AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 10 ತಂಡಗಳು ಮಿನಿ ಹರಾಜಿನಲ್ಲಿ ಯಾರನ್ನು ಖರೀದಿಸಬಹುದು? ಇಲ್ಲಿದೆ ಡಿಟೇಲ್ಸ್

IPL 2023 Auction: ಈ ಪಟ್ಟಿಯಿಂದ ಕೆಲ ಸ್ಟಾರ್ ಆಟಗಾರರನ್ನು ಖರೀದಿಸಲು 10 ಫ್ರಾಂಚೈಸಿಗಳ ನಡುವೆ ಪೈಪೋಟಿ ಕಂಡು ಬರಲಿದೆ. ಅವರಲ್ಲಿ ಪ್ರತಿ ತಂಡಗಳ ಟಾರ್ಗೆಟ್ ಯಾರಾಗಲಿದ್ದಾರೆ ಎಂದು ನೋಡುವುದಾದರೆ...

TV9 Web
| Edited By: |

Updated on: Dec 04, 2022 | 10:10 PM

Share
IPL 2023 Auction: ಐಪಿಎಲ್ ಸೀಸನ್ 16 ಮಿನಿ ಹರಾಜಿಗಾಗಿ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 23 ರಂದು ನಡೆಯಲಿರುವ ಬಿಡ್ಡಿಂಗ್​ಗಾಗಿ ಒಟ್ಟು 991 ಆಟಗಾರರು ಹೆಸರು ನೀಡಿದ್ದಾರೆ. ಇವರಲ್ಲಿ 185 ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರಿದ್ದಾರೆ.

1 / 12
ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ 19 ಭಾರತೀಯ ಆಟಗಾರರು ಹಾಗೂ 166 ವಿದೇಶಿ ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಈ ಪಟ್ಟಿಯಿಂದ ಕೆಲ ಸ್ಟಾರ್ ಆಟಗಾರರನ್ನು ಖರೀದಿಸಲು 10 ಫ್ರಾಂಚೈಸಿಗಳ ನಡುವೆ ಪೈಪೋಟಿ ಕಂಡು ಬರಲಿದೆ. ಅವರಲ್ಲಿ ಪ್ರತಿ ತಂಡಗಳ ಟಾರ್ಗೆಟ್ ಯಾರಾಗಲಿದ್ದಾರೆ ಎಂದು ನೋಡುವುದಾದರೆ...

2 / 12
1. ಬೆನ್ ಸ್ಟೋಕ್ಸ್:  ಇಂಗ್ಲೆಂಡ್ ಆಲ್​ರೌಂಡರ್ ಖರೀದಿಗೆ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿ ಪೈಪೋಟಿ ನಡೆಸುವ ಸಾಧ್ಯತೆ ಹೆಚ್ಚು. ಏಕೆಂದರೆ ಈಗಾಗಲೇ ಎಸ್​ಆರ್​ಹೆಚ್ ತಂಡವು ಕೇನ್ ವಿಲಿಯಮ್ಸನ್ ಅವರನ್ನು ರಿಲೀಸ್ ಮಾಡಿದೆ. ಹೀಗಾಗಿ ಬೆನ್ ಸ್ಟೋಕ್ಸ್​ರನ್ನು ಖರೀದಿಸಿ ಹೊಸ ನಾಯಕನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.

3 / 12
2. ಕ್ಯಾಮರೂನ್ ಗ್ರೀನ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಾರ್ಗೆಟ್ ಲೀಸ್ಟ್​ನಲ್ಲಿ ಆಸ್ಟ್ರೇಲಿಯಾದ ಯುವ ಆಲ್​ರೌಂಡರ್ ಕ್ಯಾಮರೂನ್ ಗ್ರೀನ್ ಇರುವುದನ್ನು ಕೋಚ್ ರಿಕಿ ಪಾಂಟಿಂಗ್ ಖಚಿತಪಡಿಸಿದ್ದಾರೆ. ಹೀಗಾಗಿ ಗ್ರೀನ್​ ಖರೀದಿಗೆ ಡೆಲ್ಲಿ ತಂಡವು ಇನ್ನಿಲ್ಲದ ಪ್ರಯತ್ನ ನಡೆಸಲಿದೆ.

4 / 12
3. ಸ್ಯಾಮ್ ಕರನ್: ಪಂಜಾಬ್ ಕಿಂಗ್ಸ್ ತಂಡವು ಇಂಗ್ಲೆಂಡ್ ಆಲ್​ರೌಂಡರ್ ಸ್ಯಾಮ್ ಕರನ್ ಖರೀದಿಗೆ ಹೆಚ್ಚಿನ ಆಸಕ್ತಿ ಹೊಂದಿದೆ. ಏಕೆಂದರೆ ಕಳೆದ ಬಾರಿ ಆಯ್ಕೆಯಾದ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರ ಜೊತೆಗಾರನಾಗಿರುವ ಸ್ಯಾಮ್ ಕರನ್​ಗೂ ಮಣೆಹಾಕುವ ಸಾಧ್ಯತೆ ಹೆಚ್ಚಿದೆ.

5 / 12
4. ಕೇನ್ ವಿಲಿಯಮ್ಸನ್: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸದ್ಯ ಅವಶ್ಯಕತೆ ಇರುವುದು ಧೋನಿಯ ಉತ್ತರಾಧಿಕಾರಿ ಎಂದರೆ ತಪ್ಪಾಗಲಾರದು. ಹೀಗಾಗಿಯೇ ನ್ಯೂಜಿಲೆಂಡ್ ತಂಡದ ಕೂಲ್ ಕ್ಯಾಪ್ಟನ್ ಎನಿಸಿಕೊಂಡಿರುವ ಕೇನ್ ವಿಲಿಯಮ್ಸನ್ ಅವರನ್ನು ಸಿಎಸ್​ಕೆ ಟಾರ್ಗೆಟ್ ಮಾಡಬಹುದು.

6 / 12
5. ಮಯಾಂಕ್ ಅಗರ್ವಾಲ್: ಲಕ್ನೋ ಸೂಪರ್ ಜೈಂಟ್ಸ್ ತಂಡವು ನಾಯಕ ಕೆಎಲ್ ರಾಹುಲ್ ಅವರ ಆಪ್ತ ಮಯಾಂಕ್ ಅಗರ್ವಾಲ್ ಖರೀದಿಗೆ ಮುಂದಾಗಬಹುದು. ಏಕೆಂದರೆ ಈ ಜೋಡಿಯು ಅತ್ಯುತ್ತಮ ಆರಂಭಿಕ ಜೋಡಿಯಾಗಿ ಗುರುತಿಸಿಕೊಂಡಿದೆ. ಹೀಗಾಗಿ ಲಕ್ನೋ ತಂಡವು ಮಯಾಂಕ್ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸಲಿದೆ.

7 / 12
6. ಮನೀಶ್ ಪಾಂಡೆ: ರಾಜಸ್ಥಾನ್ ರಾಯಲ್ಸ್ ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ, ಮಧ್ಯಮ ಕ್ರಮಾಂಕ ಬಲಿಷ್ಠವಾಗಿಲ್ಲ. ಹೀಗಾಗಿ ಎಸ್​ಆರ್​ಹೆಚ್ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟರ್ ಮನೀಷ್ ಪಾಂಡೆಗೆ ರಾಜಸ್ಥಾನ್ ರಾಯಲ್ಸ್ ಮಣೆಹಾಕಬಹುದು.

8 / 12
7. ರೀಸ್ ಟೋಪ್ಲಿ: ಗುಜರಾತ್ ಟೈಟಾನ್ಸ್ ತಂಡವು ಲಾಕಿ ಫರ್ಗುಸನ್ ಅವರನ್ನು ಕೆಕೆಆರ್ ತಂಡಕ್ಕೆ ನೀಡಿದೆ. ಹೀಗಾಗಿ ಅವರ ಬದಲಿ ವಿದೇಶಿ ಆಟಗಾರನನ್ನು ಖರೀದಿಸುವುದು ಖಚಿತ. ಅದರಲ್ಲೂ ಇಂಗ್ಲೆಂಡ್​ನ ಎಡಗೈ ವೇಗಿ ರೀಸ್ ಟೋಪ್ಲಿ ಗುಜರಾತ್ ಟೈಟಾನ್ಸ್ ತಂಡ ಟಾರ್ಗೆಟ್​​ ಲೀಸ್ಟ್​ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

9 / 12
8. ಶಿವಂ ಮಾವಿ: ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್​ನಲ್ಲಿ ಮಿಂಚಿದರೂ, ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಈ ಬಾರಿ ಜಸ್​ಪ್ರೀತ್ ಬುಮ್ರಾ ಹಾಗೂ ಜೋಫ್ರಾ ಆರ್ಚರ್ ಜೊತೆಯಾಗುತ್ತಿದ್ದಾರೆ. ಇವರ ಜೊತೆಗೆ ಮತ್ತೋರ್ವ ಭಾರತೀಯ ವೇಗಿಯ ಅವಶ್ಯಕತೆ ಮುಂಬೈಗಿದೆ. ಹೀಗಾಗಿ 140 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಶಿವಂ ಮಾವಿಗೆ ಮುಂಬೈ ಮಣೆಹಾಕಬಹುದು.

10 / 12
9. ನಾರಾಯಣ್ ಜಗದೀಸನ್: ಈ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ 8 ಪಂದ್ಯಗಳಿಂದ ನಾರಾಯಣ್ ಜಗದೀಸನ್ ಕಲೆಹಾಕಿದ್ದು ಬರೋಬ್ಬರಿ 830 ರನ್​ಗಳು. ಇತ್ತ ಕೆಕೆಆರ್ ತಂಡವು ವಿಕೆಟ್ ಕೀಪರ್ ಬ್ಯಾಟರ್​ನ ಖರೀದಿಯನ್ನು ಎದುರು ನೋಡುತ್ತಿದೆ. ಅವರ ಮುಂದಿರುವ ಅತ್ಯುತ್ತಮ ಆಯ್ಕೆಯೆಂದರೆ ನಾರಾಯಣ್ ಜಗದೀಸನ್. ಹೀಗಾಗಿ ಚೆನ್ನೈ ಆಟಗಾರ ಕೆಕೆಆರ್​ ಪಾಲಾಗುವ ಸಾಧ್ಯತೆ ಹೆಚ್ಚಿದೆ.

11 / 12
10. ವಾಸುಕಿ ಕೌಶಿಕ್: ಕರ್ನಾಟಕದ ವೇಗಿ ವಿ. ಕೌಶಿಕ್ ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ 9 ಪಂದ್ಯಗಳಿಂದ 18 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇತ್ತ ಮೊಹಮ್ಮದ್ ಸಿರಾಜ್ ಹೊರತುಪಡಿಸಿ ಮತ್ತೋರ್ವ ಭಾರತೀಯ ವೇಗಿಯ ಹುಡುಕಾಟದಲ್ಲಿರುವ ಆರ್​ಸಿಬಿ ವಾಸುಕಿ ಕೌಶಿಕ್​ ಅವರ ಖರೀದಿಗೆ ಮುಂದಾಗಬಹುದು. ಏಕೆಂದರೆ ಈ ಬಾರಿ ಬೆಂಗಳೂರಿನಲ್ಲೂ ಪಂದ್ಯಗಳು ನಡೆಯಲಿದ್ದು, ಅದಕ್ಕಾಗಿ ಸ್ಥಳೀಯ ಬೌಲರ್​ನ ಅವಶ್ಯಕತೆ ಆರ್​ಸಿಬಿ ತಂಡಕ್ಕಿದೆ.

12 / 12
TV9 Web
TV9 Web

TV9 Kannada

Read More
Follow Us
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್

ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ

ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ

ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ

ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ

ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್

ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!

'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ

ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?