- Kannada News Photo gallery Cricket photos IPL 2024: Rishabh Pant Signals for a Review, Argues with Umpire
IPL 2024: ಮೋಸದಾಟಕ್ಕೆ ಮುಂದಾಗಿ ಸಿಕ್ಕಿಬಿದ್ದ ರಿಷಭ್ ಪಂತ್
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 26ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 167 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.1 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 6 ವಿಕೆಟ್ಗಳ ಗೆಲುವು ದಾಖಲಿಸಿದೆ.
Updated on: Apr 13, 2024 | 10:52 AM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 26ನೇ ಪಂದ್ಯವು ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಎಲ್ಎಸ್ಜಿ ತಂಡದ ನಾಯಕ ಕೆಎಲ್ ರಾಹುಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 4ನೇ ಓವರ್ನ 3 ಎಸೆತದಲ್ಲಿ ಕ್ವಿಂಟನ್ ಡಿಕಾಕ್ ವಿಕೆಟ್ ಕಳೆದುಕೊಂಡಿತು. ಇನ್ನು ಪಂದ್ಯದ 5ನೇ ಓವರ್ನಲ್ಲಿ ಇಶಾಂತ್ ಶರ್ಮಾ ಎಸೆದ ಚೆಂಡು ಲೆಗ್ ಸೈಡ್ನತ್ತ ವೈಡ್ ಆಗಿತ್ತು. ತಕ್ಷಣವೇ ಫೀಲ್ಡ್ ಅಂಪೈರ್ ವೈಡ್ ನೀಡಿದ್ದರು.

ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ರಿವ್ಯೂ ಮೊರೆ ಹೋದರು. ಮರು ಪರಿಶೀಲನೆ ವೇಳೆ ವೈಡ್ ಆಗಿರುವುದು ಸ್ಷಷ್ಟವಾಗಿತ್ತು. ಇತ್ತ ಅಂಪೈರ್ ನಿರ್ಧಾರ ಸರಿಯಾಗಿತ್ತು ಎಂಬುದು ಗೊತ್ತಾಗುತ್ತಿದ್ದಂತೆ ಪಂತ್ ನಾನು ರಿವ್ಯೂ ತೆಗೆದುಕೊಂಡಿಲ್ಲ ಎಂದು ವಾಗ್ವಾದಕ್ಕಿಳಿದರು.

ನಾನು ಯಾವುದೇ DRS ಬಯಸಿರಲಿಲ್ಲ. ಹೀಗಾಗಿ ನಮ್ಮ ರಿವ್ಯೂ ಅನ್ನು ಕಡಿತ ಮಾಡುವಂತಿಲ್ಲ ಎಂಬ ವಾದವನ್ನು ಮುಂದಿಟ್ಟಿದ್ದರು. ಈ ವೇಳೆ ಟಿವಿ ರಿಪ್ಲೇನಲ್ಲಿ ರಿಷಭ್ ಪಂತ್ ರಿವ್ಯೂಗೆ ಮನವಿ ಸಲ್ಲಿಸುತ್ತಿರುವುದನ್ನು ತೋರಿಸಲಾಯಿತು. ಅತ್ತ ಬಿಗ್ ಸ್ಕ್ರೀನ್ನಲ್ಲಿ ರಿವ್ಯೂ ಅಪೀಲ್ಗೆ ಮನವಿ ಸಲ್ಲಿಸುತ್ತಿರುವುದು ಕಾಣುತ್ತಿದ್ದಂತೆ ಪಂತ್ ಅಂಪೈರ್ ಜೊತೆಗಿನ ವಾಗ್ವಾದ ನಿಲ್ಲಿಸಿ ವಿಕೆಟ್ ಕೀಪಿಂಗ್ ಮಾಡಲು ತೆರಳಿದರು.

ಇದೀಗ ಮೋಸದಾಟಕ್ಕೆ ಮುಂದಾಗಿದ್ದ ರಿಷಭ್ ಪಂತ್ ಅವರ ವಿಡಿಯೋ-ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಂತಹ ನಡೆಗಳ ಮೂಲಕ ಅಂಪೈರ್ ಅನ್ನು ಗೊಂದಲಕ್ಕೀಡಲು ಮಾಡಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.
