- Kannada News Photo gallery Cricket photos IPL 2024 RCB registered unwanted record in ipl vs mumbai indians
IPL 2024: ಐದನೇ ಸೋಲಿನೊಂದಿಗೆ ಬೇಡದ ದಾಖಲೆ ಬರೆದ ಆರ್ಸಿಬಿ
IPL 2024: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್ಸಿಬಿ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಐದರಲ್ಲಿ ಸೋತು, ಒಂದರಲ್ಲಿ ಮಾತ್ರ ಗೆದ್ದಿದೆ. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಫಾಫ್ ಪಡೆ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.
Updated on: Apr 12, 2024 | 8:00 PM

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್ಸಿಬಿ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಐದರಲ್ಲಿ ಸೋತು, ಒಂದರಲ್ಲಿ ಮಾತ್ರ ಗೆದ್ದಿದೆ. ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಫಾಫ್ ಪಡೆ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ಆರ್ಸಿಬಿ ನೀಡಿದ 197 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಇನ್ನು 27 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ಗಳಿಂದ ಗೆಲುವಿನ ದಡ ಸೇರಿತು. ಈ ಮೂಲಕ ಮುಂಬೈ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿದರೆ, ಆರ್ಸಿಬಿ ಮಾತ್ರ 9ನೇ ಸ್ಥಾನಕ್ಕೆ ಕುಸಿದಿದೆ. ಇದಲ್ಲದೆ ಐಪಿಎಲ್‌ನಲ್ಲಿ ಯಾವ ತಂಡವೂ ಮಾಡದ ಕಳಪೆ ದಾಖಲೆಗೆ ಕೊರಳ್ಳೊಡಿದೆ.

ಅದೆನೇಂದರೆ ಈ ಪಂದ್ಯದಲ್ಲಿ ಆರ್ಸಿಬಿ ಬೃಹತ್ ಮೊತ್ತ ಕಲೆಹಾಕಿತ್ತಾದರೂ, ಮುಂಬೈ ವಿರುದ್ಧ ಏಕಪಕ್ಷೀಯವಾಗಿ ಸೋಲನುಭವಿಸಿತ್ತು. ಅಲ್ಲದೆ ತಂಡದ ಪರ ಮೂವರು ಬ್ಯಾಟರ್ಗಳು ಸಿಡಿಲಬ್ಬರದ ಅರ್ಧಶತಕ ಸಿಡಿಸಿದರೂ ತಂಡಕ್ಕೆ 200 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ.

ಈ ಮೂಲಕ ಆರ್ಸಿಬಿ, ಐಪಿಎಲ್ ಇತಿಹಾಸದಲ್ಲೇ ತಂಡದಿಂದ ಮೂರು ಅರ್ಧಶತಕಗಳು ಸಿಡಿದರೂ 200 ರನ್ ಪೂರೈಸದ ಮೊದಲ ತಂಡ ಎಂಬ ಬೇಡದ ದಾಖಲೆ ನಿರ್ಮಿಸಿತು.

ಅಲ್ಲದೆ ಆರ್ಸಿಬಿಯನ್ನು ಹೀನಾಯವಾಗಿ ಮಣಿಸಿದ ಮುಂಬೈ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ 190 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಅತಿ ಕಡಿಮೆ ಎಸೆತಗಳಲ್ಲಿ ಬೆನ್ನಟ್ಟಿದ (15.3 ಓವರ್) ದಾಖಲೆ ಬರೆಯಿತು.

ಇದಕ್ಕೂ ಮುನ್ನ 2014 ರಲ್ಲಿ ರಾಜಸ್ಥಾನ ವಿರುದ್ಧ 32 ಎಸೆತ ಬಾಕಿ ಇರುವಂತೆ 190 ರನ್ಗಳ ಗುರಿಯನ್ನು ಸಾಧಿಸಿತ್ತು. ಇದರ ನಂತರ 2017 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 199 ರನ್ಗಳ ಗುರಿಯನ್ನು 27 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತ್ತು.

ಇದು ಒಂದೆಡೆಯಾದರೆ.. ಆರ್ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ 11ನೇ ಬಾರಿಗೆ ಮೊದಲು ಬ್ಯಾಟಿಂಗ್ ಮಾಡುವ ವೇಳೆ ಒಂದು ತಂಡದ ಮೂವರು ಆಟಗಾರರು ಅರ್ಧಶತಕದ ಇನ್ನಿಂಗ್ಸ್ ಆಡಿದ ದಾಖಲೆ ಬರೆದರು.




