IPL 2024: ರಿಷಭ್ ಪಂತ್​ಗೆ ಗ್ರೀನ್​ ಸಿಗ್ನಲ್ ನೀಡಿದ NCA

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್ ) ಸೀಸನ್ 17 ರಲ್ಲಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ ತೆರೆಬಿದ್ದಿದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು, ಈ ಮೂಲಕ ಮತ್ತೆ ಮೈದಾನಕ್ಕಿಳಿಯಲು ರಿಷಭ್ ಪಂತ್ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Mar 11, 2024 | 7:53 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ರಿಷಭ್ ಪಂತ್ (Rishabh Pant) ಕಣಕ್ಕಿಳಿಯುವುದು ಖಚಿತವಾಗಿದೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್​ ಅಕಾಡೆಮಿಯಲ್ಲಿ ನಡೆದ ಫಿಟ್​ನೆಸ್ ಟೆಸ್ಟ್​ನಲ್ಲಿ ರಿಷಭ್ ಪಾಸ್ ಆಗಿದ್ದು, ಈ ಮೂಲಕ ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ. ಅದರಂತೆ ಈ ಬಾರಿ ಪಂತ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಣಕ್ಕಿಳಿಯಲಿದೆ.

1 / 5
ಇದಕ್ಕೂ ಮುನ್ನ ರಿಷಭ್ ಪಂತ್ ಫಿಟ್​ನೆಸ್ ಟೆಸ್ಟ್​ನಲ್ಲಿ ವಿಫಲರಾದರೆ, ಅವರು ವಿಕೆಟ್ ಕೀಪಿಂಗ್ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೀಗ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಪಂತ್ ತೆರೆದಿಟ್ಟಿದ್ದು, ಈ ಮೂಲಕ ಐಪಿಎಲ್​ ಆಡಲು NCA ಕಡೆಯಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.

2 / 5
ಅತ್ತ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಕೂಡ ಶುರುವಾಗಲಿದೆ. ಹೀಗಾಗಿ ಈ ಬಾರಿಯ ಐಪಿಎಲ್ ರಿಷಭ್ ಪಂತ್ ಪಾಲಿಗೆ ನಿರ್ಣಾಯಕ. ಏಕೆಂದರೆ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಪಂತ್ ಐಪಿಎಲ್​ನಲ್ಲಿ ಮಿಂಚಿದರೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯಬಹುದು. ಹೀಗಾಗಿ ಈ ಬಾರಿಯ ಐಪಿಎಲ್​ ರಿಷಭ್ ಅವರ ಟೀಮ್ ಇಂಡಿಯಾ ಕಂಬ್ಯಾಕ್​ ಅನ್ನು ಕೂಡ ನಿರ್ಧರಿಸಲಿದೆ.

3 / 5
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ಅವರ ಮರಳುವಿಕೆಯಿಂದ ನಾಯಕತ್ವ ಕೂಡ ಬದಲಾಗಲಿದೆ. ಅಂದರೆ ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಿದ್ದರು. ಇದೀಗ ಪಂತ್ ಕಂಬ್ಯಾಕ್​ನಿಂದಾಗಿ ವಾರ್ನರ್ ಉಪನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ರಿಷಭ್ ಪಂತ್ ಸಾರಥ್ಯದಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕಿಳಿಯಲಿದೆ.

4 / 5
ಡೆಲ್ಲಿ ಕ್ಯಾಪಿಟಲ್ಸ್ ತಂಡ: ರಿಷಭ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಕ್ ನೋಕಿಯಾ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಯಶ್ ಧುಲ್. ಹ್ಯಾರಿ ಬ್ರೂಕ್, ಟ್ರಿಸ್ಟಾನ್ ಸ್ಟಬ್ಸ್, ರಿಕಿ ಭುಯಿ, ಕುಮಾರ್ ಕುಶಾಗ್ರಾ, ರಸಿಖ್ ದಾರ್, ಜ್ಯೆ ರಿಚರ್ಡ್‌ಸನ್, ಸುಮಿತ್ ಕುಮಾರ್, ಶಾಯ್ ಹೋಪ್, ಸ್ವಸ್ತಿಕ್ ಚಿಕಾರಾ.

5 / 5
Follow us
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ