AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಸಿಎಸ್​ಕೆಗೆ ಆಘಾತ; ಲಂಕಾಗೆ ಹಾರಿದ ಮ್ಯಾಚ್ ವಿನ್ನರ್ ಮತಿಶ ಪತಿರಾನ..!

IPL 2024: ಐಪಿಎಲ್ 2024 ರ 53 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದ್ದು, ತಂಡದ ಸ್ಟಾರ್ ವೇಗದ ಬೌಲರ್ ಮತಿಶ ಪತಿರಾನ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಿದ್ದಾರೆ.

ಪೃಥ್ವಿಶಂಕರ
|

Updated on: May 05, 2024 | 5:54 PM

Share
ಐಪಿಎಲ್ 2024 ರ 53 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದ್ದು, ತಂಡದ ಸ್ಟಾರ್ ವೇಗದ ಬೌಲರ್ ಮತಿಶ ಪತಿರಾನ ಮಂಡಿರಜ್ಜು ಗಾಯದಿಂದ ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಿದ್ದಾರೆ.

1 / 6
ಮತಿಶ ಪತಿರಾನ ಅಲಭ್ಯತೆ ಚೆನ್ನೈ ತಂಡಕ್ಕೆ ಸಾಕಷ್ಟು ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಪತಿರಾನಗೂ ಮುನ್ನ ತಂಡದ ಮತ್ತೊಬ್ಬ ಪ್ರಮುಖ ಬೌಲರ್ ಮುಸ್ತಾಫಿಜುರ್ ರೆಹಮಾನ್ ಕೂಡ ಐಪಿಎಲ್​ನಿಂದ ಹೊರಬಿದ್ದಿದ್ದರು. ಇದೀಗ ಪತಿರಾನ ಕೂಡ ಚೆನ್ನೈ ತಂಡವನ್ನು ತೊರೆದಿದ್ದಾರೆ.

2 / 6
ಬಾಂಗ್ಲಾದೇಶ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ರಾಷ್ಟ್ರೀಯ ಕರ್ತವ್ಯದ ಕಾರಣ ತಾಯ್ನಾಡಿಗೆ ಮರಳಿದ್ದರು. ಈ ಇಬ್ಬರ ಅಲಭ್ಯತೆ ಚೆನ್ನೈ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಿದೆ. ಈ ಇಬ್ಬರದಲ್ಲದೆ ತಂಡದ ಮತ್ತೊಬ್ಬ ವೇಗದ ಬೌಲರ್ ದೀಪಕ್ ಚಹಾರ್ ಕೂಡ ಗಾಯಗೊಂಡಿದ್ದಾರೆ.

3 / 6
ಇನ್ನು ಪತಿರಾನ ಗಾಯದ ಬಗ್ಗೆ ಅಪ್‌ಡೇಟ್ ನೀಡಿರುವ ಸಿಎಸ್​​ಕೆ ಫ್ರಾಂಚೈಸಿ, ‘ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ಮತಿಶಾ ಪತಿರಾನ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಚೇತರಿಸಿಕೊಳ್ಳಲು ಶ್ರೀಲಂಕಾಕ್ಕೆ ಮರಳಲಿದ್ದಾರೆ. ಪತಿರಾನ ಈ ಸೀಸನ್‌ನಲ್ಲಿ ಆರು ಪಂದ್ಯಗಳನ್ನು ಆಡಿದ್ದು, 13 ವಿಕೆಟ್ ಪಡೆದಿದ್ದರು. ಪತಿರಾನ ಶೀಘ್ರ ಗುಣಮುಖರಾಗಲಿ ಎಂದು ಫ್ರಾಂಚೈಸಿ ಹಾರೈಸುತ್ತದೆ ಎಂದಿದೆ

4 / 6
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪತಿರಾನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ತಮ್ಮ ಖೋಟಾದ 4 ಓವರ್‌ಗಳಲ್ಲಿ 28 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಆದರೀಗ ಪತಿರಾನ ಅವರ ಇಂಜುರಿ ಟಿ20 ವಿಶ್ವಕಪ್ ಸನಿಹವಾಗುತ್ತಿರುವ ಬೆನ್ನಲ್ಲಿ ಶ್ರೀಲಂಕಾ ತಂಡಕ್ಕೆ ಆಘಾತವನ್ನುಂಟು ಮಾಡಿದೆ.

5 / 6
ಇನ್ನು ಈ ಸೀಸನ್​ನಲ್ಲಿ ಚೆನ್ನೈ ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಒಟ್ಟು 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದೀಗ ಚೆನ್ನೈ ಪ್ಲೇಆಫ್‌ಗೆ ಅರ್ಹತೆ ಪಡೆಯಬೇಕೆಂದರೆ ಮುಂಬರುವ ಎಲ್ಲಾ ಅಥವಾ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಬೇಕು.

6 / 6
Follow Us
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ

ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು

ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್

SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು

ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್

ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು

ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ