AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಪಂಜಾಬ್ ಕಿಂಗ್ಸ್ ತಂಡಕ್ಕೆ ಹೊಸ ಆಟಗಾರ ಎಂಟ್ರಿ

IPL 2023 Kannada: ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಪ್ರಭ್​ ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್.

TV9 Web
| Edited By: |

Updated on: Mar 25, 2023 | 9:33 PM

Share
ಇಂಡಿಯನ್ ಪ್ರೀಮಿಯರ್ ಲೀಗ್​ ಆರಂಭಕ್ಕೂ ಮುನ್ನವೇ ಪಂಜಾಬ್ ಕಿಂಗ್ಸ್ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜಾನಿ ಬೈರ್​ಸ್ಟೋವ್ ಹೊರಬಿದ್ದಿದ್ದಾರೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಬೈರ್​ಸ್ಟೋವ್ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

1 / 7
ಅತ್ತ ಇಂಗ್ಲೆಂಡ್ ಆಟಗಾರ ಜಾನಿ ಬೈರ್​ಸ್ಟೋವ್ ಐಪಿಎಲ್​ನಿಂದ ಹೊರಬೀಳುತ್ತಿದ್ದಂತೆ ಇತ್ತ ಪಂಜಾಬ್ ಕಿಂಗ್ಸ್​ ತಂಡಕ್ಕೆ ಆಸ್ಟ್ರೇಲಿಯಾ ಆಟಗಾರ ಎಂಟ್ರಿ ಕೊಟ್ಟಿದ್ದಾರೆ. ಬೈರ್​ಸ್ಟೋವ್ ಬದಲಿಗೆ ಪಂಜಾಬ್ ಫ್ರಾಂಚೈಸಿ ಆಸೀಸ್ ಆಲ್​ರೌಂಡರ್​ ಮ್ಯಾಥ್ಯೂ ಶಾರ್ಟ್ ಅವರನ್ನು ಆಯ್ಕೆ ಮಾಡಿದೆ.

2 / 7
27 ವರ್ಷದ ಮ್ಯಾಥ್ಯೂ ಶಾರ್ಟ್ 2022-23 ಬಿಗ್ ಬ್ಯಾಷ್ ಲೀಗ್​ನಲ್ಲಿ (BBL) ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಡಿಲೇಡ್ ಸ್ಟ್ರೈಕರ್ಸ್‌ ಪರ ಕಣಕ್ಕಿಳಿದಿದ್ದ ಶಾರ್ಟ್ 14 ಪಂದ್ಯಗಳಿಂದ 458 ರನ್ ಕಲೆಹಾಕಿದ್ದರು.

3 / 7
ಹಾಗೆಯೇ ಸ್ಪಿನ್ ಬೌಲಿಂಗ್ ಮೂಲಕ 11 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೇ ಕಾರಣದಿಂದಾಗಿ ಇದೀಗ ಮ್ಯಾಥ್ಯೂ ಶಾರ್ಟ್​ಗೆ ಐಪಿಎಲ್​ನಲ್ಲಿ ಅವಕಾಶ ಲಭಿಸಿದೆ.

4 / 7
ಇನ್ನು ಇದುವರೆಗೆ 67 ಟಿ20 ಪಂದ್ಯಗಳನ್ನಾಡಿರುವ ಶಾರ್ಟ್ ಒಟ್ಟು 1409 ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ 7.31 ರ ಎಕಾನಮಿ ರೇಟ್​ನಲ್ಲಿ ಒಟ್ಟು 22 ವಿಕೆಟ್‌ಗಳನ್ನು ಪಡೆದಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡವು ಆಸ್ಟ್ರೇಲಿಯಾ ಆಟಗಾರನನ್ನು ಆಲ್​ರೌಂಡರ್​ ಆಗಿ ಕಣಕ್ಕಿಳಿಸಬಹುದು.

5 / 7
ಪಂಜಾಬ್ ಕಿಂಗ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 1 ರಂದು ಆಡಲಿದ್ದು, ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಸೆಣಸಲಿದೆ.

6 / 7
ಪಂಜಾಬ್ ಕಿಂಗ್ಸ್ ತಂಡ ಹೀಗಿದೆ: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಪ್ರಭ್​ ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಥೈಡೆ, ಅರ್ಷ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್, ಶಿವಂ ಸಿಂಗ್, ಮೋಹಿತ್ ರಥಿ, ವಿದ್ವತ್ ಕಾವೇರಪ್ಪ, ಹರ್‌ಪ್ರೀತ್ ಭಾಟಿಯಾ, ಸಿಕಂದರ್ ರಾಝ, ಸ್ಯಾಮ್ ಕರನ್, ಮ್ಯಾಥ್ಯೂ ಶಾರ್ಟ್​, ಗುರ್ನೂರ್ ಸಿಂಗ್ ಬ್ರಾರ್.

7 / 7
TV9 Web
TV9 Web

TV9 Kannada

Read More
Follow Us
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್

ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು

ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್