IPL 2024: ಒಂದೇ ಪಂದ್ಯದಲ್ಲಿ ಬರೋಬ್ಬರಿ 10 ದಾಖಲೆ ಬರೆದ ಹೈದರಾಬಾದ್‌..!

IPL 2024: ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಒಂದೇ ಒಂದು ಪಂದ್ಯದಲ್ಲಿ ಬರೋಬ್ಬರಿ 10 ಕ್ಕೂ ಹೆಚ್ಚು ದಾಖಲೆಗಳನ್ನು ಬರೆದಿದೆ.

ಪೃಥ್ವಿಶಂಕರ
|

Updated on:Mar 27, 2024 | 10:55 PM

ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಕಲೆಹಾಕಿರುವ ಸನ್​ರೈಸರ್ಸ್​ ಹೈದರಾಬಾದ್‌ ತಂಡ ಐಪಿಎಲ್​ನ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಮೊತ್ತ ಕಲೆಹಾಕಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಇದಕ್ಕೂ ಮುನ್ನ 263 ರನ್ ಕಲೆಹಾಕಿದ್ದ ಆರ್​ಸಿಬಿ ಹೆಸರಲ್ಲಿ ಈ ದಾಖಲೆ ಇತ್ತು.

1 / 10
ಸನ್​ರೈಸರ್ಸ್​ ಹೈದರಾಬಾದ್‌ ಕಲೆಹಾಕಿರುವ 277 ರನ್ ಟಿ20 ಕ್ರಿಕೆಟ್​ನಲ್ಲಿ ಯಾವುದೇ ತಂಡ ಕಲೆಹಾಕಿದ ಮೂರನೇ ಅತಿದೊಡ್ಡ ಮೊತ್ತವಾಗಿದೆ. ಮಂಗೋಲಿಯ ವಿರುದ್ಧ 3 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿದ್ದ ನೇಪಾಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, 278 ರನ್ ಕಲೆಹಾಕಿದ್ದ ಅಫ್ಘಾನಿಸ್ತಾನ ಎರಡನೇ ಸ್ಥಾನದಲ್ಲಿದೆ.

2 / 10
ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಇನ್ನು ಟಿ20 ಲೀಗ್​ಗಳ ವಿಚಾರಕ್ಕೆ ಬಂದರೆ ಎಸ್​ಆರ್​ಎಚ್ ಕಲೆಹಾಕಿರುವ 277 ರನ್​ಗಳೇ ಫ್ರಾಂಚೈಸಿ ಲೀಗ್​ನಲ್ಲಿ ದಾಖಲಾಗಿರುವ ಅತ್ಯಧಿಕ ಮೊತ್ತವಾಗಿದೆ.

3 / 10
ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಸನ್​ರೈಸರ್ಸ್​ ಹೈದರಾಬಾದ್‌ ತಂಡ ಕಲೆಹಾಕಿದ ಅತ್ಯಧಿಕ ಮೊತ್ತ ಇದಾಗಿದೆ.

4 / 10
ತನ್ನ ಇನ್ನಿಂಗ್ಸ್​ನಲ್ಲಿ 18 ಸಿಕ್ಸರ್ ಸಿಡಿಸಿದ ಹೈದರಾಬಾದ್‌, ಐಪಿಎಲ್ ಇನ್ನಿಂಗ್ಸ್‌ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರ್​ಸಿಬಿ ಇನ್ನಿಂಗ್ಸ್​ವೊಂದರಲ್ಲಿ 21 ಸಿಕ್ಸರ್ ಸಿಡಿಸಿತ್ತು.

5 / 10
ಹಾಗೆಯೇ ಐಪಿಎಲ್ ಇನ್ನಿಂಗ್ಸ್​ವೊಂದರಲ್ಲಿ ಅತಿ ವೇಗವಾಗಿ 250 ರನ್ ಕಲೆಹಾಕಿದ ತಂಡಗಳ ಪೈಕಿ ಜಂಟಿಯಾಗಿ ಮೊದಲ ಸ್ಥಾನ ಪಡೆದುಕೊಂಡಿದೆ.

6 / 10
ಈ ಪಂದ್ಯದಲ್ಲಿ ಕೇವಲ 14.4 ಓವರ್​ಗಳಲ್ಲಿ 200 ರನ್ ಪೂರೈಸಿದ ಹೈದರಾಬಾದ್‌ ಐಪಿಎಲ್ ಇನ್ನಿಂಗ್ಸ್‌ನಲ್ಲಿ ವೇಗವಾಗಿ ದ್ವಿಶತಕ ಪೂರೈಸಿದ ಎರಡನೇ ತಂಡ ಎನಿಸಿಕೊಂಡಿದೆ.

7 / 10
ಅಲ್ಲದೆ ಇನ್ನಿಂಗ್ಸ್​ನ ಕೊನೆಯ 10 ಓವರ್​ಗಳಲ್ಲಿ ಬರೋಬ್ಬರಿ 148 ರನ್ ಸಿಡಿಸಿದ ಹೈದರಾಬಾದ್‌, ಕೊನೆಯ 10 ಓವರ್​ಗಳಲ್ಲಿ ಇಷ್ಟು ರನ್ ಬಾರಿಸಿದ ಮೊದಲ ತಂಡ ಎನಿಸಿಕೊಂಡಿದೆ.

8 / 10
ಈ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ಶರ್ಮಾ ಹೈದರಾಬಾದ್‌ ಪರ ವೇಗವಾಗಿ ಅರ್ಧಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರೆ, ಒಟ್ಟಾರೆ ಐಪಿಎಲ್​ನಲ್ಲಿ ವೇಗವಾಗಿ ಅರ್ಧಶತಕ ಪೂರೈಸಿದ 4ನೇ ಬ್ಯಾಟರ್ ಎನಿಸಿಕೊಂಡರು.

9 / 10
ಅಭಿಷೇಕ್ ಜೊತೆಯೇ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಟ್ರಾವಿಸ್ ಹೆಡ್ ಹೈದರಾಬಾದ್‌ ತಂಡದ ಪರ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟರ್ ಎನಿಸಿಕೊಂಡರು.

10 / 10

Published On - 10:54 pm, Wed, 27 March 24

Follow us
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?