IPL 2024 Jersey: 10 ತಂಡಗಳ ನೂತನ ಜೆರ್ಸಿ ಅನಾವರಣ

IPL 2024 All Teams Jersey: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಗಾಗಿ 10 ತಂಡಗಳು ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಹತ್ತು ತಂಡಗಳೂ ಕೂಡ ಐಪಿಎಲ್​ಗಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿ ನಿಂತಿದೆ. ಅದರಂತೆ ಮಾರ್ಚ್ 22 ರಿಂದ IPL 2024 ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಸಿಎಸ್​ಕೆ ಮತ್ತು ಆರ್​ಸಿಬಿ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Mar 20, 2024 | 9:08 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಕ್ಕಾಗಿ ಎಲ್ಲಾ ತಂಡಗಳು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಹತ್ತು ತಂಡಗಳಲ್ಲಿ ಬಹುತೇಕ ಟೀಮ್​ಗಳು ಈ ಹಿಂದಿನ ಜೆರ್ಸಿ ಬಣ್ಣವನ್ನೇ ಮುಂದುವರೆಸಿದೆ. ಇದಾಗ್ಯೂ ಸನ್​ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಮಾತ್ರ ತಮ್ಮ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಅದರಂತೆ ಐಪಿಎಲ್ 2024 ರಲ್ಲಿ 10 ತಂಡಗಳು ಧರಿಸಲಿರುವ ಜೆರ್ಸಿಯ ಝಲಕ್ ಇಲ್ಲಿದೆ...

1 / 11
ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ದೆಹಲಿ ಮೆಟ್ರೊ ರೂಟ್ ಅನ್ನು ಸಾಂಕೇತಿಕವಾಗಿ ಬಳಸಿಕೊಂಡಿರುವುದು ವಿಶೇಷ. ಈ ಒಂದು ಪುಟ್ಟ ಚೇಂಜ್ ಮಾಡಿದ್ದು ಬಿಟ್ಟರೆ, ಜೆರ್ಸಿಯ ಬಣ್ಣಗಳಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.

2 / 11
ರಾಜಸ್ಥಾನ್ ರಾಯಲ್ಸ್: ಪಿಂಕ್ ಸಿಟಿಯನ್ನು ಪ್ರತಿನಿಧಿಸುವ ರಾಜಸ್ಥಾನ್ ರಾಯಲ್ಸ್ ಈ ಸಲ ಕೂಡ ಪಿಂಕ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ತೊಳ್ಭಾಗದಲ್ಲಿ ನೀಲಿ ಬಣ್ಣ ನೀಡಲಾಗಿರುವ ಈ ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ.

3 / 11
ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್ ತಂಡವು ಈ ಬಾರಿ ನೂತನ ವಿನ್ಯಾಸದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಕೇಪ್ ಈಸ್ಟರ್ನ್​ ತಂಡ ಧರಿಸಿದ್ದ ಜೆರ್ಸಿ ವಿನ್ಯಾಸವನ್ನೇ ಎಸ್ಆರ್​ಹೆಚ್​ ಐಪಿಎಲ್​ಗೂ ಪರಿಚಯಿಸುತ್ತಿರುವುದು ವಿಶೇಷ.

4 / 11
ಚೆನ್ನೈ ಸೂಪರ್ ಕಿಂಗ್ಸ್​: ಯೆಲ್ಲೊ ಆರ್ಮಿ ಖ್ಯಾತಿಯ ಸಿಎಸ್​ಕೆ ತಂಡವು ಕಳೆದ ಬಾರಿಯಂತೆ ಈ ಸಲ ಕೂಡ ಹಳದಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಐಪಿಎಲ್ 2023 ರ ಸಿಎಸ್​ಕೆ ಜೆರ್ಸಿಗೆ ಹೋಲಿಸಿದರೆ, ಈ ಬಾರಿ ಕೂಡ ಜೆರ್ಸಿ ವಿನ್ಯಾಸದಲ್ಲಿ ಅಂತಹ ಮಹತ್ವದ ಬದಲಾವಣೆ ಕಂಡು ಬಂದಿಲ್ಲ.

5 / 11
ಗುಜರಾತ್ ಟೈಟಾನ್ಸ್​: ಶುಭ್​ಮನ್ ಗಿಲ್ ಮುನ್ನಡೆಸಲಿರುವ ಗುಜರಾತ್ ಟೈಟಾನ್ಸ್ ತಂಡದ ಜೆರ್ಸಿಯಲ್ಲೂ ಅಂತಹ ಬದಲಾವಣೆ ಕಂಡು ಬಂದಿದೆ. ಈ ಹಿಂದಿನ ಜೆರ್ಸಿ ವಿನ್ಯಾಸವನ್ನೇ ಜಿಟಿ ಫ್ರಾಂಚೈಸಿ ಮುಂದುವರೆಸಿದ್ದು, ಅದರಂತೆ ಈ ಬಾರಿ ಕೂಡ ಚಾರ್ಕೊಲ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

6 / 11
ಪಂಜಾಬ್ ಕಿಂಗ್ಸ್: ಐಪಿಎಲ್ 2023 ರಲ್ಲಿ ಫುಲ್ ರೆಡ್ ಬಣ್ಣದಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ಪಡೆ ಈ ಬಾರಿ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಕೆಂಪು ಬಣ್ಣದ ಜೊತೆ ಪಂಜಾಬ್ ಈ ಬಾರಿ ಜ್ವಾಲೆಯ ವಿನ್ಯಾಸವನ್ನು ಬಳಸಿದೆ. ಹಾಗೆಯೇ ಈ ಹಿಂದೆ ಜೆರ್ಸಿಯ ಮುಂಭಾಗದಲ್ಲಿ ಕಾಣಿಸುತ್ತಿದ್ದ ದೊಡ್ಡದಾದ ಸಿಂಹದ ಲೋಗೋವನ್ನು ಈ ಬಾರಿ ಕೈ ಬಿಟ್ಟಿದೆ.

7 / 11
ಮುಂಬೈ ಇಂಡಿಯನ್ಸ್​: ಕಳೆದ ಸೀಸನ್​​ನಂತೆ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ರಾಯಲ್ ಬ್ಲೂ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಸಲ ಜೆರ್ಸಿ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಅದರಂತೆ ಜೆರ್ಸಿ ಮೇಲೆ M ಆಕಾರವನ್ನು ವಿನ್ಯಾಸಗೊಳಿಸಿರುವುದು ವಿಶೇಷ.

8 / 11
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡವು ಈ ಬಾರಿ ಕೂಡ ನೇರಳೆ ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ ಜೆರ್ಸಿಯ ಮುಂಭಾಗದ ವಿನ್ಯಾಸಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಇದನ್ನು ಹೊರತುಪಡಿಸಿದರೆ ಎಂದಿನಂತೆ ಪರ್ಪಲ್-ಗೋಲ್ಡ್ ಬಣ್ಣಗಳನ್ನೇ ಈ ಬಾರಿ ಸಹ ಬಳಸಲಾಗಿದೆ.

9 / 11
ಲಕ್ನೋ ಸೂಪರ್ ಜೈಂಟ್ಸ್​: ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿ ಕೂಡ ಡಾರ್ಕ್​ ಬ್ಲೂ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಅಲ್ಲದೆ ಕಳೆದ ಸೀಸನ್​ನಲ್ಲಿನ ಜೆರ್ಸಿಯನ್ನೇ ಈ ಬಾರಿ ಕೂಡ ಮುಂದುವರೆಸಿರುವುದು ವಿಶೇಷ.

10 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡದ ಜೆರ್ಸಿಯ ಬಣ್ಣ ಬದಲಾಗಿದೆ. ಕಪ್ಪು-ಕೆಂಪು ಇದ್ದ ಜಾಗದಲ್ಲಿ ಇದೀಗ ನೀಲಿ-ಕೆಂಪು ಬಣ್ಣಗಳನ್ನು ಬಳಸಲಾಗಿದೆ. ಹಾಗೆಯೇ ತಂಡದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿದೆ. ಇದರ ಜೊತೆಗೆ ಲೋಗೋವನ್ನು ಕೂಡ ಬದಲಿಸಲಾಗಿದೆ.

11 / 11
Follow us
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್

ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ

ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ

ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್