IPL 2024: RCB ತಂಡದ ಕಳಪೆ ದಾಖಲೆ ಸರಿಗಟ್ಟಿದ DC
TV9 Web | Updated By: ಝಾಹಿರ್ ಯೂಸುಫ್
Updated on:
Apr 04, 2024 | 10:34 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 100 ಕ್ಕಿಂತ ಅಧಿಕ ರನ್ಗಳ ಅಂತರದಿಂದ ಸೋತ ತಂಡಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಅಗ್ರಸ್ಥಾನದಲ್ಲಿದೆ. 2008 ರಲ್ಲಿ ಕೆಕೆಆರ್ ವಿರುದ್ಧ ಹೀನಾಯ ಸೋಲನುಭವಿಸಿ ಐಪಿಎಲ್ ಅಭಿಮಾನ ಆರಂಭಿಸಿದ್ದ ಆರ್ಸಿಬಿ ತಂಡದ ಈ ಕಳಪೆ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಸರಿಗಟ್ಟಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಮೂರು ತಂಡಗಳು ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಪಟ್ಟಿಯಲ್ಲಿ ಮೂರು ಪಂದ್ಯಗಳಲ್ಲಿ ಮೂರು ಸೊಲು ಕಂಡಿರುವ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದ್ದರೆ, 4 ಮ್ಯಾಚ್ಗಳಲ್ಲಿ ತಲಾ 3 ಸೋಲುಗಳನ್ನು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ನಂತರದ ಸ್ಥಾನಗಳಲ್ಲಿದೆ.
2 / 6
ವಿಶೇಷ ಎಂದರೆ ಇದೀಗ ಮೂರನೇ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದ್ದ ಅನಗತ್ಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಅದು ಸಹ 106 ರನ್ಗಳ ಪರಾಜಯದೊಂದಿಗೆ ಎಂಬುದು ವಿಶೇಷ.
3 / 6
ಹೌದು, ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 100+ ರನ್ಗಳ ಅಂತರದಿಂದ ಸೋತ ಹೀನಾಯ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. ಆರ್ಸಿಬಿ 2008 ರಲ್ಲಿ ಕೆಕೆಆರ್ ವಿರುದ್ಧ 140 ರನ್ಗಳ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿತ್ತು.
4 / 6
ಇದಾದ ಬಳಿಕ 2011 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 111 ರನ್ಗಳ ಅಂತರದಿಂದ ಆರ್ಸಿಬಿ ಮುಗ್ಗರಿಸಿತ್ತು. ಆನಂತರ 2019 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 118 ರನ್ಗಳ ಸೋಲುಂಡಿತ್ತು. ಈ ಮೂಲಕ ಮೂರು ಬಾರಿ 100 ಕ್ಕಿಂತ ಹೆಚ್ಚಿನ ರನ್ಗಳ ಅಂತರದಿಂದ ಸೋತ ತಂಡವೆಂಬ ಹಣೆಪಟ್ಟಿಯನ್ನು ಆರ್ಸಿಬಿ ತನ್ನದಾಗಿಸಿಕೊಂಡಿತ್ತು.
5 / 6
ಇದೀಗ ಈ ಕಳಪೆ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸರಿಗಟ್ಟಿದೆ. 2008 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 105 ರನ್ಗಳಿಂದ ಸೋತಿದ್ದ ಡೆಲ್ಲಿ ಕ್ಯಾಪಿಟಲ್ಸ್, 2017 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 146 ರನ್ಗಳ ಅಂತರದಿಂದ ಮಕಾಡೆ ಮಲಗಿತ್ತು. ಇದೀಗ ಕೆಕೆಆರ್ ವಿರುದ್ಧ 106 ರನ್ಗಳಿಂದ ಸೋಲನುಭವಿಸಿದೆ.
6 / 6
ಈ ಹೀನಾಯ ಸೋಲಿನೊಂದಿಗೆ ಆರ್ಸಿಬಿ ಹೆಸರಿನಲ್ಲಿದ್ದ ಅತೀ ಹೆಚ್ಚು ಬಾರಿ 100+ ರನ್ಗಳ ಪರಾಜಯದ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಸರಿಗಟ್ಟಿದೆ. ಅಂದಹಾಗೆ ಐಪಿಎಲ್ ಇತಿಹಾಸ ಅತ್ಯಂತ ಹೀನಾಯ ಸೋಲಿನ ದಾಖಲೆ ಕೂಡ ಡೆಲ್ಲಿ ತಂಡದ ಹೆಸರಿನಲ್ಲಿಯೇ ಇದೆ. 2017 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 146 ರನ್ಗಳ ಅಂತರದಿಂದ ಸೋತು ಡೆಲ್ಲಿ ಕ್ಯಾಪಿಟಲ್ಸ್ ಈ ಅನಗತ್ಯ ದಾಖಲೆ ಬರೆದಿದೆ.