MS Dhoni: ಸಿಕ್ಸ್ ಸಿಡಿಸಿಯೇ ದಾಖಲೆ ಬರೆದ ಧೋನಿ
TV9 Web | Updated By: ಝಾಹಿರ್ ಯೂಸುಫ್
Updated on:
Apr 01, 2024 | 10:52 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಇದುವರೆಗೆ ಮೂರು ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ 2 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರ್ಸಿಬಿ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದ್ದ ಸಿಎಸ್ಕೆ ಆ ಬಳಿಕ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಬೀಗಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 20 ರನ್ಗಳಿಂದ ಸೋಲನುಭವಿಸಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲೇ ಕೊನೆಯ ಎರಡು ಓವರ್ಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆಯೊಂದು ಮಹೇಂದ್ರ ಸಿಂಗ್ ಧೋನಿಯ (MS Dhoni) ಹೆಸರಿನಲ್ಲಿದೆ. ಈ ದಾಖಲೆಯ ಜೊತೆಗೆ ಇದೀಗ ಧೋನಿ ವಿಶೇಷ ಮೈಲ್ಲುಗಲ್ಲನ್ನು ಮುಟ್ಟಿದ್ದಾರೆ.
2 / 5
ವಿಶಾಖಪಟ್ಟಣಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ ಧೋನಿ 4 ಫೋರ್ ಹಾಗೂ 3 ಸಿಕ್ಸ್ಗಳೊಂದಿಗೆ ಅಜೇಯ 37 ರನ್ ಬಾರಿಸಿದ್ದರು. ಈ ಮೂರು ಸಿಕ್ಸ್ಗಳೊಂದಿಗೆ ಧೋನಿ ಐಪಿಎಲ್ನ ಕೊನೆಯ ಎರಡು ಓವರ್ಗಳಲ್ಲಿ ಒಟ್ಟು 100 ಸಿಕ್ಸ್ಗಳನ್ನು ಬಾರಿಸಿದ ವಿಶೇಷ ದಾಖಲೆ ಬರೆದಿದ್ದಾರೆ.
3 / 5
ಅಂದರೆ ಐಪಿಎಲ್ನ ಪಂದ್ಯದ 19ನೇ ಮತ್ತು 20ನೇ ಓವರ್ಗಳಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸುವ ಮೂಲಕ ಧೋನಿ 100 ಸಿಕ್ಸ್ಗಳ ಸಾಧನೆ ಮಾಡಿದ್ದಾರೆ. ಧೊನಿಯನ್ನು ಹೊರತುಪಡಿಸಿ ಬೇರೆ ಯಾವುದೇ ಬ್ಯಾಟರ್ 19 ಮತ್ತು 20ನೇ ಓವರ್ಗಳ ಮೂಲಕ 75 ಸಿಕ್ಸ್ಗಳನ್ನು ಕೂಡ ಬಾರಿಸಿಲ್ಲ ಎಂಬುದು ವಿಶೇಷ.
4 / 5
ಹಾಗೆಯೇ 20ನೇ ಓವರ್ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಮಹೇಂದ್ರ ಸಿಂಗ್ ಧೋನಿ ಇನಿಂಗ್ಸ್ನ ಕೊನೆಯ ಓವರ್ನಲ್ಲಿ ಒಟ್ಟು 61 ಸಿಕ್ಸ್ ಬಾರಿಸುವ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ.
5 / 5
ಒಟ್ಟಿನಲ್ಲಿ 42ನೇ ವಯಸ್ಸಿನಲ್ಲೂ ಮಹೇಂದ್ರ ಸಿಂಗ್ ಧೋನಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿದ್ದು, ನಿವೃತ್ತಿಗೂ ಮುನ್ನ ಈ ದಾಖಲೆ ಪಟ್ಟಿ ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ.