IPL 2024: 19ನೇ ಓವರ್ನಲ್ಲಿ ಕುಣಿದು ಕುಪ್ಪಳಿಸಿದ ಕಾವ್ಯ: 20ನೇ ಓವರ್ನಲ್ಲಿ ಪೆಚ್ಚು ಮೊರೆ ಹಾಕಿ ನಿಂತರು..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಮೂರನೇ ಪಂದ್ಯದಲ್ಲಿ ಕೆಕೆಆರ್ ಮತ್ತು ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 208 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡವು 204 ರನ್ಗಳಿಸಿ 4 ರನ್ಗಳಿಂದ ಸೋಲೊಪ್ಪಿಕೊಂಡಿತು.
Updated on:Mar 24, 2024 | 11:42 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 3ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದ ವೇಳೆ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಹಾಗೂ ಅವರ ತಂದೆ ಕಲಾನಿತಿ ಮಾರನ್ ಈಡನ್ ಗಾರ್ಡನ್ಸ್ ಸ್ಟೇಡಿಯಂ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ರಣರೋಚಕ ಪಂದ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ಹೊರಹಾಕಿದ್ದರು.

ಅದರಲ್ಲೂ ಕೆಕೆಆರ್ ಪರ ವಾಲಿದ್ದ ಪಂದ್ಯವನ್ನು ಕೊನೆಯ 5 ಓವರ್ಗಳಲ್ಲಿ ಹೆನ್ರಿಕ್ ಕ್ಲಾಸೆನ್ ಎಸ್ಆರ್ಹೆಚ್ ಪರ ವಾಲುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಮಿಚೆಲ್ ಸ್ಟಾರ್ಕ್ ಎಸೆದ 19ನೇ ಓವರ್ನಲ್ಲಿ ಕ್ಲಾಸೆನ್-ಶಹಬಾಝ್ ಜೊತೆಗೂಡಿ 26 ರನ್ ಚಚ್ಚಿದ್ದರು.

ಅತ್ತ ಹೆನ್ರಿಕ್ ಕ್ಲಾಸೆನ್ ನಿರ್ಣಾಯಕ ಹಂತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸುತ್ತಿದ್ದಂತೆ ಎಸ್ಆರ್ಹೆಚ್ ತಂಡ ಮಾಲಕಿ ಕಾವ್ಯ ಮಾರನ್ ಕುಣಿದು ಕುಪ್ಪಳಿಸಿದರು. ಅಲ್ಲದೆ ಕೊನೆಯ ಓವರ್ನಲ್ಲಿ 13 ರನ್ಗಳ ಟಾರ್ಗೆಟ್ ಪಡೆದಿದ್ದಾಗ ಗೆಲುವು ತಮ್ಮದೇ ಎಂಬ ವಿಶ್ವಾಸದಲ್ಲಿದ್ದರು.

ಆದರೆ ಕೊನೆಯ ಓವರ್ನಲ್ಲಿ ಹರ್ಷಿತ್ ರಾಣಾ ಕೇವಲ 8 ರನ್ ನೀಡುವ ಮೂಲಕ ಕೆಕೆಆರ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇತ್ತ 19ನೇ ಓವರ್ನಲ್ಲಿ ಕುಣಿದು ಕುಪ್ಪಳಿಸಿದ್ದ ಕಾವ್ಯ ಮಾರನ್ 20ನೇ ಓವರ್ ವೇಳೆಗೆ ಸಪ್ಪೆ ಮುಖದೊಂದಿಗೆ ಕಾಣಿಸಿಕೊಂಡರು. ಇದೀಗ ಕಾವ್ಯ ಮಾರನ್ ಅವರ ಫೋಟೋಗಳು ವೈರಲ್ ಆಗಿದೆ.

ಅಂದಹಾಗೆ ಕಾವ್ಯ ಮಾರನ್ ಈ ರೀತಿ ಗೆಲ್ಲುವ ಮುನ್ನವೇ ಸಂಭ್ರಮಿಸಿ ಪೇಚಿಗೆ ಸಿಲುಕಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ವಿಜಯಕ್ಕೂ ಮುನ್ನ ಸಖತ್ ಆಗಿ ಸಂಭ್ರಮಿಸಿ, ಸೋತ ಬಳಿಕ ಪೆಚ್ಚು ಮೊರೆ ಹಾಕಿಕೊಂಡಿದ್ದರು. ಇದೀಗ ಅದರ ಪುನರಾರ್ತನೆ ಎಂಬಂತೆ ಕಾವ್ಯ ಮಾರನ್ ಮತ್ತೊಮ್ಮೆ ಅದೇ ರೀತಿ ಕಾಣಿಸಿಕೊಂಡಿದ್ದಾರೆ.
Published On - 11:41 am, Sun, 24 March 24



















