- Kannada News Photo gallery Cricket photos IPL 2024 Glenn Maxwell equals unwanted IPL record in RCB vs MI clash
IPL 2024: 0,1,0,3,0,..: ಬ್ಯಾಟಿಂಗ್ ಮರೆತ್ರಾ ಮ್ಯಾಕ್ಸ್ವೆಲ್..?
IPL 2024 Glenn Maxwell: ಆಡಿರುವ 6 ಪಂದ್ಯಗಳಲ್ಲಿ ಇದುವರೆಗೆ ಮೂರು ಬಾರಿ ಸೊನ್ನೆ ಸುತ್ತಿರುವ ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ ಮ್ಯಾಕ್ಸ್ವೆಲ್ ಅವರ ಶೂನ್ಯ ಸಾಧನೆ 17 ರ ಗಡಿಗೆ ಬಂದು ನಿಂತಿದೆ.
Updated on: Apr 12, 2024 | 9:04 PM

17ನೇ ಆವೃತ್ತಿಯ ಐಪಿಎಲ್ ಆರ್ಸಿಬಿ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ಗೆ ದುಸ್ವಪ್ನದಂತೆ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಬ್ಯಾಟಿಂಗ್ ವಿಭಾಗದ ಜೀವಾಳವಾಗಿದ್ದ ಮ್ಯಾಕ್ಸ್ವೆಲ್ ಈ ಆವೃತ್ತಿಯಲ್ಲಿ ತಂಡದ ನಿರಸ ಪ್ರದರ್ಶನಕ್ಕೆ ಪ್ರಮುಖ ಕಾರಣಗಳಲ್ಲಿ ಒಬ್ಬರಾಗಿದ್ದಾರೆ.

ಈ ಸೀಸನ್ನಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಮ್ಯಾಕ್ಸ್ವೆಲ್ ಒಮ್ಮೆ ಮಾತ್ರ ಎರಡಂಕ್ಕಿ ಮೊತ್ತ ದಾಟಿದ್ದಾರೆ. ಅದನ್ನು ಹೊರತುಪಡಿಸಿ ಎರಡು ಬಾರಿ ಮಾತ್ರ ಖಾತೆ ತೆರೆದಿರುವ ಮ್ಯಾಕ್ಸ್ವೆಲ್, ಉಳಿದ ಮೂರು ಪಂದ್ಯಗಳಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

ಲೀಗ್ನ ಮೊದಲ ಪಂದ್ಯದಲ್ಲೇ ಸೊನ್ನೆ ಸುತ್ತಿದ ಗ್ಲೆನ್, ನಂತರ ನಡೆದ ಎರಡನೇ ಪಂದ್ಯದಲ್ಲಿ 3 ರನ್, ಮೂರನೇ ಪಂದ್ಯದಲ್ಲಿ 28 ರನ್ ಬಾರಿಸಿದರು. ನಂತರ ನಡೆದ 4ನೇ ಪಂದ್ಯದಲ್ಲಿ ಮತ್ತೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಐದನೇ ಪಂದ್ಯದಲ್ಲಿ 1 ರನ್ಗಳಿಗೆ ಸುಸ್ತಾಗಿದ್ದ ಮ್ಯಾಕ್ಸ್ವೆಲ್ ಆರನೇ ಪಂದ್ಯದಲ್ಲಿ ಮತ್ತೊಮ್ಮೆ ಶೂನ್ಯ ಸಾಧನೆ ಮಾಡಿದ್ದರು.

ಆಡಿರುವ 6 ಪಂದ್ಯಗಳಲ್ಲಿ ಇದುವರೆಗೆ ಮೂರು ಬಾರಿ ಸೊನ್ನೆ ಸುತ್ತಿರುವ ಮ್ಯಾಕ್ಸ್ವೆಲ್ ಐಪಿಎಲ್ನಲ್ಲಿ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ ಮ್ಯಾಕ್ಸ್ವೆಲ್ ಅವರ ಶೂನ್ಯ ಸಾಧನೆ 17 ರ ಗಡಿಗೆ ಬಂದು ನಿಂತಿದೆ.

ಪ್ರಸ್ತುತ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ಆರ್ಸಿಬಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಲಾ 17 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಈ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.

ಆದರೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿದೇಶಿ ಆಟಗಾರರ ಪೈಕಿ ಸುನಿಲ್ ನರೈನ್ ಮತ್ತು ರಶೀದ್ ಖಾನ್ ಅತಿ ಹೆಚ್ಚು ಬಾರಿ (ತಲಾ 15 ಬಾರಿ) ಶೂನ್ಯಕ್ಕೆ ಔಟಾಗುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.




