MS Dhoni: ಐಪಿಎಲ್ನಲ್ಲಿ ಹೊಸ ಇತಿಹಾಸ ಬರೆದ ಧೋನಿ
IPL 2024: ಐಪಿಎಲ್ 2024 ರ 46ನೇ ಪಂದ್ಯದಲ್ಲಿ ಸಿಎಸ್ಕೆ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 212 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ 18.5 ಓವರ್ಗಳಲ್ಲಿ 134 ರನ್ಗಳಿಗೆ ಆಲೌಟ್ ಆಗಿ 78 ರನ್ಗಳಿಂದ ಸೋಲೊಪ್ಪಿಕೊಂಡಿದೆ.
Updated on: Apr 29, 2024 | 8:58 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 46ನೇ ಪಂದ್ಯದ ಮೂಲಕ ಮಹೇಂದ್ರ ಸಿಂಗ್ ಧೋನಿ (MS Dhoni) ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ 150 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಎಂಬುದು ವಿಶೇಷ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ತಂಡವು 78 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಐಪಿಎಲ್ನಲ್ಲಿ 150 ಪಂದ್ಯಗಳಲ್ಲಿ ವಿಜಯದ ಭಾಗವಾದ ಏಕೈಕ ಆಟಗಾರನಾಗಿ ಮಹೇಂದ್ರ ಸಿಂಗ್ ಧೋನಿ ಹೊರಹೊಮ್ಮಿದ್ದಾರೆ.

ಅಂದರೆ ಐಪಿಎಲ್ನಲ್ಲಿ ಈವರೆಗೆ 259 ಪಂದ್ಯಗಳನ್ನಾಡಿರುವ ಧೋನಿ 150 ಬಾರಿ ಗೆಲುವು ನೋಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 150 ಪಂದ್ಯಗಳ ಯಶಸ್ಸಿನ ಭಾಗವಾದ ಮೊದಲ ಆಟಗಾರನಾಗಿ ಮಹೇಂದ್ರ ಸಿಂಗ್ ಧೋನಿ ಗುರುತಿಸಿಕೊಂಡಿದ್ದಾರೆ.

ಇನ್ನು ಧೋನಿಯನ್ನು ಹೊರತುಪಡಿಸಿ ಐಪಿಎಲ್ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ ಗೆಲುವಿನ ಭಾಗವಾಗಿರುವ ಆಟಗಾರರೆಂದರೆ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ. ಈ ಇಬ್ಬರು ಆಟಗಾರರು ಈವರೆಗೆ 133 ಪಂದ್ಯಗಳಲ್ಲಿ ಯಶಸ್ಸಿನ ರುಚಿ ನೋಡಿದ್ದಾರೆ.

ವಿಶೇಷ ಎಂದರೆ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದಲ್ಲಿ 133 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದರು. ಇದೀಗ ಇತರೆ ಕ್ಯಾಪ್ಟನ್ಗಳ ಕೆಳಗೆ 13 ಗೆಲುವಿನ ಭಾಗವಾಗುವ ಮೂಲಕ ಧೋನಿ ಐಪಿಎಲ್ನಲ್ಲಿ 150 ಪಂದ್ಯಗಳಲ್ಲಿ ಗೆಲುವು ಕಂಡು ಮೊದಲ ಆಟಗಾರನೆಂಬ ವಿಶೇಷ ದಾಖಲೆ ಬರೆದಿದ್ದಾರೆ.



















