AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಕೆಎಲ್ ರಾಹುಲ್ ಬೇಗ ಔಟಾದರೆ, ಬೃಹತ್ ಮೊತ್ತ ಪೇರಿಸುವ LSG

IPL 2023 Kannada: ಕುತೂಹಲಕಾರಿ ವಿಷಯ ಎಂದರೆ ಲಕ್ನೋ ಸೂಪರ್ ಜೈಂಟ್ಸ್ ಯಾವಾಗೆಲ್ಲಾ ಬೃಹತ್ ಮೊತ್ತ ಕಲೆಹಾಕಿದೆಯೋ, ಆ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಪವರ್​ಪ್ಲೇನಲ್ಲೇ ಔಟಾಗಿದ್ದಾರೆ.

TV9 Web
| Edited By: |

Updated on: Apr 30, 2023 | 10:07 PM

Share
IPL 2023: ಐಪಿಎಲ್ ಸೀಸನ್​ 16 ರಲ್ಲಿ ಬೃಹತ್ ಮೊತ್ತ ಪೇರಿಸುವ ಮೂಲಕ ದಾಖಲೆ ಬರೆದಿರುವ ಲಕ್ನೋ ಸೂಪರ್ ಜೈಂಟ್ಸ್ ಇದೀಗ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ ಲಕ್ನೋ 5 ರಲ್ಲಿ ಜಯ ಸಾಧಿಸಿದೆ. ಈ ಐದು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಪಡೆ 3 ಬಾರಿ 200 ಕ್ಕೂ ಅಧಿಕ ರನ್​ಗಳಿಸಿರುವುದು ವಿಶೇಷ.

1 / 10
ಆದರೆ ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಲಕ್ನೋ ಸೂಪರ್ ಜೈಂಟ್ಸ್ ಯಾವಾಗೆಲ್ಲಾ ಬೃಹತ್ ಮೊತ್ತ ಕಲೆಹಾಕಿದೆಯೋ, ಆ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಪವರ್​ಪ್ಲೇನಲ್ಲೇ ಔಟಾಗಿದ್ದಾರೆ. ಅಂದರೆ ಕೆಎಲ್ ರಾಹುಲ್ ಬೇಗನೆ ಔಟಾದ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವುದು ವಿಶೇಷ.

2 / 10
ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ದಾಖಲೆಯ 257 ರನ್​ ಕಲೆಹಾಕಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 9 ಎಸೆತಗಳಲ್ಲಿ 12 ರನ್​ಗಳಿಸಿ ಔಟಾಗಿದ್ದರು.

3 / 10
ಇನ್ನು ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 20 ಎಸೆತಗಳಲ್ಲಿ 18 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 213 ರನ್​ಗಳನ್ನು ಚೇಸ್ ಮಾಡಿ ಜಯ ಸಾಧಿಸಿತ್ತು.

4 / 10
ಹಾಗೆಯೇ ಸಿಎಸ್​ಕೆ ವಿರುದ್ಧ ರಾಹುಲ್ 18 ಎಸೆತಗಳಲ್ಲಿ 20 ರನ್​ಗಳಿಸಿದರೂ, ಲಕ್ನೋ ಸೂಪರ್ ಜೈಂಟ್ಸ್ 205 ರನ್​ ಪೇರಿಸಿತ್ತು. ಇದಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 193 ರನ್​ ಬಾರಿಸಿದಾಗ, ಕೆಎಲ್ ರಾಹುಲ್ 12 ಎಸೆತಗಳಲ್ಲಿ 8 ರನ್​ಗಳಿಸಿ ಔಟಾಗಿದ್ದರು.

5 / 10
ಅಂದರೆ ಕೆಎಲ್ ರಾಹುಲ್ ಬೇಗನೆ ಔಟಾದ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ಬ್ಯಾಟರ್​ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಪವರ್​ಪ್ಲೇನಲ್ಲಿ ಪವರ್​ಫುಲ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮತ್ತೊಂದೆಡೆ ರಾಹುಲ್ ಉತ್ತಮ ಪ್ರದರ್ಶನ ನೀಡಿದ ಪಂದ್ಯಗಳಲ್ಲಿ ಲಕ್ನೋ ತಂಡದ ಸ್ಕೋರ್​ ಈ ಕೆಳಗಿನಂತಿದೆ...

6 / 10
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 56 ಎಸೆತಗಳಲ್ಲಿ 74 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಲೆಹಾಕಿರುವುದು 159 ರನ್​ ಮಾತ್ರ. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಹುಲ್ 32 ಎಸೆತಗಳಲ್ಲಿ 39 ರನ್​ ಬಾರಿಸಿದಾಗ ಲಕ್ನೋ 154 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

7 / 10
ಹಾಗೆಯೇ ಗುಜರಾತ್ ಟೈಟಾನ್ಸ್ ವಿರುದ್ಧ ಕೆಎಲ್ ರಾಹುಲ್ 61 ಎಸೆತಗಳಲ್ಲಿ 68 ರನ್​ ಬಾರಿಸಿದ್ದರು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 128 ರನ್​ಗಳಿಸಿ ಸೋಲನುಭವಿಸಿತ್ತು. ಇದಲ್ಲದೆ ಸನ್​ರೈಸರ್ಸ್​ ಹೈದರಾಬಾದ್ 127 ರನ್​ ಬಾರಿಸಿದಾಗ ಕೆಎಲ್​ಆರ್​ 31 ಎಸೆತಗಳಲ್ಲಿ ಕೆಎಲ್​ಆರ್ 35 ರನ್ ಕಲೆಹಾಕಿದ್ದರು.

8 / 10
ಅಂದರೆ ಇಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೆಎಲ್ ರಾಹುಲ್ 20 ಎಸೆತಕ್ಕಿಂತ ಕಡಿಮೆ ಬಾಲ್​ಗಳನ್ನು ಎದುರಿಸಿ ಬೇಗನೆ ಔಟಾದರೆ ಬೃಹತ್ ಮೊತ್ತ ಪೇರಿಸುತ್ತಿರುವುದು ಸ್ಪಷ್ಟ. ಅದರಲ್ಲೂ ಪವರ್​ಪ್ಲೇನಲ್ಲಿ ರಾಹುಲ್ ನಿಧಾನಗತಿಯಲ್ಲಿ ಬ್ಯಾಟ್ ಬೀಸುತ್ತಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಬ್ಯಾಟಿಂಗ್​ ಮೇಲೆ ಪ್ರಭಾವ ಬೀರುತ್ತಿದೆ.

9 / 10
ಅಲ್ಲದೆ ಕೆಎಲ್​ಆರ್​ ಅವರ ನಿಧಾನಗತಿಯ ಬ್ಯಾಟಿಂಗ್​ನಿಂದಾಗಿ ಕೆಲ ಪಂದ್ಯಗಳನ್ನು ಕೂಡ ಕಳೆದುಕೊಂಡಿದೆ. ಇದೇ ಕಾರಣದಿಂದಾಗಿ ಕೆಎಲ್ ರಾಹುಲ್ ಅವರ ಬೇಗನೆ ಔಟ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್​  ಬೃಹತ್ ಮೊತ್ತದ ಅಂಕಿ ಅಂಶಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

10 / 10
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ

5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ

ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?

ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ

ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ