IPL 2024: ಕಠಿಣ ಎದುರಾಳಿ ವಿರುದ್ಧ ಕಣಕ್ಕಿಳಿಯಲಿದೆ RCB

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) ಸೀಸನ್ 17 ರಲ್ಲಿ 6 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ಮ್ಯಾಚ್​ಗಳಲ್ಲಿ ಪರಾಜಯಗೊಂಡಿದೆ. ಈ ಹೀನಾಯ ಪ್ರದರ್ಶನದ ಫಲವಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 13, 2024 | 10:05 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಆಡಿರುವ 6 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಸಿಎಸ್​ಕೆ ವಿರುದ್ಧದ ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದ ಆರ್​ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೆ ಆ ಬಳಿಕ ಕೆಕೆಆರ್, ಎಲ್​ಎಸ್​ಜಿ, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿದೆ.

1 / 7
ಇದೀಗ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಯಲು ಆರ್​ಸಿಬಿ ಪಡೆ ಸಜ್ಜಾಗಿ ನಿಂತಿದೆ.  ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ತಂಡದ ಎದುರಾಳಿ ಸನ್​ರೈಸರ್ಸ್ ಹೈದರಾಬಾದ್.

2 / 7
ಅಂದರೆ ಈ ಬಾರಿಯ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿರುವ 5 ಪಂದ್ಯಗಳಲ್ಲಿ ಎಸ್​ಆರ್​​ಹೆಚ್ ತಂಡವು 3 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೆ, 2 ಪಂದ್ಯಗಳಲ್ಲಿ ವಿರೋಚಿತ ಹೋರಾಟ ಪ್ರದರ್ಶಿಸಿತ್ತು. ಹೀಗಾಗಿ ಆರ್​ಸಿಬಿ ತಂಡಕ್ಕೆ ಎಸ್​ಆರ್​ಹೆಚ್ ಕಠಿಣ ಪೈಪೋಟಿ ನೀಡಲಿದೆ.

3 / 7
ಅದರಲ್ಲೂ ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ರನ್​ ಮಳೆ ಹರಿಯುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ 277 ರನ್​ ಕಲೆಹಾಕುವ ಮೂಲಕ ಎಸ್​ಆರ್​ಹೆಚ್ ತಂಡ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಇತ್ತ ಬ್ಯಾಟರ್​ಗಳ ಸ್ವರ್ಗ ಎನಿಸಿಕೊಂಡಿರುವ ಚಿನ್ನಸ್ವಾಮಿ ಮೈದಾನದಲ್ಲಿ ಸನ್​ರೈಸರ್ಸ್ ಬ್ಯಾಟ್ಸ್​ಮನ್​ಗಳು ಅಬ್ಬರಿಸುವ ನಿರೀಕ್ಷೆಯಿದೆ.

4 / 7
ಇದರ ನಡುವೆ ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ಗೆಲುವು ಅನಿವಾರ್ಯ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸ್ತುತ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು, ಮೊದಲ ಸುತ್ತಿನ ಮುಕ್ತಾಯಕ್ಕೂ ಮುನ್ನ ಭರ್ಜರಿ ಜಯ ಸಾಧಿಸಿ 7ನೇ ಸ್ಥಾನಕ್ಕೇರುವ ಅವಕಾಶ ಆರ್​ಸಿಬಿ ತಂಡದ ಮುಂದಿದೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಫಾಫ್ ಪಡೆಯಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

5 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

6 / 7
ಸನ್‌ರೈಸರ್ಸ್ ಹೈದರಾಬಾದ್ ತಂಡ: ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಝ್ ಅಹ್ಮದ್, ನಿತೀಶ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಜಯದೇವ್ ಉನಾದ್ಕಟ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ. ನಟರಾಜನ್, ಟ್ರಾವಿಸ್ ಹೆಡ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್ವಾಲ್, ಉಪೇಂದ್ರ ಯಾದವ್, ಅನ್ಮೋಲ್ಪ್ರೀತ್ ಸಿಂಗ್, ಜಾತವೇಧ್ ಸುಬ್ರಮಣ್ಯನ್, ಸನ್ವಿರ್ ಸಿಂಗ್, ಫಝಲ್ಹಕ್ ಫಾರೂಕಿ, ಮಾರ್ಕೊ ಯಾನ್ಸೆನ್, ಆಕಾಶ್ ಮಹಾರಾಜ್ ಸಿಂಗ್.

7 / 7
Follow us