- Kannada News Photo gallery Cricket photos IPL 2024 LSG vs RR six wicketkeepers playing in single match
IPL 2024: ಅಪರೂಪ; ಒಂದೇ ಪಂದ್ಯದಲ್ಲಿ 6 ವಿಕೆಟ್ ಕೀಪರ್ಸ್..!
IPL 2024: ರಾಜಸ್ಥಾನದ ತವರು ಮೈದಾನ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ 4ನೇ ಐಪಿಎಲ್ ಪಂದ್ಯ ತೀರ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಉಭಯ ತಂಡಗಳಿಂದ ಬರೋಬ್ಬರಿ 6 ವಿಕೆಟ್ಕೀಪರ್ಗಳು ಕಣಕ್ಕಿಳಿದಿದ್ದಾರೆ.
Updated on:Mar 24, 2024 | 6:35 PM

ರಾಜಸ್ಥಾನದ ತವರು ಮೈದಾನ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ 4ನೇ ಐಪಿಎಲ್ ಪಂದ್ಯ ತೀರ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಉಭಯ ತಂಡಗಳಿಂದ ಬರೋಬ್ಬರಿ 6 ವಿಕೆಟ್ಕೀಪರ್ಗಳು ಕಣಕ್ಕಿಳಿದಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಬಗ್ಗೆ ಹೇಳುವುದಾದರೆ.. ಈ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂವರು ವಿಕೆಟ್ಕೀಪರ್ಗಳು ಸ್ಥಾನ ಪಡೆದಿದ್ದಾರೆ. ಅವರಲ್ಲಿ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ಧೃವ್ ಜುರೇಲ್ ಸೇರಿದ್ದಾರೆ.

ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೋಸ್ ಬಟ್ಲರ್ 9 ಎಸೆತಗಳಲ್ಲಿ 2 ಬೌಂಡರಿ ಸಹಿತ 11 ರನ್ ಕಲೆಹಾಕಲಷ್ಟೇ ಶಕ್ತರಾದರು.

ರಾಜಸ್ಥಾನ ಪರ ನಾಯಕನ ಇನ್ನಿಂಗ್ಸ್ ಆಡಿದ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ ಅಜೇಯ 82 ರನ್ ಕಲೆಹಾಕಿದರು. ಅಷ್ಟೆ ಅಲ್ಲದೆ ಸ್ಯಾಮ್ಸನ್ ಪ್ರಸ್ತುತ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದಾರೆ.

ಈ ಇಬ್ಬರ ನಂತರ ಬ್ಯಾಟಿಂಗ್ಗೆ ಇಳಿದಿದ್ದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧೃವ್ ಜುರೇಲ್ ಕೂಡ ರಾಜಸ್ಥಾನ ಪರ ಕೆಳಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್ ನಡೆಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 12 ಎಸೆತಗಳನ್ನು ಎದುರಿಸಿದ ಧೃವ 1 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 20 ರನ್ ಕಲೆಹಾಕಿದರು.

ಇನ್ನು ಲಕ್ನೋ ವಿಚಾರಕ್ಕೆ ಬರುವುದಾದರೆ.. ಈ ತಂಡದಿಂದಲೂ ಮೂವರು ವಿಕೆಟ್ಕೀಪರ್ಗಳು ಕಣಕ್ಕಿಳಿದಿದ್ದಾರೆ. ಇವರಲ್ಲಿ ನಾಯಕ ಕೆಎಲ್ ರಾಹುಲ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ವೆಸ್ಟ್ ಇಂಡೀಸ್ನ ನಿಕೋಲಸ್ ಪೂರನ್ ಸೇರಿದ್ದಾರೆ.

ರಾಜಸ್ಥಾನ ನೀಡಿರುವ 194 ರನ್ಗಳ ಗುರಿ ಬೆನ್ನಟ್ಟಿರುವ ಲಕ್ನೋ ಪರ ನಾಯಕ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಡಿ ಕಾಕ್ ಮೊದಲ ಓವರ್ನಲ್ಲೇ ಕೇವಲ 4 ರನ್ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ತಂಡದ ಪರ ನಾಯಕನ ಇನ್ನಿಂಗ್ಸ್ ಆಡುತ್ತಿರುವ ಕೆಎಲ್ ರಾಹುಲ್ ನಿಧಾನವಾಗಿ ತಂಡದ ಸ್ಕೋರ್ ಬೋರ್ಡ್ ಮೇಲೆತ್ತುತ್ತಿದ್ದಾರೆ. ನಿಕೋಲಸ್ ಪೂರನ್ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
Published On - 6:35 pm, Sun, 24 March 24




