IPL 2023: ಈ ಐಪಿಎಲ್​​ನಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಟಾಪ್ 5 ತಂಡಗಳಿವು

Updated on: Apr 28, 2023 | 5:02 PM

IPL 2023: ಐಪಿಎಲ್ 2023ರಲ್ಲಿ ಇದುವರೆಗೆ 37 ಪಂದ್ಯಗಳು ನಡೆದಿದ್ದು, ಇಷ್ಟು ಪಂದ್ಯಗಳಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಟಾಪ್ 5 ತಂಡಗಳ ವಿವರ ಇಲ್ಲಿದೆ.

1 / 6
ಟಿ20 ಕ್ರಿಕೆಟ್‌ನಲ್ಲಿ ಡಾಟ್ ಬಾಲ್​ಗಳನನ್ನು ಅಮೂಲ್ಯ ರತ್ನಗಳೆಂದೇ ಪರಿಗಣಿಸಲಾಗುತ್ತದೆ. ಈ ಡಾಟ್ ಬಾಲ್​ಗಳು ಬ್ಯಾಟಿಂಗ್ ತಂಡದ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ. ಐಪಿಎಲ್ 2023ರಲ್ಲಿ ಇದುವರೆಗೆ 37 ಪಂದ್ಯಗಳು ನಡೆದಿದ್ದು, ಇಷ್ಟು ಪಂದ್ಯಗಳಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಟಾಪ್ 5 ತಂಡಗಳ ವಿವರ ಇಲ್ಲಿದೆ.

ಟಿ20 ಕ್ರಿಕೆಟ್‌ನಲ್ಲಿ ಡಾಟ್ ಬಾಲ್​ಗಳನನ್ನು ಅಮೂಲ್ಯ ರತ್ನಗಳೆಂದೇ ಪರಿಗಣಿಸಲಾಗುತ್ತದೆ. ಈ ಡಾಟ್ ಬಾಲ್​ಗಳು ಬ್ಯಾಟಿಂಗ್ ತಂಡದ ಮೇಲೆ ಒತ್ತಡವನ್ನು ಹೆಚ್ಚಿಸುತ್ತವೆ. ಐಪಿಎಲ್ 2023ರಲ್ಲಿ ಇದುವರೆಗೆ 37 ಪಂದ್ಯಗಳು ನಡೆದಿದ್ದು, ಇಷ್ಟು ಪಂದ್ಯಗಳಲ್ಲಿ ಅತಿ ಹೆಚ್ಚು ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದ ಟಾಪ್ 5 ತಂಡಗಳ ವಿವರ ಇಲ್ಲಿದೆ.

2 / 6

ಇದುವರೆಗಿನ 7 ಪಂದ್ಯಗಳಲ್ಲಿ ಅತಿ ಹೆಚ್ಚು 341 ಡಾಟ್ ಬಾಲ್ ಎಸೆದಿರುವ ಗುಜರಾತ್ ಟೈಟಾನ್ಸ್ ಅಗ್ರಸ್ಥಾನದಲ್ಲಿದೆ. ಗುಜರಾತ್ 836 ಎಸೆತಗಳಲ್ಲಿ 53 ವಿಕೆಟ್ ಪಡೆದು 1159 ರನ್ ನೀಡಿದೆ. ಸದ್ಯ ಗುಜರಾತ್ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

3 / 6

ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಇದುವರೆಗೆ 322 ಡಾಟ್ ಬಾಲ್‌ಗಳನ್ನು ಎಸೆದಿದೆ. 8 ಪಂದ್ಯಗಳಲ್ಲಿ ಆರ್‌ಸಿಬಿ 950 ಎಸೆತಗಳಲ್ಲಿ 59 ವಿಕೆಟ್‌ ಪಡೆದು 1497 ರನ್‌ ನೀಡಿದೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ 5ನೇ ಸ್ಥಾನದಲ್ಲಿದೆ.

4 / 6

ಸನ್‌ರೈಸರ್ಸ್ ಹೈದರಾಬಾದ್ 7 ಪಂದ್ಯಗಳಲ್ಲಿ 311 ಡಾಟ್ ಬಾಲ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 808 ಎಸೆತಗಳಲ್ಲಿ 1152 ರನ್‌ಗಳನ್ನು ನೀಡಿರುವ ಹೈದರಾಬಾದ್43 ವಿಕೆಟ್‌ಗಳನ್ನು ಪಡೆದಿದೆ. ಸದ್ಯ ಎಸ್​​ಆರ್​ಹೆಚ್ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ.

5 / 6

ಲಕ್ನೋ ಸೂಪರ್ ಜೈಂಟ್ಸ್ ತಂಡವು 306 ಡಾಟ್ ಬಾಲ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 7 ಪಂದ್ಯಗಳಲ್ಲಿ 837 ಎಸೆತಗಳಲ್ಲಿ 1133 ರನ್‌ ನೀಡಿ 46 ವಿಕೆಟ್‌ಗಳನ್ನು ಕಬಳಿಸಿದೆ. ಕೆಎಲ್ ರಾಹುಲ್ ನೇತೃತ್ವದ ಎಲ್‌ಎಸ್‌ಜಿ 7 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

6 / 6

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಆದರೆ ನಾವು ಡಾಟ್ ಬಾಲ್‌ಗಳ ಬಗ್ಗೆ ಮಾತನಾಡುವುದಾದರೆ, ತಂಡವು 7 ಪಂದ್ಯಗಳಲ್ಲಿ 300 ಡಾಟ್ ಬಾಲ್‌ಗಳನ್ನು ಎಸೆದಿದೆ. ತಂಡವು 828 ಎಸೆತಗಳಲ್ಲಿ 1166 ರನ್ ನೀಡಿ 40 ವಿಕೆಟ್ ಗಳಿಸಿದೆ. ಡೆಲ್ಲಿ, ಎಸ್‌ಆರ್‌ಎಚ್‌ನಂತೆ ಕೇವಲ ಎರಡು ಪಂದ್ಯಗಳನ್ನು ಗೆದ್ದು ಕೇವಲ ನಾಲ್ಕು ಅಂಕಗಳನ್ನು ಹೊಂದಿದೆ.

Published On - 5:02 pm, Fri, 28 April 23

Loading...
Unable to load recommendations.
Follow Us