- Kannada News Photo gallery Cricket photos IPL 2024 Matheesha Pathirana returns to Sri Lanka to recover from injury
IPL 2024: ಸಿಎಸ್ಕೆಗೆ ಆಘಾತ; ಲಂಕಾಗೆ ಹಾರಿದ ಮ್ಯಾಚ್ ವಿನ್ನರ್ ಮತಿಶ ಪತಿರಾನ..!
IPL 2024: ಐಪಿಎಲ್ 2024 ರ 53 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದ್ದು, ತಂಡದ ಸ್ಟಾರ್ ವೇಗದ ಬೌಲರ್ ಮತಿಶ ಪತಿರಾನ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಿದ್ದಾರೆ.
Updated on: May 05, 2024 | 5:54 PM

ಐಪಿಎಲ್ 2024 ರ 53 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದ್ದು, ತಂಡದ ಸ್ಟಾರ್ ವೇಗದ ಬೌಲರ್ ಮತಿಶ ಪತಿರಾನ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಿದ್ದಾರೆ.

ಮತಿಶ ಪತಿರಾನ ಅಲಭ್ಯತೆ ಚೆನ್ನೈ ತಂಡಕ್ಕೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಪತಿರಾನಗೂ ಮುನ್ನ ತಂಡದ ಮತ್ತೊಬ್ಬ ಪ್ರಮುಖ ಬೌಲರ್ ಮುಸ್ತಾಫಿಜುರ್ ರೆಹಮಾನ್ ಕೂಡ ಐಪಿಎಲ್ನಿಂದ ಹೊರಬಿದ್ದಿದ್ದರು. ಇದೀಗ ಪತಿರಾನ ಕೂಡ ಚೆನ್ನೈ ತಂಡವನ್ನು ತೊರೆದಿದ್ದಾರೆ.

ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ರಾಷ್ಟ್ರೀಯ ಕರ್ತವ್ಯದ ಕಾರಣ ತಾಯ್ನಾಡಿಗೆ ಮರಳಿದ್ದರು. ಈ ಇಬ್ಬರ ಅಲಭ್ಯತೆ ಚೆನ್ನೈ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಿದೆ. ಈ ಇಬ್ಬರದಲ್ಲದೆ ತಂಡದ ಮತ್ತೊಬ್ಬ ವೇಗದ ಬೌಲರ್ ದೀಪಕ್ ಚಹಾರ್ ಕೂಡ ಗಾಯಗೊಂಡಿದ್ದಾರೆ.

ಇನ್ನು ಪತಿರಾನ ಗಾಯದ ಬಗ್ಗೆ ಅಪ್‌ಡೇಟ್ ನೀಡಿರುವ ಸಿಎಸ್ಕೆ ಫ್ರಾಂಚೈಸಿ, ‘ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಮತಿಶಾ ಪತಿರಾನ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಲಿದ್ದಾರೆ. ಪತಿರಾನ ಈ ಸೀಸನ್‌ನಲ್ಲಿ ಆರು ಪಂದ್ಯಗಳನ್ನು ಆಡಿದ್ದು, 13 ವಿಕೆಟ್ ಪಡೆದಿದ್ದರು. ಪತಿರಾನ ಶೀಘ್ರ ಗುಣಮುಖರಾಗಲಿ ಎಂದು ಫ್ರಾಂಚೈಸಿ ಹಾರೈಸುತ್ತದೆ ಎಂದಿದೆ

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪತಿರಾನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ತಮ್ಮ ಖೋಟಾದ 4 ಓವರ್‌ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಆದರೀಗ ಪತಿರಾನ ಅವರ ಇಂಜುರಿ ಟಿ20 ವಿಶ್ವಕಪ್ ಸನಿಹವಾಗುತ್ತಿರುವ ಬೆನ್ನಲ್ಲಿ ಶ್ರೀಲಂಕಾ ತಂಡಕ್ಕೆ ಆಘಾತವನ್ನುಂಟು ಮಾಡಿದೆ.

ಇನ್ನು ಈ ಸೀಸನ್‌ನಲ್ಲಿ ಚೆನ್ನೈ ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದೀಗ ಚೆನ್ನೈ ಪ್ಲೇಆಫ್‌ಗೆ ಅರ್ಹತೆ ಪಡೆಯಬೇಕೆಂದರೆ ಮುಂಬರುವ ಎಲ್ಲಾ ಅಥವಾ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಬೇಕು.




