ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಲ್ಝಾರಿ ಜೋಸೆಫ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3.4 ಓವರ್ಗಳಲ್ಲಿ 38 ರನ್ ನೀಡಿದ್ದ ಅಲ್ಝಾರಿ, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 43 ರನ್ ಬಿಟ್ಟು ಕೊಟ್ಟಿದ್ದರು. ಇನ್ನು ಕೆಕೆಆರ್ ವಿರುದ್ಧ 2 ಓವರ್ಗಳಲ್ಲಿ 34 ರನ್ ಚಚ್ಚಿಸಿಕೊಂಡಿದ್ದರು.