IPL 2024: 35 ಸಿಕ್ಸ್, 46 ಫೋರ್: RCB ತಂಡಕ್ಕೆ ಕನ್ನಡಿಗನದ್ದೇ ಚಿಂತೆ..!
TV9 Web | Updated By: ಝಾಹಿರ್ ಯೂಸುಫ್
Updated on:
Apr 02, 2024 | 2:56 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಏ.2) ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಪಾಲಿಗೆ ಕಠಿಣ ಎದುರಾಳಿ ಕನ್ನಡಿಗ ಕೆಎಲ್ ರಾಹುಲ್.
1 / 6
IPL 2024 RCB vs LSG: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಹೈವೋಲ್ಟೇಜ್ ಕದನ ನಡೆಯಲಿದೆ. ಅದು ಕೂಡ ಕರ್ನಾಟಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಎಂಬುದು ವಿಶೇಷ. ಹೀಗಾಗಿ ತವರು ಮೈದಾನದಲ್ಲಿ ಕೆಎಲ್ ರಾಹುಲ್ಗೂ ಫುಲ್ ಸಪೋರ್ಟ್ ಕಂಡು ಬರಲಿದೆ.
2 / 6
ಇದುವೇ ಈಗ ಆರ್ಸಿಬಿ ತಂಡದ ಚಿಂತೆಗೂ ಕಾರಣವಾಗಿದೆ. ಏಕೆಂದರೆ ಕೆಎಲ್ ರಾಹುಲ್ ಯಾವ ತಂಡದ ವಿರುದ್ಧ ಆಡುತ್ತರೋ ಗೊತ್ತಿಲ್ಲ. ಆದರೆ ಆರ್ಸಿಬಿ ವಿರುದ್ಧ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಅವರ ಅಂಕಿ ಅಂಶಗಳೇ ಸಾಕ್ಷಿ.
3 / 6
ಏಕೆಂದರೆ ಕೆಎಲ್ ರಾಹುಲ್ ಇದುವರೆಗೆ ಆರ್ಸಿಬಿ ವಿರುದ್ಧ ಒಟ್ಟು 14 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಬರೋಬ್ಬರಿ 628 ರನ್ ಕಲೆಹಾಕಿದ್ದಾರೆ. ಹಾಗೆಯೇ ನಾಲ್ಕು ಬಾರಿ ಅಜೇಯರಾಗಿ ಕೂಡ ಉಳಿದಿದ್ದರು. ಅಂದರೆ ಆರ್ಸಿಬಿ ವಿರುದ್ಧ ಕೆಎಲ್ ರಾಹುಲ್ 69.77 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
4 / 6
ಇನ್ನು ಆರ್ಸಿಬಿ ವಿರುದ್ಧ 144.03 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಕೆಎಲ್ ರಾಹುಲ್ 1 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳನ್ನು ಕೂಡ ಸಿಡಿಸಿದ್ದಾರೆ. ಇದೇ ವೇಳೆ ಅವರ ಬ್ಯಾಟ್ನಿಂದ ಮೂಡಿಬಂದಿರುವುದು 46 ಫೋರ್ಗಳು ಹಾಗೂ 35 ಸಿಕ್ಸ್ಗಳು.
5 / 6
ಅಂದರೆ ಆರ್ಸಿಬಿ ವಿರುದ್ಧದ 14 ಇನಿಂಗ್ಸ್ಗಳಲ್ಲಿ ಕೆಎಲ್ ರಾಹುಲ್ ಸಿಕ್ಸ್ ಹಾಗೂ ಫೋರ್ಗಳ ಮೂಲಕವೇ ಒಟ್ಟು 394 ರನ್ ಬಾರಿಸಿದ್ದಾರೆ. ಇದೀಗ ಕೆಎಲ್ ರಾಹುಲ್ ತನ್ನ ತವರು ಮೈದಾನ ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
6 / 6
ಇತ್ತ ಆರ್ಸಿಬಿ ಅಭಿಮಾನಿಗಳು ಕೂಡ ಕೆಎಲ್ ರಾಹುಲ್ ಕಡೆಯಿಂದ ಭರ್ಜರಿ ಇನಿಂಗ್ಸ್ನ ನಿರೀಕ್ಷಿಸುತ್ತಿದ್ದಾರೆ. ಒಂದು ವೇಳೆ ಆರ್ಸಿಬಿ ವಿರುದ್ಧ ಕೆಎಲ್ಆರ್ ಅಬ್ಬರಿಸಲಾರಂಭಿಸಿದರೆ ಪ್ರೇಕ್ಷಕರ ಗ್ಯಾಲರಿಯಿಂದ ಭರಪೂರ ಬೆಂಬಲ ವ್ಯಕ್ತವಾಗುವುದರಲ್ಲಿ ಅನುಮಾನವೇ ಇಲ್ಲ.
Published On - 2:53 pm, Tue, 2 April 24