IPL 2024: ಅಂಕಪಟ್ಟಿಯಲ್ಲಿ ಟಾಪ್-5 ಗೆ ಎಂಟ್ರಿ ಕೊಟ್ಟ SRH

| Updated By: ಝಾಹಿರ್ ಯೂಸುಫ್

Updated on: Apr 06, 2024 | 6:48 AM

IPL 2024 Points Table: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 18 ಪಂದ್ಯಗಳ ಮುಕ್ತಾಯದ ವೇಳೆಗೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಸೋಲಿಲ್ಲದ ಸರದಾರರಾಗಿ ಮುಂದುವರೆದಿದೆ. ಅಂದರೆ ಆಡಿರುವ ಮೂರು ಮ್ಯಾಚ್​ಗಳಲ್ಲೂ ಗೆಲುವು ದಾಖಲಿಸುವ ಮೂಲಕ IPL 2024 ರ ಅಂಕಪಟ್ಟಿಯಲ್ಲಿ ಈ ತಂಡಗಳು ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದೆ.

1 / 11
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ರ 18 ಪಂದ್ಯಗಳು ಮುಗಿದಿವೆ. ಈ ಹದಿನೆಂಟು ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಅಂಕಪಟ್ಟಿಯಲ್ಲೂ ಮಹತ್ವದ ಬದಲಾವಣೆ ಕಂಡು ಬಂದಿದೆ. ಈ ಬಾರಿ ಪಾಯಿಂಟ್ಸ್ ಟೇಬಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಅಗ್ರಸ್ಥಾನ ಅಲಂಕರಿಸಿದರೆ, ಮುಂಬೈ ಇಂಡಿಯನ್ಸ್ ಕೊನೆಯ ಸ್ಥಾನದಲ್ಲಿದೆ.

2 / 11
7 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಒಟ್ಟು 10 ಅಂಕಗಳನ್ನು ಸಂಪಾದಿಸಿದೆ. ಅಲ್ಲದೆ +1.206 ನೆಟ್​ ರನ್ ಹೊಂದುವ ಮೂಲಕ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

3 / 11
ರಾಜಸ್ಥಾನ್ ರಾಯಲ್ಸ್ ಇದುವರೆಗೆ 7 ಪಂದ್ಯಗಳನ್ನಾಡಿದ್ದು, ಇದರಲ್ಲಿ 6 ಮ್ಯಾಚ್​ನಲ್ಲಿ ಜಯ ಸಾಧಿಸಿದೆ. ಈ ಮೂಲಕ ಒಟ್ಟು 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಪ್ರಸ್ತುತ ನೆಟ್​ ರನ್​ ರೇಟ್ +0.677.

4 / 11
7 ಪಂದ್ಯಗಳಲ್ಲಿ 4 ಜಯ ಹಾಗೂ 3 ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕನೇ ಸ್ಥಾನದಲ್ಲಿದೆ. ಒಟ್ಟು 8 ಅಂಕ ಹೊಂದಿರುವ ಸಿಎಸ್​ಕೆ ತಂಡದ ಪ್ರಸ್ತುತ ನೆಟ್ ರನ್​ ರೇಟ್ +0.529.

5 / 11
ಲಕ್ನೋ ಸೂಪರ್ ಜೈಂಟ್ಸ್ ತಂಡವು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆಡಿರುವ 7 ಪಂದ್ಯಗಳಲ್ಲಿ 4 ಜಯ ಸಾಧಿಸಿರುವ ಎಲ್​ಎಸ್​ಜಿ ಒಟ್ಟು 8 ಅಂಕಗಳೊಂದಿಗೆ +0.123 ನೆಟ್​ ರನ್​ ರೇಟ್ ಹೊಂದಿದೆ.

6 / 11
ಸನ್​ರೈಸರ್ಸ್ ಹೈದರಾಬಾದ್ ತಂಡವು 7 ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದು, ಇದೀಗ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಪ್ರಸ್ತುತ ಎಸ್​ಆರ್​ಹೆಚ್ ತಂಡದ ನೆಟ್ ರನ್ ರೇಟ್ +0.914.

7 / 11
ಪಂಜಾಬ್ ಕಿಂಗ್ಸ್ ತಂಡವು 9ನೇ ಸ್ಥಾನದಲ್ಲಿದ್ದು, ಆಡಿರುವ 8 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ 4 ಅಂಕಗಳನ್ನು ಸಂಪಾದಿಸಿದೆ. ಪಂಜಾಬ್ ಕಿಂಗ್ಸ್ ತಂಡದ ಪ್ರಸ್ತುತ ನೆಟ್​ ರನ್​ ರೇಟ್ -0.292.

8 / 11
8 ಮ್ಯಾಚ್​ಗಳಲ್ಲಿ 4 ಗೆಲುವು ದಾಖಲಿಸಿರುವ ಗುಜರಾತ್ ಟೈಟಾನ್ಸ್ ತಂಡವು 6 ಅಂಕಗಳನ್ನು ಹೊಂದಿದ್ದು, ಈ ಮೂಲಕ 6ನೇ ಸ್ಥಾನ ಅಲಂಕರಿಸಿದೆ. ಗುಜರಾತ್ ಟೈಟಾನ್ಸ್ ತಂಡದ ಪ್ರಸ್ತುತ ನೆಟ್ ರನ್ ರೇಟ್ -1.055.

9 / 11
ಆರ್​ಸಿಬಿ ತಂಡವು ಇದುವರೆಗೆ 8 ಪಂದ್ಯಗಳನ್ನಾಡಿದ್ದು, ಇದರಲ್ಲಿ 7 ಮ್ಯಾಚ್​​ನಲ್ಲಿ ಸೋತಿದೆ. ಈ ಮೂಲಕ ಕೇವಲ 2 ಅಂಕ ಸಂಪಾದಿಸಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅಲ್ಲದೆ ಆರ್​ಸಿಬಿ ತಂಡದ ಪ್ರಸ್ತುತ ನೆಟ್​ ರನ್ ರೇಟ್ -1.046.

10 / 11
8 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು -0.477 ನೆಟ್​ ರನ್​ ರೇಟ್​ನೊಂದಿಗೆ 6 ಅಂಕ ಪಡೆದುಕೊಂಡಿದೆ. ಅದರಂತೆ ಇದೀಗ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

11 / 11
ಏಳು ಪಂದ್ಯಗಳಲ್ಲಿ 3 ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡವು 6 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡದ ನೆಟ್​ ರನ್ ರೇಟ್ -0.133.