IPL 2024: RCB… ಇದು ಕಿಂಗ್ ಕೊಹ್ಲಿಯ ಕಿಂಗ್​ಡಮ್

| Updated By: ಝಾಹಿರ್ ಯೂಸುಫ್

Updated on: Mar 11, 2024 | 8:53 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿ ಮಾರ್ಚ್ 22 ರಿಂದ ಶುರುವಾಗಲಿದೆ. ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಆರ್​ಸಿಬಿ ಪರ 17 ವರ್ಷ ಆಡಿದ ದಾಖಲೆ ಬರೆಯಲಿದ್ದಾರೆ.

1 / 6
ಮಾರ್ಚ್ 11, 2008... ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) ಹರಾಜು ಪ್ರಕ್ರಿಯೆ. ಈ ಹರಾಜಿನ 2ನೇ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಅಂಡರ್-19 ಆಟಗಾರರ ಪಟ್ಟಿಯಿಂದ ವಿರಾಟ್ ಕೊಹ್ಲಿಯನ್ನು (Virat Kohli) ಆಯ್ಕೆ ಮಾಡಿಕೊಂಡಿತ್ತು. ಇದಾದ ಬಳಿಕ ನಡೆದಿದ್ದು ಇತಿಹಾಸ.

2 / 6
ಇದೀಗ ಈ ಆಯ್ಕೆಗೆ 16 ವರ್ಷಗಳು ತುಂಬಿವೆ. ಅಂದರೆ ವಿರಾಟ್ ಕೊಹ್ಲಿ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿ ಬರೋಬ್ಬರಿ 16 ವರ್ಷಗಳಾಗಿವೆ. ಈ ಹದಿನಾರು ವರ್ಷಗಳಲ್ಲಿ ವಿರಾಟ್ ಕಿಂಗ್ ಕೊಹ್ಲಿಯಾಗಿ ಬದಲಾಗಿದ್ದಾರೆ. ಅದರಲ್ಲೂ ಒಂದೇ ಫ್ರಾಂಚೈಸಿ ಪರ ಕಣಕ್ಕಿಳಿಯುವ ಮೂಲಕ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.

3 / 6
ಈ ನಿಷ್ಠೆಯೊಂದಿಗೆ ವಿಶ್ವ ದಾಖಲೆಯನ್ನು ನಿರ್ಮಿಸಿರುವುದು ವಿಶೇಷ. ಅಂದರೆ ಲೀಗ್ ಕ್ರಿಕೆಟ್​ನಲ್ಲಿ ಒಂದೇ ಫ್ರಾಂಚೈಸಿ ಪರ 16 ವರ್ಷಗಳ ಕಾಲ ಆಡಿದ ವಿಶ್ವದ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್​ನಲ್ಲಿ 8 ಆಟಗಾರರು ಒಂದೇ ಫ್ರಾಂಚೈಸಿ ಪರ ಆಡಿದ ದಾಖಲೆ ಹೊಂದಿದ್ದಾರೆ.

4 / 6
ಆದರೆ ಅವರು ಯಾರು ಕೂಡ ಒಂದೇ ತಂಡದ ಪರ 15 ವರ್ಷಗಳ ಕಾಲ ಆಡಿಲ್ಲ ಎಂಬುದು ವಿಶೇಷ. ಇದೀಗ ಆರ್​ಸಿಬಿ ಪರ 17ನೇ ಸೀಸನ್​ನಲ್ಲಿ ಕಣಕ್ಕಿಳಿಯಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಈ ಮೂಲಕ ಕ್ರಿಕೆಟ್ ಲೀಗ್ ಇತಿಹಾಸದಲ್ಲೇ ಒಂದೇ ತಂಡದ ಪರ ಹದಿನೇಳು ವರ್ಷಗಳನ್ನಾಡಿದ ವಿಶೇಷ ದಾಖಲೆ ಬರೆಯಲಿದ್ದಾರೆ.

5 / 6
2008 ರ ಏಪ್ರಿಲ್ 18 ರಂದು ಆರ್​ಸಿಬಿ ಪರ ಚೊಚ್ಚಲ ಪಂದ್ಯವನ್ನಾಡಿರುವ ವಿರಾಟ್ ಕೊಹ್ಲಿ ಇದುವರೆಗೆ 237 ಐಪಿಎಲ್ ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ 7 ಶತಕ ಹಾಗೂ 50 ಅರ್ಧಶತಕಗಳೊಂದಿಗೆ ಒಟ್ಟು 7263 ರನ್ ಕಲೆಹಾಕಿದ್ದಾರೆ.

6 / 6
ವಿಶೇಷ ಎಂದರೆ ಒಂದೇ ತಂಡದ ಪರ ಕಣಕ್ಕಿಳಿದು ಟಿ20 ಕ್ರಿಕೆಟ್ ಲೀಗ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ, ಅತ್ಯಧಿಕ ಶತಕ ಸಿಡಿಸಿದ, ಅತೀ ಹೆಚ್ಚು ಅರ್ಧಶತಕ ಗಳಿಸಿದ ವಿಶ್ವ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ. ಈ ಮೂಲಕ ಆರ್​ಸಿಬಿ ಸಾಮ್ರಾಜ್ಯದಲ್ಲಿ ವಿರಾಟ್ ಕೊಹ್ಲಿ ರಾಜಾಧಿರಾಜನಾಗಿ ಮೆರೆಯುತ್ತಿದ್ದಾರೆ. ಅದು ಕೂಡ 16 ವರ್ಷಗಳ ನಿಷ್ಠೆಯೊಂದಿಗೆ ಎಂಬುದೇ ಇಲ್ಲಿ ವಿಶೇಷ.