IPL 2023: ವಿರಾಟ್ ಕೊಹ್ಲಿ ನಾಯಕ, ಫಾಫ್ ಸೂಪರ್ ಸಬ್: RCB ತಂಡದ ಮಾಸ್ಟರ್​ ಪ್ಲ್ಯಾನ್..!

| Updated By: ಝಾಹಿರ್ ಯೂಸುಫ್

Updated on: Apr 20, 2023 | 9:53 PM

IPL 2023 Kannada: ಫಾಫ್ ಡುಪ್ಲೆಸಿಸ್ ಹೊರಗುಳಿದರೆ ಬದಲಿ ನಾಯಕನನ್ನು ಆಯ್ಕೆ ಮಾಡಬೇಕು. ಅದರಲ್ಲೂ ಭರ್ಜರಿ ಫಾರ್ಮ್​ನಲ್ಲಿರುವ ಡುಪ್ಲೆಸಿಸ್ ಬದಲಿಗೆ ಹೊಸ ಆರಂಭಿಕನನ್ನು ಕಣಕ್ಕಿಳಿಸಬೇಕಿತ್ತು. ಇದರಿಂದ ತಂಡದ ಪ್ಲೇಯಿಂಗ್ ಇಲೆವೆನ್​​ನಲ್ಲೂ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.

1 / 8
IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ಹೊಸ ಚಿಂತೆಯೊಂದು ಶುರುವಾಗಿತ್ತು. ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನ ಕಾರಣ 20 ಓವರ್​ಗಳ ಫೀಲ್ಡಿಂಗ್ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ.IPL 2023: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ಹೊಸ ಚಿಂತೆಯೊಂದು ಶುರುವಾಗಿತ್ತು. ತಂಡದ ನಾಯಕ ಫಾಫ್ ಡುಪ್ಲೆಸಿಸ್ ಪೆಕ್ಕೆಲುಬಿನ ನೋವಿನ ಕಾರಣ 20 ಓವರ್​ಗಳ ಫೀಲ್ಡಿಂಗ್ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ.

2 / 8
ಇತ್ತ ಫಾಫ್ ಡುಪ್ಲೆಸಿಸ್ ಹೊರಗುಳಿದರೆ ಬದಲಿ ನಾಯಕನನ್ನು ಆಯ್ಕೆ ಮಾಡಬೇಕು. ಅದರಲ್ಲೂ ಭರ್ಜರಿ ಫಾರ್ಮ್​ನಲ್ಲಿರುವ ಡುಪ್ಲೆಸಿಸ್ ಬದಲಿಗೆ ಹೊಸ ಆರಂಭಿಕನನ್ನು ಕಣಕ್ಕಿಳಿಸಬೇಕಿತ್ತು. ಇದರಿಂದ ತಂಡದ ಪ್ಲೇಯಿಂಗ್ ಇಲೆವೆನ್​​ನಲ್ಲೂ ಮಹತ್ವದ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.

3 / 8
ಆದರೆ ಈ ಇಲ್ಲಿ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್ ಮಾಡಿದ ಒಂದೇ ಒಂದು ಮಾಸ್ಟರ್​ ಪ್ಲ್ಯಾನ್ ಎಲ್ಲಾ ಸಮಸ್ಯೆಗೂ ಪರಿಹಾರ ನೀಡಿದೆ. ಅದರಂತೆ ಫಾಫ್ ಡುಪ್ಲೆಸಿಸ್ ಕಣಕ್ಕಿಳಿದರು. ಆದರೆ ನಾಯಕನಾಗಿ ಅಲ್ಲ ಎಂಬುದಷ್ಟೇ ವ್ಯತ್ಯಾಸ.

4 / 8
ಅಂದರೆ ಫಾಫ್ ಡುಪ್ಲೆಸಿಸ್ ಕೇವಲ ಬ್ಯಾಟ್ಸ್​ಮನ್ ಆಗಿ ಕಣಕ್ಕಿಳಿಸಿತು. ಅತ್ತ ವಿರಾಟ್ ಕೊಹ್ಲಿಗೆ ನಾಯಕನ ಜವಾಬ್ದಾರಿ ನೀಡಲಾಗಿತ್ತು. ಇತ್ತ ಫಾಫ್ ಡುಪ್ಲೆಸಿಸ್ ಅವರ ಬ್ಯಾಟಿಂಗ್ ಮುಗಿಯುತ್ತಿದ್ದಂತೆ ಇಂಪ್ಯಾಕ್ಟ್ ಸಬ್​ ಆಯ್ಕೆಯ ಮೂಲಕ ಬೌಲರ್​ನನ್ನು ಕಣಕ್ಕಿಳಿಸಲು ಆರ್​ಸಿಬಿ ಪ್ಲ್ಯಾನ್ ರೂಪಿಸಿತು.

5 / 8
ಅದರಂತೆ ಆರ್​ಸಿಬಿ ಪರ ಎಂದಿನಂತೆ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸಿದರು. ನಿರೀಕ್ಷೆಯಂತೆ ಈ ಬಾರಿ ಕೂಡ ಈ ಜೋಡಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಅದರಲ್ಲೂ ಮೊದಲ ವಿಕೆಟ್​ಗೆ 137 ರನ್​ಗಳ ಜೊತೆಯಾಟವಾಡುವ ಮೂಲಕ ಅಬ್ಬರಿಸಿದರು.

6 / 8
ಇತ್ತ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫಾಫ್ ಡುಪ್ಲೆಸಿಸ್ 56 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 84 ರನ್​ ಕಲೆಹಾಕಿದರು. ಈ ಸ್ಪೋಟಕ ಇನಿಂಗ್ಸ್​ ನೆರವಿನಿಂದ ಆರ್​ಸಿಬಿ 4 ವಿಕೆಟ್ ನಷ್ಟಕ್ಕೆ 174 ರನ್​ ಕಲೆಹಾಕಿತು.

7 / 8
ಅಷ್ಟೇ ಅಲ್ಲದೆ ಬ್ಯಾಟಿಂಗ್ ಬಳಿಕ ಡುಪ್ಲೆಸಿಸ್ ಬದಲಿಗೆ ವೇಗಿ ವೈಶಾಕ್ ವಿಜಯಕುಮಾರ್ ಅವರನ್ನು ಇಂಪ್ಯಾಕ್ಟ್ ಸಬ್​ ಆಗಿ ಕಣಕ್ಕಿಳಿಸಲಾಯಿತು. ಅತ್ತ ಆರ್​ಸಿಬಿ ನಾಯಕನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಯ್ಕೆ ಮಾಡುವ ಮೂಲಕ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿತು.

8 / 8
ಪರಿಣಾಮ ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ 24 ರನ್​ಗಳ ಭರ್ಜರಿ ಜಯ ಸಾಧಿಸಿತು. ಅತ್ತ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಡಗೌಟ್​ನಲ್ಲಿ ಕೂತು ಗೆಲುವಿನ ನಗೆ ಬೀರಿದರು.