IPL 2024: ಪ್ಲೇಆಫ್ ಹಂತಕ್ಕೇರುವ 4 ತಂಡಗಳನ್ನು ಹೆಸರಿಸಿದ ಅನಿಲ್ ಕುಂಬ್ಳೆ
TV9 Web | Updated By: ಝಾಹಿರ್ ಯೂಸುಫ್
Updated on:
Apr 01, 2024 | 12:02 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯುತ್ತಿದೆ. ಈ ತಂಡಗಳಲ್ಲಿ ಪ್ಲೇಆಫ್ ಹಂತಕ್ಕೇರಲಿರುವುದು ಕೇವಲ 4 ತಂಡಗಳು ಮಾತ್ರ. ಆ ತಂಡಗಳು ಯಾವುವು ಎಂಬುದರ ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಶುರುವಾಗಿ ಈಗಾಗಲೇ 13 ಪಂದ್ಯಗಳು ಮುಗಿದಿವೆ. ಮೊದಲ ವಾರದಲ್ಲೇ ತವರು ಮೈದಾನದಲ್ಲಿ ಬಹುತೇಕ ತಂಡಗಳು ಪರಾಕ್ರಮ ಮೆರೆದಿದೆ. ಇದಾಗ್ಯೂ ಮುಂಬೈ ಇಂಡಿಯನ್ಸ್ ತಂಡ ಇನ್ನೂ ಕೂಡ ಗೆಲುವಿನ ಖಾತೆ ತೆರೆದಿಲ್ಲ. ಉಳಿದ 9 ತಂಡಗಳು ಮೊದಲ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇತ್ತ ಮೊದಲ ವಾರದ ಪ್ರದರ್ಶನದ ಬೆನ್ನಲ್ಲೇ ಈ ಬಾರಿ ಪ್ಲೇಆಫ್ ಹಂತಕ್ಕೇರುವ 4 ತಂಡಗಳಾವುವು ಎಂಬುದನ್ನು ತಿಳಿಸಿದ್ದಾರೆ ದಿ ಲೆಜೆಂಡ್ ಅನಿಲ್ ಕುಂಬ್ಳೆ.
2 / 6
ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಅನಿಲ್ ಕುಂಬ್ಳೆ, ಈ ಸಲ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ಹಂತಕ್ಕೇರುವುದು ಖಚಿತ ಎಂದಿದ್ದಾರೆ. ಆರ್ಆರ್ ತಂಡವು ಉತ್ತಮ ಸಮತೋಲನದಿಂದ ಕೂಡಿದ್ದು, ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ಪ್ರವೇಶಿಸುವುದು ಖಚಿತ ಎಂದು ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
3 / 6
ಇನ್ನು ಪ್ಲೇಆಫ್ ಹಂತಕ್ಕೇರುವ 2ನೇ ತಂಡವಾಗಿ ಮುಂಬೈ ಇಂಡಿಯನ್ಸ್ ಅನ್ನು ಹೆಸರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಈ ಹಿಂದೆ ಕೂಡ ಆರಂಭಿಕ ಪಂದ್ಯಗಳಲ್ಲಿ ಸೋತು, ಆ ಬಳಿಕ ಕಂಬ್ಯಾಕ್ ಮಾಡಿದ ಇತಿಹಾಸ ಹೊಂದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಸಹ ಪ್ಲೇಆಫ್ ಹಂತಕ್ಕೇರಲಿದೆ ಎಂದು ಕುಂಬ್ಳೆ ಹೇಳಿದ್ದಾರೆ.
4 / 6
ಹಾಗೆಯೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಹಳೆಯ ಆಟಗಾರರಾದ ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ರಿಂಕು ಸಿಂಗ್ ಅವರಿಂದ ಉತ್ತಮ ಪ್ರದರ್ಶನ ಮೂಡಿಬರುತ್ತಿದೆ. ಇದೀಗ ಶ್ರೇಯಸ್ ಅಯ್ಯರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಹೀಗಾಗಿ ಕೆಕೆಆರ್ ಕೂಡ ಪ್ಲೇಆಫ್ ಹಂತಕ್ಕೇರುವುದನ್ನು ಎದುರು ನೋಡಬಹುದು ಎಂದಿದ್ದಾರೆ.
5 / 6
ಇನ್ನು ಪ್ಲೇಆಫ್ ಹಂತಕ್ಕೇರುವ ನಾಲ್ಕನೇ ತಂಡವಾಗಿ ಅನಿಲ್ ಕುಂಬ್ಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೆಸರಿಸಿದ್ದಾರೆ. ಆರ್ಸಿಬಿ ಕಳೆದ ಎರಡು ಸೀಸನ್ಗಳಿಂದ ನಾಕೌಟ್ ಹಂತಕ್ಕೇರಿದೆ. ಈ ಬಾರಿ ಕೂಡ ಆರ್ಸಿಬಿ ಉತ್ತಮ ತಂಡವನ್ನು ಹೊಂದಿದ್ದು, ಹೀಗಾಗಿ ಪ್ಲೇಆಫ್ ಹಂತಕ್ಕೇರುವುದನ್ನು ನಿರೀಕ್ಷಿಸಬಹುದು ಎಂದು ತಿಳಿಸಿದ್ದಾರೆ.
6 / 6
ಅನಿಲ್ ಕುಂಬ್ಳೆ ಪ್ರಕಾರ, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸುವುದು ಖಚಿತ. ಅದರಂತೆ ಈ ನಾಲ್ಕು ತಂಡಗಳು ಪ್ಲೇಆಫ್ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.