Virat Kohli: RCB ಸೋಲಿಗೆ ವಿರಾಟ್ ಕೊಹ್ಲಿ ಕಾರಣ..!

Edited By:

Updated on: Mar 30, 2024 | 7:31 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್ 2024) ಇದುವರೆಗೆ ಮೂರು ಪಂದ್ಯಗಳನ್ನಾಡಿರುವ ಆರ್​ಸಿಬಿ ತಂಡವು 2 ಮ್ಯಾಚ್​ಗಳಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋತಿದ್ದ ಆರ್​ಸಿಬಿ ಆ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ದ ಜಯ ಸಾಧಿಸಿತ್ತು. ಇದೀಗ ಕೆಕೆಆರ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಮೂಲಕ IPL 2024 ರಲ್ಲಿ ತವರಿನಲ್ಲಿ ಪರಾಜಯಗೊಂಡ ಮೊದಲ ತಂಡ ಎನಿಸಿಕೊಂಡಿದೆ.

1 / 8
ಇಂಡಿಯನ್ ಪ್ರೀಮಿಯರ್ ಲೀಗ್​ನ​ (IPL 2024) ತನ್ನ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ RCB ತಂಡವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿದ್ದರು.

2 / 8
ಅದರಂತೆ ಇನಿಂಗ್ಸ್ ಆರಂಭಿಸಿದ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಆರ್​ಸಿಬಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 8 ರನ್​ಗಳಿಸಿ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಗ್ರೀನ್ ಜೊತೆಗೂಡಿ ಅಬ್ಬರಿಸಿದ ಕಿಂಗ್ ಕೊಹ್ಲಿ ಪವರ್​ಪ್ಲೇನಲ್ಲಿ ತಂಡದ ಮೊತ್ತವನ್ನು 61 ಕ್ಕೆ ತಂದು ನಿಲ್ಲಿಸಿದರು.

3 / 8
ಇನ್ನು ಪವರ್​ಪ್ಲೇ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹಾಫ್ ಸೆಂಚುರಿ ಬಳಿಕ ಕೊಹ್ಲಿಯ ಬ್ಯಾಟ್ ಝಳಪಳಿಸಲಿಲ್ಲ ಎಂಬುದೇ ಸತ್ಯ. ಪವರ್​ಪ್ಲೇನಲ್ಲಿ 10ರ ಸರಾಸರಿಯಲ್ಲಿ ರನ್ ಕಲೆಹಾಕಿದ ಆರ್​ಸಿಬಿ 7 ರಿಂದ 11 ಓವರ್​ವರೆಗೆ ಕೇವಲ 5.2ರ ಸರಾಸರಿಯಲ್ಲಿ ರನ್​ ಕಲೆಹಾಕಿತು.

4 / 8
ಅಲ್ಲದೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 182 ರನ್ ಗಳಿಸಿತು. ಇನ್ನು ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಬಾರಿಸಿ ಅಜೇಯರಾಗಿ ಉಳಿದರು.

5 / 8
ಅಂದರೆ ಇಲ್ಲಿ ಕೊಹ್ಲಿ 10 ಓವರ್​ಗಳನ್ನು​ (1 ಎಸೆತ ಕಡಿಮೆ) ಎದುರಿಸಿದ್ದರು. ಇದಾಗ್ಯೂ ಅವರು ಕಲೆಹಾಕಿದ್ದು 8.3 ರ ಸರಾಸರಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೊಹ್ಲಿ ಆ ಬಳಿಕ 30 ರನ್​ ಕಲೆಹಾಕಲು ಬರೋಬ್ಬರಿ 20 ಎಸೆತಗಳನ್ನು ತೆಗೆದುಕೊಂಡಿದ್ದರು.

6 / 8
ಅಂದರೆ ನಿರ್ಣಾಯಕ ಹಂತದಲ್ಲಿ ವಿರಾಟ್ ಕೊಹ್ಲಿ ಕಡೆಯಿಂದ ಸ್ಪೋಟಕ ಬ್ಯಾಟಿಂಗ್ ಮೂಡಿಬಂದಿರಲಿಲ್ಲ. ಕೊಹ್ಲಿಯ ಈ ನಿಧಾನಗತಿಯ ಬ್ಯಾಟಿಂಗ್​ನಿಂದಾಗಿ ಆರ್​ಸಿಬಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಿಲ್ಲ ಎಂಬ ವಾದವನ್ನು ಇದೀಗ ಅಭಿಮಾನಿಗಳು ಮುಂದಿಡುತ್ತಿದ್ದಾರೆ.

7 / 8
ಸೆಟ್ ಬ್ಯಾಟ್ಸ್​ಮನ್ ಆಗಿ ಕ್ರೀಸ್​ನಲ್ಲಿದ್ದ ವಿರಾಟ್ ಕೊಹ್ಲಿ ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರೆ ಆರ್​ಸಿಬಿ ತಂಡದ ಮೊತ್ತ 200ರ ಗಡಿದಾಟುತ್ತಿತ್ತು. ಆದರೆ ಕೊಹ್ಲಿ ಕಡೆಯಿಂದ ಅಂತಹ ಇನಿಂಗ್ಸ್ ಬರಲೇ ಇಲ್ಲ. ಇದಕ್ಕೆ ಸಾಕ್ಷಿ ಅವರು ಕೊನೆಯ 20 ಎಸೆತಗಳಲ್ಲಿ 30 ರನ್​ಗಳಿಸಿರುವುದು.

8 / 8
ಅದೇ ಕೆಕೆಆರ್ ತಂಡವು ಮೊದಲ 6 ಓವರ್​​ಗಳಲ್ಲೇ 85 ರನ್ ಸಿಡಿಸಿದ್ದರು. ಅಂದರೆ ಪವರ್​ಪ್ಲೇ ಜೊತೆಗೆ ಇನಿಂಗ್ಸ್ ಪೂರ್ತಿ ಕ್ರೀಸ್​ನಲ್ಲಿದ್ದ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಬಾರಿಸಿದರೆ, ಕೆಕೆಆರ್ 36 ಎಸೆತಗಳಲ್ಲಿ 85 ರನ್​ ಸಿಡಿಸಿದ್ದರು. ಇಲ್ಲಿಯೇ ರನ್​ ಸರಾಸರಿಯ ವ್ಯತ್ಯಾಸ ತಿಳಿಯಬಹುದು. ಹೀಗಾಗಿ​ ಆರ್​ಸಿಬಿ ತಂಡದ ಸೋಲಿಗೆ ವಿರಾಟ್ ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಕಾರಣ ಎಂದು ಅಭಿಮಾನಿಗಳು ದೂಷಿಸುತ್ತಿದ್ದಾರೆ.