ಮೊಹಾಲಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ 38ನೇ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ಮತ್ತೊಮ್ಮೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಈ ಐಪಿಎಲ್‌ನಲ್ಲಿ ತಮ್ಮ ನಾಲ್ಕನೇ ಅರ್ಧಶತಕ ಸಿಡಿಸಿದ್ದಾರೆ.
ತಮ್ಮ ಇನ್ನಿಂಗ್ಸ್ನಲ್ಲಿ ಒಟ್ಟು 24 ಎಸೆತಗಳನ್ನು ಎದುರಿಸಿದ ಮೇಯರ್ಸ್ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 54 ರನ್ ಚಚ್ಚಿದರು.
ಅದರಲ್ಲೂ ಮೇಯರ್ಸ್ ಅವರ ಈ ಅರ್ಧಶತಕ ಕೇವಲ 11 ಎಸೆತಗಳಲ್ಲಿ ಅಂದರೆ ಬೌಂಡರಿಗಳಿಂದಲೇ ಬಂದಿತು. ಅಂತಿಮವಾಗಿ ರಬಾಡ ಎಸೆದ ಪವರ್ ಪ್ಲೇ ಓವರ್ನಲ್ಲಿ ಮೇಯರ್ಸ್ ವಿಕೆಟ್ ಒಪ್ಪಿಸಿದರು.
ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡುತ್ತಿರುವ ಮೇಯರ್ಸ್, ಈ ಸೀಸನ್ನಲ್ಲಿ ನಾಲ್ಕನೇ ಬಾರಿಗೆ ಅರ್ಧಶತಕ ಪೂರೈಸಿದರು. ಅದರಲ್ಲೂ ಸತತ ಎರಡು ಅರ್ಧಶತಕ ಬಾರಿಸಿ ಸೀಸನ್ ಆರಂಭಿಸಿದ್ದರು.
ಮೇಯರ್ಸ್ ಇದುವರೆಗೆ 8 ಇನ್ನಿಂಗ್ಸ್‌ಗಳನ್ನಾಡಿದ್ದು, 160ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ 297 ರನ್ ಬಾರಿಸಿದ್ದಾರೆ. ಅವರು ಇದುವರೆಗೆ 26 ಬೌಂಡರಿ ಹಾಗೂ 20 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.
Published On - 9:14 pm, Fri, 28 April 23