- Kannada News Photo gallery Cricket photos IPL 2024: Gujarat Titans also wanted Rohit Sharma in the GT
IPL 2024: ರೋಹಿತ್ ಶರ್ಮಾ ಮೇಲೆ ಕಣ್ಣಿಟ್ಟ ಗುಜರಾತ್ ಟೈಟಾನ್ಸ್
IPL 2024: ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು 6 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಜೊತೆ ಯಾವುದಾದರೂ ಫ್ರಾಂಚೈಸಿ ಟ್ರೇಡ್ ಡೀಲ್ ಕುದುರಿಸಿಕೊಳ್ಳಲು ಯಶಸ್ವಿಯಾದರೆ ಹಿಟ್ಮ್ಯಾನ್ ಹೊಸ ತಂಡದ ನಾಯಕರಾಗಿ ಕಾಣಿಸಿಕೊಳ್ಳಬಹುದು.
Updated on: Dec 18, 2023 | 11:58 AM

ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಐಪಿಎಲ್ ಟ್ರೇಡ್ ವಿಂಡೋ ಮೂಲಕ ಖರೀದಿಸಿ ನಾಯಕನ ಪಟ್ಟ ನೀಡಿದೆ.

ಇದರೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಮಾಜಿ ಕ್ಯಾಪ್ಟನ್ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೆ ಹಿಟ್ಮ್ಯಾನ್ ಈ ಬಾರಿ ಕೇವಲ ಬ್ಯಾಟರ್ ಆಗಿ ಮುಂಬೈ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅತ್ತ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಪದಚ್ಯುತಿಗೊಳ್ಳುತ್ತಿದ್ದಂತೆ, ಇತ್ತ ಕೆಲ ಫ್ರಾಂಚೈಸಿಗಳು ಹಿಟ್ಮ್ಯಾನ್ ಖರೀದಿಗೆ ಆಸಕ್ತಿ ತೋರಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಿಟ್ಟ ಟ್ರೇಡಿಂಗ್ ಆಫರ್ ಅನ್ನು ಮುಂಬೈ ಇಂಡಿಯನ್ಸ್ ತಿರಸ್ಕರಿಸಿದೆ.

ಇದರ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ ಕೂಡ ರೋಹಿತ್ ಶರ್ಮಾ ಅವರ ಖರೀದಿಗೆ ಮುಂದಾಗಿರುವುದು ಬಹಿರಂಗವಾಗಿದೆ. ಹಿಟ್ಮ್ಯಾನ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಗುಜರಾತ್ ಫ್ರಾಂಚೈಸಿ ಬಯಸಿತ್ತು. ಅದರಂತೆ ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆಯನ್ನೂ ಕೂಡ ನಡೆಸಿದೆ.

ಆದರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾಗಾಗಿ ಮುಂದಿಟ್ಟ ಆಫರ್ ಅನ್ನೂ ಕೂಡ ಮುಂಬೈ ಇಂಡಿಯನ್ಸ್ಗೆ ಒಪ್ಪಿಗೆಯಾಗಿರಲಿಲ್ಲ. ಎರಡೂ ಫ್ರಾಂಚೈಸಿಗಳು ಸಹಮತಕ್ಕೆ ಬಾರದ ಕಾರಣ ಇದೀಗ ಈ ಡೀಲ್ ಕೂಡ ಕ್ಯಾನ್ಸಲ್ ಆಗಿದೆ ಎಂದು ವರದಿಯಾಗಿದೆ.

ಇದಾಗ್ಯೂ ರೋಹಿತ್ ಶರ್ಮಾ ಅವರಿಗಾಗಿ ತೆರೆಮರೆಯ ಪ್ರಯತ್ನವಂತು ಮುಂದುವರೆಯಲಿದೆ. ಏಕೆಂದರೆ ಐಪಿಎಲ್ ಹರಾಜಿನ ಬಳಿಕ, ಅಂದರೆ ಡಿಸೆಂಬರ್ 20 ರಿಂದ ಟ್ರೇಡ್ ವಿಂಡೋ ಓಪನ್ ಆಗಲಿದೆ. ಈ ವೇಳೆ ಮತ್ತೆ ಕೆಲ ಫ್ರಾಂಚೈಸಿಗಳು ರೋಹಿತ್ ಶರ್ಮಾ ಖರೀದಿಗಾಗಿ ಮುಂದಾಗುವ ಸಾಧ್ಯತೆಯಿದೆ.

ಅದರಂತೆ ಮುಂಬೈ ಇಂಡಿಯನ್ಸ್ ಜೊತೆ ಯಾವುದಾದರೂ ಫ್ರಾಂಚೈಸಿ ಡೀಲ್ ಕುದುರಿಸಿಕೊಳ್ಳಲು ಯಶಸ್ವಿಯಾದರೆ ರೋಹಿತ್ ಶರ್ಮಾ ಬೇರೊಂದು ತಂಡದ ಪರ ಕಣಕ್ಕಿಳಿಯಬಹುದು. ಹೀಗಾಗಿ ಐಪಿಎಲ್ ಹರಾಜಿನ ಬಳಿಕ ಹಿಟ್ಮ್ಯಾನ್ ಖರೀದಿಗಾಗಿ ಕೆಲ ಫ್ರಾಂಚೈಸಿಗಳು ಭರ್ಜರಿ ಪ್ಲ್ಯಾನ್ ರೂಪಿಸುವ ಸಾಧ್ಯತೆಗಳಿವೆ.
