IPL 2024: ಹೋಗಿ ಬೌಂಡರಿ ಲೈನ್ನಲ್ಲಿ ನಿಲ್ಲು: ರೋಹಿತ್ ಶರ್ಮಾರ ಖಡಕ್ ಸೂಚನೆಗೆ ತಬ್ಬಿಬ್ಬಾದ ಪಾಂಡ್ಯ
TV9 Web | Updated By: ಝಾಹಿರ್ ಯೂಸುಫ್
Updated on:
Mar 28, 2024 | 6:55 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 8ನೇ ಪಂದ್ಯದಲ್ಲಿ ಕೆಲ ಕಾಲ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೈದಾನದಲ್ಲೇ ಇರುವಾಗ ಎಂಬುದು ವಿಶೇಷ. ಈ ವೇಳೆ ಹಾರ್ದಿಕ್ ಪಾಂಡ್ಯರನ್ನು ಬೌಂಡರಿ ಲೈನ್ಗೆ ಕಳುಹಿಸುವ ಮೂಲಕ ರೋಹಿತ್ ಶರ್ಮಾ ಗಮನ ಸೆಳೆದಿದ್ದಾರೆ.
1 / 7
IPL 2024: ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡವು 31 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಮುಂಬೈ ತಂಡದ ನಾಯಕನ ನಿರ್ಧಾರವನ್ನು ಸನ್ರೈಸರ್ಸ್ ಬ್ಯಾಟರ್ಗಳ ಪವರ್ಪ್ಲೇನಲ್ಲಿ ತಲೆಕೆಳಗಾಗಿಸಿದ್ದರು.
2 / 7
ಸ್ಪೋಟಕ ಆರಂಭ ಒದಗಿಸಿದ ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 62 ರನ್ ಸಿಡಿಸಿದರೆ, ಅಭಿಷೇಕ್ ಶರ್ಮಾ ಕೇವಲ 23 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ನೊಂದಿಗೆ 63 ರನ್ ಚಚ್ಚಿದರು. ಪರಿಣಾಮ ಪವರ್ಪ್ಲೇನಲ್ಲಿ ಎಸ್ಆರ್ಹೆಚ್ ತಂಡವು 81 ರನ್ ಕಲೆಹಾಕಿತು.
3 / 7
ಅಲ್ಲದೆ 8 ಓವರ್ ಮುಗಿಯುವ ಮುನ್ನವೇ ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಕೋರ್ 100 ರ ಗಡಿದಾಟಿತು. ಇತ್ತ ಹೈದರಾಬಾದ್ ಬ್ಯಾಟರ್ಗಳ ಅಬ್ಬರದಿಂದ ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಕಂಗೆಟ್ಟು ನಿಂತರು. ಇದರ ಬೆನ್ನಲ್ಲೇ ಕೋಚ್ ಕಡೆಯಿಂದ ಫೀಲ್ಡಿಂಗ್ ಸೆಟ್ ಮಾಡುವಂತೆ ರೋಹಿತ್ ಶರ್ಮಾಗೆ ಸಂದೇಶ ಬಂದಿದೆ.
4 / 7
ಹೀಗಾಗಿ ರೋಹಿತ್ ಶರ್ಮಾ ಫೀಲ್ಡಿಂಗ್ನಲ್ಲಿ ಕೆಲ ಬದಲಾವಣೆ ಮಾಡಿದ್ದರು. ಅದರಲ್ಲೂ ಫ್ರಂಟ್ ಫೀಲ್ಡಿಂಗ್ನಲ್ಲಿ ನಿಂತು ಮುಂಬೈ ಇಂಡಿಯನ್ಸ್ ತಂಡವನ್ನು ನಿಯಂತ್ರಿಸುತ್ತಿದ್ದ ಹಾರ್ದಿಕ್ ಪಾಂಡ್ಯರನ್ನು ಹಿಟ್ಮ್ಯಾನ್ ಬೌಂಡರಿ ಲೈನ್ನಲ್ಲಿ ಹೋಗಿ ನಿಲ್ಲುವಂತೆ ಸೂಚಿಸಿದರು.
5 / 7
ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಲೈನ್ನಲ್ಲಿ ನಿಲ್ಲಿಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪಂದ್ಯದ ನಡುವೆ ಸಿಕ್ಕ ಅವಕಾಶದಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನೇ ಬೌಂಡರಿ ಲೈನ್ಗೆ ಕಳುಹಿಸಿದ್ದಾರೆ.
6 / 7
ರೋಹಿತ್ ಶರ್ಮಾ ಬೌಂಡರಿ ಲೈನ್ಗೆ ಹೋಗು ಎಂದು ಹೇಳುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ತಬ್ಬಿಬ್ಬಾದಂತೆ ಕಂಡು ಬಂದರು. ಅಲ್ಲದೆ ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಈ ವೇಳೆ ಬೌಂಡರಿ ಲೈನ್ನತ್ತ ಬೊಟ್ಟು ಮಾಡಿದ ರೋಹಿತ್ ಶರ್ಮಾ, ಅತ್ತ ಕಡೆ ಹೋಗಿ ನಿಲ್ಲು ಎಂದು ಸೂಚಿಸಿದರು. ಇದೀಗ ಹೊಸ ನಾಯಕನ ಮುಂದೆ ಹಳೆಯ ನಾಯಕನ ದರ್ಬಾರ್ ಸಖತ್ ವೈರಲ್ ಆಗಿದ್ದು, ರೋಹಿತ್ ಶರ್ಮಾ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
7 / 7
ಇನ್ನು ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ನೀಡಿದ 278 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 246 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 31 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.