AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ನಲ್ಲಿ ಮೊದಲ ಪಂದ್ಯವಾಡದ 3 ತಂಡಗಳು

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) 17ನೇ ಆವೃತ್ತಿ ಮಾರ್ಚ್​ 22 ರಿಂದ ಶುರುವಾಗಲಿದೆ. ಮೊದಲ ಹಂತದ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದ್ದು, ಉಳಿದ ಮ್ಯಾಚ್​ಗಳ ದಿನಾಂಕವನ್ನು ಲೋಕಸಭಾ ಚುನಾವಣೆಯ ಡೇಟ್ ಪ್ರಕಟವಾದ ಬಳಿಕ ನಿರ್ಧಾರ ಮಾಡಲಾಗುತ್ತದೆ. ಹೀಗಾಗಿ 17 ದಿನಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.

TV9 Web
| Edited By: |

Updated on: Feb 24, 2024 | 10:57 AM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 (IPL 2024) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 22 ರಿಂದ ಶುರುವಾಗಲಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್​ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಉದ್ಘಾಟನಾ ಪಂದ್ಯವಾಡಿದ ವಿಶೇಷ ದಾಖಲೆಯೊಂದು ಸಿಎಸ್​ಕೆ ಪಾಲಾಗಲಿದೆ.

1 / 6
ಅಂದರೆ ಐಪಿಎಲ್ ಸೀಸನ್​ನಲ್ಲಿ ಅತೀ ಹೆಚ್ಚು ಬಾರಿ ಮೊದಲ ಪಂದ್ಯವಾಡಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್​ ಹೆಸರಿಗೆ ಸೇರ್ಪಡೆಯಾಗಲಿದೆ. ಇಂಟ್ರೆಸ್ಟಿಂಗ್ ವಿಷಯ ಎಂದರೆ, ಐಪಿಎಲ್​ನ ಮೂರು ತಂಡಗಳು ಇದುವರೆಗೆ ಉದ್ಘಾಟನಾ ಪಂದ್ಯವನ್ನಾಡಿಲ್ಲ. ಆ ತಂಡಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

2 / 6
ಪಂಜಾಬ್ ಕಿಂಗ್ಸ್​: ಐಪಿಎಲ್​ ಇತಿಹಾಸದಲ್ಲಿ 16 ಸೀಸನ್​ಗಳಲ್ಲಿ ಕಣಕ್ಕಿಳಿದಿರುವ ಪಂಜಾಬ್ ಕಿಂಗ್ಸ್ ತಂಡವು ಒಮ್ಮೆಯೂ ಉದ್ಘಾಟನಾ ಪಂದ್ಯವನ್ನಾಡಿಲ್ಲ. 2014 ರಲ್ಲಿ ಪಂಜಾಬ್ ತಂಡವು ಫೈನಲ್ ಪಂದ್ಯವಾಡಿದ್ದರೂ 2015 ರಲ್ಲಿ ಮೊದಲ ಪಂದ್ಯವನ್ನಾಡಿರಲಿಲ್ಲ ಎಂಬುದು ವಿಶೇಷ.

3 / 6
ರಾಜಸ್ಥಾನ್ ರಾಯಲ್ಸ್​: ಐಪಿಎಲ್​ನಲ್ಲಿ ಇದುವರೆಗೆ 14 ಸೀಸನ್​ಗಳಲ್ಲಿ ಕಾಣಿಸಿಕೊಂಡಿರುವ ರಾಜಸ್ಥಾನ್ ರಾಯಲ್ಸ್ 2008 ರಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಹಾಗೆಯೇ 2022 ರಲ್ಲಿ ಫೈನಲ್ ಪಂದ್ಯವನ್ನಾಡಿತ್ತು. ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡ ಒಮ್ಮೆಯೂ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ.

4 / 6
ಲಕ್ನೋ ಸೂಪರ್ ಜೈಂಟ್ಸ್​: 2022ರ ಐಪಿಎಲ್​ ಮೂಲಕ ಅಭಿಯಾನ ಆರಂಭಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಕೂಡ ಒಮ್ಮೆಯೂ ಉದ್ಘಾಟನಾ ಪಂದ್ಯವಾಡಿಲ್ಲ. ಈ ಮೂರು ತಂಡಗಳನ್ನು ಹೊರತುಪಡಿಸಿ ಉಳಿದ ತಂಡಗಳು ಐಪಿಎಲ್​ ಸೀಸನ್​ನ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿದೆ.

5 / 6
ಇನ್ನು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಮೊದಲ ಪಂದ್ಯವಾಡಿದ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್​ ಕಿಂಗ್ಸ್ ಪಾಲಾಗಲಿದೆ. ಸಿಎಸ್​ಕೆ ಇದೀಗ 9ನೇ ಬಾರಿಗೆ ಉದ್ಘಾಟನಾ ಪಂದ್ಯವಾಡಲು ಸಜ್ಜಾಗಿದೆ. ಇನ್ನು ಮುಂಬೈ ಇಂಡಿಯನ್ಸ್ 8 ಬಾರಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 6 ಬಾರಿ ಮೊದಲ ಪಂದ್ಯವನ್ನಾಡಿದೆ.

6 / 6
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ

ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?

ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು

ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ

ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?