂ ಅಂತಿಮ ಹಂತದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 50 ಲಕ್ಷ ರೂ. ಗೆ ಅಜಿಂಕ್ಯ ರಹಾನೆ ಅವರನ್ನು ಖರೀದಿಸಿದೆ.

ಅದರಂತೆ ಮುಂದಿನ ಸೀಸನ್ ಐಪಿಎಲ್ನಲ್ಲಿ ಕೇನ್ ವಿಲಿಯಮ್ಸನ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಹಾಗೆಯೇ ಧೋನಿ ಬಳಗದಲ್ಲಿ ಅಜಿಂಕ್ಯ ರಹಾನೆ ಕಾಣಿಸಿಕೊಳ್ಳಲಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೆವಾಟಿಯಾ, ರಶೀದ್ ಖಾನ್, ವಿಜಯ್ ಶಂಕರ್, ಆರ್ ಸಾಯಿ ಕಿಶೋರ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ರಿ ಜೋಸೆಫ್ ದಯಾಳ್, ನೂರ್ ಅಹಮದ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್, ಕೇನ್ ವಿಲಿಯಮ್ಸನ್

ಸಿಎಸ್ಕೆ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ), ಡ್ವೇನ್ ಕಾನ್ವೆ, ರುತುರಾಜ್ ಗಾಯಕ್‌ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹೆಂಗರೇಕರ್, ಡಿವೈನ್ ಪ್ರೋಟಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಮುಕೇಶಿ ದೇಶಪಾಂಡೆ. ಸಿಮರ್ಜಿತ್ ಸಿಂಗ್, ದೀಪಕ್ ಚಹಾರ್, ಪ್ರಶಾಂತ್ ಸೋಲಂಕಿ, ಮಹಿಷ್ ತೀಕ್ಷಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್
Published On - 3:18 pm, Fri, 23 December 22



















