- Kannada News Photo gallery Cricket photos Kannada News | IPL 2023 Car Winner: Who won the 'Super Striker' of the IPL 2023
IPL 2023 Car Winner: RCB ಆಟಗಾರನ ಪಾಲಾದ ಟಾಟಾ ಕಾರ್
IPL 2023 Car Winner: 16ನೇ ಸೀಸನ್ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
Updated on:May 30, 2023 | 3:15 AM

IPL 2023 Car Winner: ಐಪಿಎಲ್ ಸೀಸನ್ 16 ಮುಕ್ತಾಯವಾಗಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇನ್ನು ಬ್ಯಾಟಿಂಗ್ ಮೂಲಕ ಇಡೀ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್ನಲ್ಲಿ 27 ವಿಕೆಟ್ ಪಡೆದ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ಪಡೆದಿದ್ದಾರೆ.

ಹಾಗೆಯೇ ಐಪಿಎಲ್ ಸೀಸನ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕಾರ್ (or 10 ಲಕ್ಷ ರೂ.) ಈ ಬಾರಿ ಆಲ್ರೌಂಡರ್ ಆಟಗಾರನ ಪಾಲಾಗಿರುವುದು ವಿಶೇಷ.

ಹೌದು, ಸೂಪರ್ ಸ್ಟ್ರೈಕರ್ಗೆ ಘೋಷಿಸಲಾಗಿದ್ದ ಟಾಟಾ ಟಿಯಾಗೊ ಇವಿ ಕಾರ್ RCB ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಪಾಲಾಗಿದೆ.

ಆರ್ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್ವೆಲ್ ಈ ಬಾರಿ 14 ಇನಿಂಗ್ಸ್ಗಳಲ್ಲಿ 400 ರನ್ ಬಾರಿಸಿದ್ದರು. ಅದು ಕೂಡ 183.48 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ.

ಈ ಮೂಲಕ ಈ ಸೀಸನ್ನ ಸೂಪರ್ ಸ್ಟ್ರೈಕರ್ ಆಗಿ ಗ್ಲೆನ್ ಮ್ಯಾಕ್ಸ್ವೆಲ್ ಹೊರಹೊಮ್ಮಿದ್ದಾರೆ. ಅದರಂತೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರ್ ಅನ್ನು ಆರ್ಸಿಬಿ ಆಲ್ರೌಂಡರ್ ತಮ್ಮದಾಗಿಸಿಕೊಂಡಿದ್ದಾರೆ.
Published On - 3:15 am, Tue, 30 May 23
