- Kannada News Photo gallery Cricket photos IPL 2023: Rajasthan Royals to qualify for IPL 2023 playoffs
IPL 2023: ಹೀಗಾದ್ರೆ ರಾಜಸ್ಥಾನ್ ರಾಯಲ್ಸ್ ಕೂಡ ಪ್ಲೇಆಫ್ಗೆ ಪ್ರವೇಶಿಸಬಹುದು..!
IPL 2023 Kannada: ಒಂದು ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಗೆದ್ದರೆ ಹಾಗೂ ಆರ್ಸಿಬಿಯನ್ನು ಗುಜರಾತ್ ಟೈಟಾನ್ಸ್ ಸೋಲಿಸಿದರೆ ರಾಜಸ್ಥಾನ್ ರಾಯಲ್ಸ್ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.
Updated on: May 20, 2023 | 2:58 PM

IPL 2023: ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ನಾಲ್ಕು ಪಂದ್ಯಗಳ ಫಲಿತಾಂಶದ ಬೆನ್ನಲ್ಲೇ ಈ ಬಾರಿ ಪ್ಲೇಆಫ್ ಆಡುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.

ಇದುವರೆಗೆ ಒಟ್ಟು 66 ಪಂದ್ಯಗಳು ಮುಗಿದರೂ ಪ್ಲೇಆಫ್ ಪ್ರವೇಶಿಸಿರುವುದು ಗುಜರಾತ್ ಟೈಟಾನ್ಸ್ ಮಾತ್ರ. ಇನ್ನುಳಿದ 3 ಸ್ಥಾನಗಳಿಗಾಗಿ 6 ತಂಗಳ ನಡುವೆ ಪೈಪೋಟಿ ಇದೆ ಎಂಬುದು ವಿಶೇಷ. ಆದರೆ ಈ ಪೈಪೋಟಿಯಲ್ಲಿ ಇತರೆ ತಂಡಗಳ ಫಲಿತಾಂಶ ಬಹಳ ಮುಖ್ಯವಾಗಿ ಪರಿಣಮಿಸಿದೆ.

ಅಂದರೆ ಸಿಎಸ್ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ ಪಂದ್ಯಗಳನ್ನು ಗೆದ್ದುಕೊಂಡರೆ ಪ್ಲೇಆಫ್ ಪ್ರವೇಶಿಸುವುದು ಖಚಿತ. ಹಾಗೆಯೇ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳು ಮುಂದಿನ ಪಂದ್ಯ ಗೆದ್ದರೆ, ಹೆಚ್ಚು ನೆಟ್ ರನ್ ರೇಟ್ ಹೊಂದಿರುವ ತಂಡ ಅಗ್ರ-4 ರಲ್ಲಿ ಸ್ಥಾನ ಪಡೆಯಲಿದೆ.

ಒಂದು ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಗೆದ್ದರೆ ಹಾಗೂ ಆರ್ಸಿಬಿಯನ್ನು ಗುಜರಾತ್ ಟೈಟಾನ್ಸ್ ಸೋಲಿಸಿದರೆ ರಾಜಸ್ಥಾನ್ ರಾಯಲ್ಸ್ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.

ಅಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ಗೆ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳ ಮುಂದಿನ ಪಂದ್ಯಗಳ ಫಲಿತಾಂಶ ಬಹಳ ಮುಖ್ಯ.

ಇಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ಗೆ ಸೋಲುಣಿಸಿದರೆ ರಾಜಸ್ಥಾನ್ ರಾಯಲ್ಸ್ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವನ್ನು ಎದುರು ನೋಡಲಿದೆ.

ಏಕೆಂದರೆ ಮುಂದಿನ ಪಂದ್ಯದಲ್ಲಿ ಮುಂಬೈ ಸೋತರೆ, ರಾಜಸ್ಥಾನ್ ರಾಯಲ್ಸ್ ಪಾಲಿಗೆ ಗುಜರಾತ್ ಟೈಟಾನ್ಸ್ ಗೆಲ್ಲಬೇಕು. ಒಂದು ವೇಳೆ ಆರ್ಸಿಬಿ ತಂಡದ ವಿರುದ್ಧ 6 ರನ್ಗಳಿಂದ ಅಥವಾ 4 ಬಾಲ್ಗಳು ಬಾಕಿಯಿರುವಂತೆ ಗುಜರಾತ್ ಟೈಟಾನ್ಸ್ ತಂಡ ಗೆದ್ದರೆ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ.

ಇದೇ ಕಾರಣದಿಂದಾಗಿ ಇದೀಗ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡದ ಸೋಲನ್ನು ಎದುರು ನೋಡುತ್ತಿದೆ. ಹೀಗಾದಲ್ಲಿ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ಗೆ ಅಚ್ಚರಿಯ ಎಂಟ್ರಿ ಕೊಡಲಿದೆ.









