IPL 2024: ಕಿಂಗ್ ಕೊಹ್ಲಿ, ಎಬಿಡಿ ವಿಶೇಷ ದಾಖಲೆ ಪಟ್ಟಿಗೆ ರಸೆಲ್ ಸೇರ್ಪಡೆ

| Updated By: ಝಾಹಿರ್ ಯೂಸುಫ್

Updated on: Mar 24, 2024 | 1:58 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ​ (ಐಪಿಎಲ್ 2024) ಮೂರನೇ ಪಂದ್ಯದಲ್ಲಿ ಎಸ್​ಆರ್​ಹೆಚ್​ ವಿರುದ್ಧ 7 ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಕೆಕೆಆರ್ ತಂಡದ ಸ್ಪೋಟಕ ದಾಂಡಿಗ ಆ್ಯಂಡ್ರೆ ರಸೆಲ್ ಐಪಿಎಲ್​ನಲ್ಲಿ 200 ಸಿಕ್ಸ್​ಗಳ ದಾಖಲೆ ಬರೆದಿದ್ದಾರೆ. ಇದರ ಜೊತೆಗೆ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಐಪಿಎಲ್​ನ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

1 / 6
IPL 2024: ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಆ್ಯಂಡ್ರೆ ರಸೆಲ್ (Andre Russell) ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳೊಂದಿಗೆ ವಿರಾಟ್ ಕೊಹ್ಲಿ (Virat Kohli) ಹಾಗೂ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಪಟ್ಟಿಗೂ ಸೇರ್ಪಡೆಯಾಗಿದ್ದಾರೆ.

2 / 6
ಎಸ್​ಆರ್​ಹೆಚ್ ವಿರುದ್ಧದ ಈ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 25 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 64 ರನ್ ಚಚ್ಚಿದ್ದರು. ಅದು ಕೂಡ 256ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.

3 / 6
ಈ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಕೊನೆಯ 4 ಓವರ್​ಗಳ ಮೂಲಕ 1000 ರನ್ ಕಲೆಹಾಕಿದ ವಿಶೇಷ ದಾಖಲೆಯನ್ನು ಆ್ಯಂಡ್ರೆ ರಸೆಲ್ ಬರೆದಿದ್ದಾರೆ. ಅಲ್ಲದೆ 200+ ಸ್ಟ್ರೈಕ್​ ರೇಟ್​ನಲ್ಲಿ ಡೆತ್ ಓವರ್​ಗಳಲ್ಲಿ ಸಾವಿರ ರನ್ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 6
ಇದಕ್ಕೂ ಮುನ್ನ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಎಬಿಡಿ ಕೊನೆಯ 4 ಓವರ್​ಗಳಲ್ಲಿ 232.56 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿ ಒಟ್ಟು 1421 ರನ್ ಕಲೆಹಾಕಿದ್ದಾರೆ. ಈ ಮೂಲಕ ಡೆತ್ ಓವರ್​ಗಳಲ್ಲಿ ಅತ್ಯುತ್ತಮ ಸ್ಟ್ರೈಕ್​ ರೇಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 6
ಎಬಿಡಿ ಬಳಿಕ ಈ ಸಾಧನೆ ಮಾಡಿದ್ದು ವಿರಾಟ್ ಕೊಹ್ಲಿ. ಐಪಿಎಲ್ ಪಂದ್ಯದ ಕೊನೆಯ 4 ಓವರ್​ಗಳಲ್ಲಿ ಅಬ್ಬರಿಸಿರುವ ಕೊಹ್ಲಿ 202.51 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿ ಒಟ್ಟು 1045 ರನ್ ಕಲೆಹಾಕಿದ್ದಾರೆ. ಈ ಮೂಲಕ ಡೆತ್ ಓವರ್​ಗಳಲ್ಲಿ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

6 / 6
ಇದೀಗ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಆ್ಯಂಡ್ರೆ ರಸೆಲ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಡೆತ್ ಓವರ್​ಗಳಲ್ಲಿ 206.31 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿರುವ ರಸೆಲ್ ಇದುವರೆಗೆ ಒಟ್ಟು 1013 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್​ನ ಕೊನೆಯ 4 ಓವರ್​ಗಳಲ್ಲಿ 200+ ಸ್ಟ್ರೈಕ್​ ರೇಟ್​ನಲ್ಲಿ ಸಾವಿರಕ್ಕೂ ಅಧಿಕ ರನ್​ ಕಲೆಹಾಕಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.