AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ನಿಂದ ಮರೆಯಾದ ಸೂಪರ್ ಓವರ್ ಫೈಟ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಇತಿಹಾಸದಲ್ಲಿ ಇದುವರೆಗೆ 14 ಸೂಪರ್ ಓವರ್ ಪಂದ್ಯಗಳು ನಡೆದಿವೆ. 2009 ರಲ್ಲಿ ಮೊದಲ ಬಾರಿ ಸೂಪರ್ ಓವರ್ ಪಂದ್ಯ ನಡೆದರೆ, ಐಪಿಎಲ್ 2020 ರಲ್ಲಿ ಐದು ಬಾರಿ ಸೂಪರ್ ಫೈಟ್ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಐಪಿಎಲ್​ನಲ್ಲಿ ಸೂಪರ್ ಓವರ್ ಪೈಪೋಟಿ ಕಂಡು ಬಂದಿಲ್ಲ.

TV9 Web
| Edited By: |

Updated on: Apr 18, 2024 | 9:19 AM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024)​ ಸೀಸನ್ 17 ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಇದುವರೆಗೆ ಆಡಲಾದ 32 ಪಂದ್ಯಗಳಲ್ಲಿ ಸನ್​ರೈಸರ್ಸ್ ಹೈದರಾಬಾದ್ 287 ರನ್ ಬಾರಿಸಿ ಹೊಸ ದಾಖಲೆ ಬರೆದರೆ, ಗುಜರಾತ್ ಟೈಟಾನ್ಸ್ (89 ರನ್ಸ್​) ತಂಡವು ಇದೇ ಮೊದಲ ಬಾರಿ 100 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.

1 / 5
ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ 224 ರನ್​ಗಳ ಗುರಿಯನ್ನು ಬೆನ್ನತ್ತುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದೆ. ಇದಾಗ್ಯೂ ಇದುವರೆಗೆ ಯಾವುದೇ ಪಂದ್ಯವು ಸೂಪರ್ ಓವರ್​ನತ್ತ ಸಾಗಿಲ್ಲ ಎಂಬುದು ವಿಶೇಷ. ಅಂದರೆ ಐಪಿಎಲ್​ನಲ್ಲಿ ಸೂಪರ್ ಓವರ್ ಪೈಪೋಟಿ ಕಂಡು ಬಂದು ಮೂರು ವರ್ಷಗಳೇ ಕಳೆದಿದೆ.

2 / 5
ಕೊನೆಯ ಬಾರಿ ಐಪಿಎಲ್​ನಲ್ಲಿ ಸೂಪರ್ ಓವರ್ ಕಂಡು ಬಂದಿದ್ದು 2021 ರಲ್ಲಿ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್ ನಡುವಣ ಸೂಪರ್ ಓವರ್ ಪೈಪೋಟಿ ಬಳಿಕ ಯಾವುದೇ ಮ್ಯಾಚ್​  ಟೈನಲ್ಲಿ ಅಂತ್ಯ ಕಂಡಿಲ್ಲ. ಇದರ ನಡುವೆ 215 ಕ್ಕಿಂತ ಹೆಚ್ಚು ಪಂದ್ಯಗಳು ನಡೆದಿವೆ. ಆದರೆ 6 ಎಸೆತಗಳ ರಣರೋಚಕ ಪಂದ್ಯವನ್ನು ವೀಕ್ಷಿಸುವ ಅವಕಾಶ ಮಾತ್ರ ಅಭಿಮಾನಿಗಳಿಗೆ ದೊರೆತಿಲ್ಲ.

3 / 5
ಈ ಬಾರಿ ಕೂಡ ಹಲವು ಪಂದ್ಯಗಳು ಕೊನೆಯ ಎಸೆತದವರೆಗೆ ಸಾಗಿದರೂ ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿಲ್ಲ ಎಂಬುದು ವಿಶೇಷ. ಅದೇ ಐಪಿಎಲ್ 2020 ರಲ್ಲಿ 5 ಸೂಪರ್ ಓವರ್ ಪೈಪೋಟಿ ನಡೆದಿದ್ದವು. ಆದರೆ ಇದಾದ ಬಳಿಕ ಕೇವಲ ಒಮ್ಮೆ ಮಾತ್ರ 6 ಎಸೆತಗಳ ಪಂದ್ಯ ನಡೆದಿದೆ.

4 / 5
ಇದೀಗ ಐಪಿಎಲ್ 2024 ರ ಮೊದಲಾರ್ಧ ಮುಗಿದರೂ ಸೂಪರ್ ಫೈಟ್ ಮಾತ್ರ ಕಂಡು ಬಂದಿಲ್ಲ. ಹೀಗಾಗಿಯೇ ಸೂಪರ್ ಓವರ್​ ಪೈಪೋಟಿಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಎದುರು ನೋಡುವಿಕೆ ಕಳೆದ ಮೂರು ಸೀಸನ್​ಗಳಿಂದ ಚಾಲ್ತಿಯಲ್ಲಿದ್ದು, ಈ ಬಾರಿಯಾದರೂ ಸೂಪರ್ ಓವರ್ ಫೈಟ್ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದೆಯಾ ಕಾದು ನೋಡಬೇಕಿದೆ.

5 / 5
TV9 Web
TV9 Web

TV9 Kannada

Read More
Follow Us
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್