AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?

IPL 2024 Auction: ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೀಡಿದ್ದಾರೆ. ಇತ್ತ 10 ತಂಡಗಳಲ್ಲಿ ಒಟ್ಟು 77 ಸ್ಲಾಟ್​ಗಳು ಮಾತ್ರ ಖಾಲಿಯಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಕೆಲವೇ ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

TV9 Web
| Edited By: |

Updated on: Dec 10, 2023 | 9:22 PM

Share
IPL 2024: ಐಪಿಎಲ್​ ಸೀಸನ್ 17 ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ಧತೆಯಲ್ಲಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತ ಈ ಹರಾಜಿಗಾಗಿ ಆರ್​ಸಿಬಿ (RCB) ಕೂಡ ಭರ್ಜರಿ ಪ್ಲ್ಯಾನ್​ನಲ್ಲಿದೆ.

1 / 8
ಏಕೆಂದರೆ ಈ ಬಾರಿಯ ಹರಾಜಿನ ಮೂಲಕ ಆರ್​ಸಿಬಿ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಆದರೆ ಈ ಆರು ಆಟಗಾರರಲ್ಲಿ ಮೂವರು ವಿದೇಶಿ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಆದರೆ ಇತ್ತ ಆರ್​ಸಿಬಿ ಬಳಿ ಇರುವುದು 23.25 ಕೋಟಿ ರೂ. ಮಾತ್ರ. ಹೀಗಾಗಿ ಜಾಣತನದೊಂದಿಗೆ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.

2 / 8
ಒಂದು ವೇಳೆ ಹರಾಜಿನ ಸಮಯದಲ್ಲಿ ಮೈಮರೆತರೆ ಈ ಹಿಂದಿನಂತೆ ಈ ಬಾರಿ ಕೂಡ ಆರ್​ಸಿಬಿ ತಂಡಕ್ಕೆ ಕಳಪೆ ಆಟಗಾರರು ಸೇರ್ಪಡೆಯಾಗಬಹುದು. ಏಕೆಂದರೆ ಆರ್​ಸಿಬಿ ಕಳೆದ 16 ಸೀಸನ್​ಗಳಲ್ಲಿ ಕೆಲ ಆಟಗಾರರಿಗೆ ದುಬಾರಿ ಮೊತ್ತ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಕಳೆದ ಹದಿನಾರು ಆವೃತ್ತಿಗಳ ಹರಾಜಿನಲ್ಲಿ ಆರ್​ಸಿಬಿ ಮಾಡಿದ ಅತ್ಯಂತ ಕೆಟ್ಟ ಆಯ್ಕೆಗಳು ಯಾವುವು ಎಂದು ನೋಡುವುದಾದರೆ...

3 / 8
ಟೈಮಲ್ ಮಿಲ್ಸ್: 2017 ರ ಹರಾಜಿನಲ್ಲಿ ಆರ್​ಸಿಬಿ ತಂಡವು ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್​​ರನ್ನು ಬರೋಬ್ಬರಿ 12 ಕೋಟಿ ರೂ.ಗೆ ಖರೀದಿಸಿತ್ತು. ಅಂದು 5 ಪಂದ್ಯಗಳನ್ನಾಡಿದ್ದ ಮಿಲ್ಸ್ 8.5 ಸರಾಸರಿಯಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದರು.

4 / 8
ಕೈಲ್ ಜೇಮಿಸನ್: 2021 ರ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿ ಕೈಲ್ ಜೇಮಿಸನ್ ಅವರನ್ನು ಆರ್​ಸಿಬಿ ಖರೀದಿಸಿದ್ದು ಬರೋಬ್ಬರಿ 15 ಕೋಟಿ ರೂ.ಗೆ. ಆರ್​ಸಿಬಿ ಪರ 9 ಪಂದ್ಯಗಳನ್ನಾಡಿದ್ದ ಜೇಮಿಸನ್ ಕೇವಲ 9 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

5 / 8
ಸೌರಭ್ ತಿವಾರಿ: 2011 ರಲ್ಲಿ ಆರ್​ಸಿಬಿ 7.36 ಕೋಟಿ ರೂ.ಗೆ ಎಡಗೈ ದಾಂಡಿಗ ಸೌರಭ್ ತಿವಾರಿಯನ್ನು ಖರೀದಿಸಿತ್ತು. ಆದರೆ ಆರ್​ಸಿಬಿ ಪರ ಮೂರು ಸೀಸನ್​ ಆಡಿದ ತಿವಾರಿ 22.23 ರ ಸರಾಸರಿಯಲ್ಲಿ ಕೇವಲ 578 ರನ್​ ಕಲೆಹಾಕಿದ್ದರು.

6 / 8
ಚೇತೇಶ್ವರ ಪೂಜಾರ: 2011 ರ ಹರಾಜಿನಲ್ಲಿ ಆರ್​ಸಿಬಿ ಚೇತೇಶ್ವರ ಪೂಜಾರ ಅವರನ್ನು ಬರೋಬ್ಬರಿ 3.22 ಕೋಟಿ ರೂ. ಖರೀದಿಸಿತ್ತು. ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪೂಜಾರ ಕಲೆಹಾಕಿದ್ದು 14.3 ರ ಸರಾರಿಯಲ್ಲಿ ಕೇವಲ 143 ರನ್​ಗಳು ಮಾತ್ರ.

7 / 8
ಕ್ರಿಸ್ ವೋಕ್ಸ್: 2018 ರಲ್ಲಿ ಆರ್​ಸಿಬಿ ಕ್ರಿಸ್ ವೋಕ್ಸ್​ ಅವರನ್ನು 7.4 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಆರ್​ಸಿಬಿ ಪರ 5 ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ವೇಗಿ ಪ್ರತಿ ಓವರ್​ಗೆ 10.36 ಸರಾಸರಿಯಲ್ಲಿ ರನ್ ನೀಡಿ 8 ವಿಕೆಟ್​ಗಳನ್ನಲಷ್ಟೇ ಕಬಳಿಸಿದ್ದರು.

8 / 8
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ

‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ

ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ

ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು

ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್

‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..

ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ