IPL 2023: RCB ತಂಡದ ಮುಂದಿನ ಎದುರಾಳಿ ಯಾರು ಗೊತ್ತಾ?

| Updated By: ಝಾಹಿರ್ ಯೂಸುಫ್

Updated on: Apr 23, 2023 | 11:23 PM

IPL 2023 Kannada: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಝ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್.

1 / 7
IPL 2023: ಐಪಿಎಲ್​ 16ನೇ ಆವೃತ್ತಿಯಲ್ಲಿ ಆರ್​ಸಿಬಿ ತಂಡದ ಮೊದಲಾರ್ಧ ಪೂರ್ಣಗೊಂಡಿದೆ. ಆಡಿರುವ 7 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿರುವ ಆರ್​ಸಿಬಿ ಇದೀಗ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

2 / 7
ಇನ್ನು ದ್ವಿತಿಯಾರ್ಧದ ಆರಂಭಕ್ಕೆ ಸಜ್ಜಾಗಬೇಕಿರುವ ಆರ್​ಸಿಬಿ ತಂಡದ ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್. ಅಂದರೆ ಆರ್​ಸಿಬಿ ತಂಡವನ್ನು ಮೊದಲಾರ್ಧದಲ್ಲಿ ಕೆಕೆಆರ್ ಹೀನಾಯವಾಗಿ ಸೋಲಿಸಿತ್ತು. ಇದೀಗ ಏಪ್ರಿಲ್ 26 ರಂದು ನಡೆಯಲಿರುವ ಈ ಪಂದ್ಯದ ಮೂಲಕ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಉತ್ತಮ ಅವಕಾಶವನ್ನು ಆರ್​ಸಿಬಿ ಹೊಂದಿದೆ.

3 / 7
ಏಕೆಂದರೆ ಕೆಕೆಆರ್​ ವಿರುದ್ಧದ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ತವರು ಮೈದಾನದಲ್ಲಿ ಭರ್ಜರಿಯಾಗಿ ಗೆದ್ದು ಹಳೆಯ ಸೋಲಿನ ಲೆಕ್ಕ ಚುಕ್ತಾ ಮಾಡುವ ತವಕದಲ್ಲಿದೆ ಆರ್​ಸಿಬಿ ಪಡೆ.

4 / 7
ಅಷ್ಟೇ ಅಲ್ಲದೆ ದ್ವಿತಿಯಾರ್ಧದ ಪ್ರತಿ ಪಂದ್ಯಗಳು ಆರ್​ಸಿಬಿ ಪಾಲಿಗೆ ಬಹಳ ಮುಖ್ಯ. ಏಕೆಂದರೆ ರಾಜಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲಿ 4 ಜಯ ಸಾಧಿಸಿದರೂ ಉತ್ತಮ ನೆಟ್​ ರನ್​ ರೇಟ್ ನೆರವಿನಿಂದ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. (32ನೇ ಪಂದ್ಯದ ಮುಕ್ತಾಯದ ವೇಳೆಗೆ)

5 / 7
ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್ 7 ರಲ್ಲಿ 4 ಜಯ ಸಾಧಿಸಿದರೂ ಉತ್ತಮ ನೆಟ್​ ರನ್​ ರೇಟ್​ನೊಂದಿಗೆ 2ನೇ ಸ್ಥಾನದಲ್ಲಿದೆ. ಇತ್ತ ಏಳು ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದರೂ ಆರ್​ಸಿಬಿ ಮೈನಸ್ ನೆಟ್ ರನ್ ರೇಟ್ ಕಾರಣದಿಂದಾಗಿ 5ನೇ ಸ್ಥಾನದಲ್ಲೇ ಉಳಿಯುವಂತಾಗಿದೆ.

6 / 7
ಹೀಗಾಗಿ ದ್ವಿತಿಯಾರ್ಧದಲ್ಲಿ ಗೆಲುವಿನೊಂದಿಗೆ ನೆಟ್ ರನ್​ ರೇಟ್ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ ಆರ್​ಸಿಬಿ. ಅದರಂತೆ ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಭರ್ಜರಿ ಗೆಲುವಿನ ಅಭಿಯಾನ ಕೆಕೆಆರ್​ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆಯಾ ಕಾದು ನೋಡಬೇಕಿದೆ.

7 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಝ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯ್‌ಕುಮಾರ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಮೈಕೆಲ್ ಬ್ರೇಸ್‌ವೆಲ್, ಫಿನ್ ಅಲೆನ್, ಸೋನು ಯಾದವ್, ಅನೂಜ್ ರಾವತ್, ಮನೋಜ್ ಭಾಂಡಗೆ, ಆಕಾಶ್ ದೀಪ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಹಿಮಾಂಶು ಶರ್ಮಾ