AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: 0,1,0,3,0,..: ಬ್ಯಾಟಿಂಗ್ ಮರೆತ್ರಾ ಮ್ಯಾಕ್ಸ್​ವೆಲ್..?

IPL 2024 Glenn Maxwell: ಆಡಿರುವ 6 ಪಂದ್ಯಗಳಲ್ಲಿ ಇದುವರೆಗೆ ಮೂರು ಬಾರಿ ಸೊನ್ನೆ ಸುತ್ತಿರುವ ಮ್ಯಾಕ್ಸ್​ವೆಲ್ ಐಪಿಎಲ್‌ನಲ್ಲಿ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್​ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ ಮ್ಯಾಕ್ಸ್​ವೆಲ್ ಅವರ ಶೂನ್ಯ ಸಾಧನೆ 17 ರ ಗಡಿಗೆ ಬಂದು ನಿಂತಿದೆ.

ಪೃಥ್ವಿಶಂಕರ
|

Updated on: Apr 12, 2024 | 9:04 PM

17ನೇ ಆವೃತ್ತಿಯ ಐಪಿಎಲ್ ಆರ್​ಸಿಬಿ ಸ್ಟಾರ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್​ಗೆ ದುಸ್ವಪ್ನದಂತೆ ಕಾಡುತ್ತಿದೆ ಎಂದರೆ ತಪ್ಪಾಗಲಾರದು. ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಬ್ಯಾಟಿಂಗ್ ವಿಭಾಗದ ಜೀವಾಳವಾಗಿದ್ದ ಮ್ಯಾಕ್ಸ್​ವೆಲ್ ಈ ಆವೃತ್ತಿಯಲ್ಲಿ ತಂಡದ ನಿರಸ ಪ್ರದರ್ಶನಕ್ಕೆ ಪ್ರಮುಖ ಕಾರಣಗಳಲ್ಲಿ ಒಬ್ಬರಾಗಿದ್ದಾರೆ.

1 / 6
ಈ ಸೀಸನ್​ನಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಮ್ಯಾಕ್ಸ್​ವೆಲ್ ಒಮ್ಮೆ ಮಾತ್ರ ಎರಡಂಕ್ಕಿ ಮೊತ್ತ ದಾಟಿದ್ದಾರೆ. ಅದನ್ನು ಹೊರತುಪಡಿಸಿ ಎರಡು ಬಾರಿ ಮಾತ್ರ ಖಾತೆ ತೆರೆದಿರುವ ಮ್ಯಾಕ್ಸ್‌ವೆಲ್, ಉಳಿದ ಮೂರು ಪಂದ್ಯಗಳಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

2 / 6
ಲೀಗ್​ನ ಮೊದಲ ಪಂದ್ಯದಲ್ಲೇ ಸೊನ್ನೆ ಸುತ್ತಿದ ಗ್ಲೆನ್, ನಂತರ ನಡೆದ ಎರಡನೇ ಪಂದ್ಯದಲ್ಲಿ 3 ರನ್, ಮೂರನೇ ಪಂದ್ಯದಲ್ಲಿ 28 ರನ್ ಬಾರಿಸಿದರು. ನಂತರ ನಡೆದ 4ನೇ ಪಂದ್ಯದಲ್ಲಿ ಮತ್ತೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಐದನೇ ಪಂದ್ಯದಲ್ಲಿ 1 ರನ್​ಗಳಿಗೆ ಸುಸ್ತಾಗಿದ್ದ ಮ್ಯಾಕ್ಸ್​ವೆಲ್ ಆರನೇ ಪಂದ್ಯದಲ್ಲಿ ಮತ್ತೊಮ್ಮೆ ಶೂನ್ಯ ಸಾಧನೆ ಮಾಡಿದ್ದರು.

3 / 6
ಆಡಿರುವ 6 ಪಂದ್ಯಗಳಲ್ಲಿ ಇದುವರೆಗೆ ಮೂರು ಬಾರಿ ಸೊನ್ನೆ ಸುತ್ತಿರುವ ಮ್ಯಾಕ್ಸ್​ವೆಲ್ ಐಪಿಎಲ್‌ನಲ್ಲಿ ಅಧಿಕ ಬಾರಿ ಶೂನ್ಯಕ್ಕೆ ಔಟಾದ ಬ್ಯಾಟರ್​ಗಳ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ ಮ್ಯಾಕ್ಸ್​ವೆಲ್ ಅವರ ಶೂನ್ಯ ಸಾಧನೆ 17 ರ ಗಡಿಗೆ ಬಂದು ನಿಂತಿದೆ.

4 / 6
ಪ್ರಸ್ತುತ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ, ಆರ್​ಸಿಬಿ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ತಲಾ 17 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಈ ಪಟ್ಟಿಯಲ್ಲಿ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.

5 / 6
ಆದರೆ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿದೇಶಿ ಆಟಗಾರರ ಪೈಕಿ ಸುನಿಲ್ ನರೈನ್ ಮತ್ತು ರಶೀದ್ ಖಾನ್ ಅತಿ ಹೆಚ್ಚು ಬಾರಿ (ತಲಾ 15 ಬಾರಿ) ಶೂನ್ಯಕ್ಕೆ ಔಟಾಗುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

6 / 6
Follow us