IPL 2023 Winner: ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ಸ್

IPL 2023 Final CSK vs GT: 8ನೇ ಓವರ್​ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಆರಂಭದ 12 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ಆದರೆ ತಂಡದ ಮೊತ್ತ 100ರ ಗಡಿದಾಟುತ್ತಿದ್ದಂತೆ ಸಾಯಿ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು.

| Updated By: ಝಾಹಿರ್ ಯೂಸುಫ್

Updated on:May 30, 2023 | 3:47 AM

IPL 2023 Final CSK vs GT: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ​ 16ನೇ ಸೀಸನ್ ಫೈನಲ್​ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಐಪಿಎಲ್​ನಲ್ಲಿ 5 ಬಾರಿ ಟ್ರೋಫಿ ಗೆದ್ದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಸಿಎಸ್​ಕೆ ತಂಡದ ನಾಯಕ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿದ್ದರು.

1 / 8
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್​ಮನ್ ಗಿಲ್ (39) ಹಾಗೂ ವೃದ್ಧಿಮಾನ್ ಸಾಹ (54) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಗಿಲ್ ಔಟಾದ ಬಳಿಕ ಕ್ರೀಸ್​ಗೆ ಆಗಮಿಸಿದ ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

2 / 8
8ನೇ ಓವರ್​ ವೇಳೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಆರಂಭದ 12 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 10 ರನ್ ಮಾತ್ರ. ಆದರೆ ತಂಡದ ಮೊತ್ತ 100ರ ಗಡಿದಾಟುತ್ತಿದ್ದಂತೆ ಸಾಯಿ ಕೂಡ ಬ್ಯಾಟಿಂಗ್ ಗೇರ್ ಬದಲಿಸಿದರು. ಸಾಯಿಯ ಅಬ್ಬರ ಶುರುವಾಗುತ್ತಿದ್ದಂತೆ ಅತ್ತ ಸಿಎಸ್​ಕೆ ಬೌಲರ್​ಗಳು ಲಯ ತಪ್ಪಿದರು.

3 / 8
ಪರಿಣಾಮ 33 ಎಸೆತಗಳಲ್ಲಿ ಸಾಯಿ ಸುದರ್ಶನ್ ಅರ್ಧಶತಕ ಪೂರೈಸಿದರು. ಈ ವೇಳೆ ಕ್ರೀಸ್​ಗೆ ಆಗಮಿಸಿದ ಹಾರ್ದಿಕ್ ಪಾಂಡ್ಯ ಯುವ ಆಟಗಾರನಿಗೆ ಮನಸೊ ಇಚ್ಛೆ ಬ್ಯಾಟ್ ಬೀಸುವಂತೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅಲ್ಲಿಂದ ಶುರುವಾದ ಸಾಯಿ ಸುದರ್ಶನ್ ಸಿಡಿಲಬ್ಬರಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್​ಗಳು ಪರದಾಡಿದರು.

4 / 8
19ನೇ ಓವರ್​ವರೆಗೂ ಸಿಡಿಲಬ್ಬರ ಮುಂದುವರೆಸಿದ ಸಾಯಿ ಇನ್ನೇನು ಶತಕ ಪೂರೈಸಲಿದ್ದಾರೆ ಅನ್ನುವಷ್ಟರಲ್ಲಿ ಮತೀಶ ಪತಿರಾಣ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಆದರೆ ಅದಾಗಲೇ ಕೇವಲ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ನೊಂದಿಗೆ ಸಾಯಿ ಸುದರ್ಶನ್ 96 ರನ್ ಚಚ್ಚಿದ್ದರು. ಪರಿಣಾಮ ಸಿಎಸ್​ಕೆ ತಂಡವು ನಿಗದಿತ 20 ಓವರ್​ಗಳಲ್ಲಿ 214 ರನ್​ಗಳಿಸಲು ಸಾಧ್ಯವಾಯಿತು.

5 / 8
215 ರನ್​ಗಳ ಗುರಿಯೊಂದಿಗೆ ಇನಿಂಗ್ಸ್​ ಆರಂಭಿಸಿದ ಸಿಎಸ್​ಕೆಗೆ ವರುಣ ಅಡ್ಡಿಯಾದನು. ಹೀಗಾಗಿ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್​ಗಳ ಕಡಿತದೊಂದಿಗೆ ಪಂದ್ಯ ಮುಂದುವರೆಸಲಾಯಿತು. ಅದರಂತೆ ಸಿಎಸ್​ಕೆ ತಂಡಕ್ಕೆ 15 ಓವರ್​ಗಳಲ್ಲಿ 171 ರನ್​ಗಳ ಗುರಿ ನೀಡಲಾಯಿತು.

6 / 8
ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ತಂಡವು ಕೊನೆಯ ಓವರ್​ನಲ್ಲಿ 13 ರನ್​ ಗಳಿಸಬೇಕಿತ್ತು. ಅದರಲ್ಲೂ ಕೊನೆಯ 2 ಎಸೆತಗಳಲ್ಲಿ 10 ರನ್​ ಬೇಕಿದ್ದ ವೇಳೆ ರವೀಂದ್ರ ಜಡೇಜಾ ಸಿಕ್ಸ್ ಹಾಗೂ ಫೋರ್ ಬಾರಿಸುವ ಮೂಲಕ ಸಿಎಸ್​ಕೆ ತಂಡಕ್ಕೆ 5 ವಿಕೆಟ್​​ಗಳ ಜಯ ತಂದುಕೊಟ್ಟರು.

7 / 8
ಈ ಜಯದೊಂದಿಗೆ ಸಿಎಸ್​ಕೆ ತಂಡವು 5ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಮಾತ್ರ ಐಪಿಎಲ್​ನಲ್ಲಿ 5 ಬಾರಿ ಚಾಂಪಿಯನ್ ಆಗಿತ್ತು. ಇದೀಗ 5ನೇ ಸಲ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಧೋನಿ ಪಡೆ ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನು ಸರಿಗಟ್ಟಿದೆ.

8 / 8

Published On - 1:34 am, Tue, 30 May 23

Follow us
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ

ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ

ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್

ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ

ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ

ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು

ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್