IPL 2023: ಐಪಿಎಲ್ ಇತಿಹಾಸದಲ್ಲಿ ಅಜೇಯ 99 ರನ್​ ಬಾರಿಸಿದ 4 ಆಟಗಾರರಿವರು

|

Updated on: Apr 10, 2023 | 3:34 PM

IPL 2023: ಪಂಜಾಬ್ ಪರ ಅಜೇಯ 99 ರನ್ ಬಾರಿಸಿದ ಧವನ್ ಐಪಿಎಲ್​ನಲ್ಲಿ 1 ರನ್​ಗಳಿಂದ ಶತಕ ವಂಚಿತರಾಗಿ ಉಳಿದ 4ನೇ ಆಟಗಾರ ಎನಿಸಿಕೊಂಡರು.

1 / 7
ಉಪ್ಪಳ ಕ್ರೀಡಾಂಗಣದಲ್ಲಿ ನಡೆದ ಪಂಜಾಜ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಹೈದರಾಬಾದ್ ತಂಡ ಕೊನೆಗೂ ಟೂರ್ನಿಯ ಮೊದಲ ಗೆಲುವು ಸಾಧಿಸಿದೆ.

2 / 7
ಈ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ತಂಡದ ನಾಯಕ ಶಿಖರ್ ಧವನ್ 99 ರನ್ ಗಳಿಸಿ ಅಜೇಯರಾಗಿ ಉಳಿದರು.

3 / 7
ಈ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 17.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಐಪಿಎಲ್ 2023 ರಲ್ಲಿ ಮೊದಲ ಗೆಲುವು ಸಾಧಿಸಿತು. ಆದರೆ ಪಂಜಾಬ್ ಪರ ಅಜೇಯ 99 ರನ್ ಬಾರಿಸಿದ ಧವನ್ ಐಪಿಎಲ್​ನಲ್ಲಿ 1 ರನ್​ಗಳಿಂದ ಶತಕ ವಂಚಿತರಾಗಿ ಉಳಿದ 4ನೇ ಆಟಗಾರ ಎನಿಸಿಕೊಂಡರು.

4 / 7
ಧವನ್​ಗಿಂತ ಮೊದಲು 3 ಆಟಗಾರರು ಅಜೇಯ 99 ರನ್ ಬಾರಿಸಿದ್ದು, ಅವರಲ್ಲಿ ಮೊದಲಿಗರು ಸುರೇಶ್ ರೈನಾ. ಮಿಸ್ಟರ್ ಐಪಿಲ್ ಖ್ಯಾತಿಯ ರೈನಾ ಟೂರ್ನಿಯ ಇತಿಹಾಸದಲ್ಲಿ 99 ರನ್ ಗಳಿಸಿ ಅಜೇಯರಾಗಿ ಉಳಿದ ಮೊದಲ ಆಟಗಾರ ಎನಿಸಿಕೊಂಡರು. 2013ರ ಐಪಿಎಲ್​ನಲ್ಲಿ ಹೈದರಾಬಾದ್‌ ವಿರುದ್ಧ ರೈನಾ ಅಜೇಯ 99 ರನ್ ಬಾರಿಸಿದ್ದರು.

5 / 7
ರೈನಾ ನಂತರ 2019 ರ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್‌ ಪರ ಕಣಕ್ಕಿಳಿದಿದ್ದ ಕ್ರಿಸ್ ಗೇಲ್, ಆರ್​ಸಿಬಿ ವಿರುದ್ಧ 64 ಎಸೆತಗಳಲ್ಲಿ ಅಜೇಯ 99 ರನ್‌ ಬಾರಿಸಿದ್ದರು.

6 / 7
ಕ್ರಿಸ್ ಗೇಲ್ ಬಳಿಕ ಎರಡು ವರ್ಷಗಳ ನಂತರ ಪಂಜಾಬ್ ಕಿಂಗ್ಸ್‌ ಪರ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 58 ಎಸೆತಗಳಲ್ಲಿ ಅಜೇಯ 99 ರನ್ ಬಾರಿಸಿದ್ದರು.

7 / 7
ಇದೀಗ ಈ ಐಪಿಎಲ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ 66 ಎಸೆತಗಳಲ್ಲಿ ಅಜೇಯ 99 ರನ್ ಬಾರಿಸಿದ್ದಾರೆ.