AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಎರಡೇ ಪಂದ್ಯದಲ್ಲಿ ಶತಕ ಬಾರಿಸಿದ 24.75 ಕೋಟಿ ಬೆಲೆಯ ಪ್ಲೇಯರ್..!

IPL 2024: ಆಡಿದ ಎರಡೂ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದಿದ್ದರೂ, ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಪ್ಲೇಯರ್ ಎನಿಸಿಕೊಂಡಿರುವ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಆಡಿರುವ ಎರಡೇ ಎರಡು ಪಂದ್ಯಗಳಲ್ಲಿ ಬರೋಬ್ಬರಿ 100 ರನ್ ಬಿಟ್ಟುಕೊಟ್ಟು ಅತ್ಯಂತ ದುಬಾರಿ ಎನಿಸಿಕೊಂಡಿದ್ದಾರೆ.

ಪೃಥ್ವಿಶಂಕರ
|

Updated on: Mar 30, 2024 | 3:50 PM

Share
ಐಪಿಎಲ್ 2024ರ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿದೆ. ಈ ಸೀಸನ್​ನಲ್ಲಿ ಕೋಲ್ಕತ್ತಾಗೆ ಇದು ಸತತ ಎರಡನೇ ಗೆಲುವು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೆಕೆಆರ್ 4 ರನ್‌ಗಳಿಂದ ಗೆದ್ದಿತ್ತು. ಇದೀಗ ಕೋಲ್ಕತ್ತಾ ಕೂಡ ಆರ್‌ಸಿಬಿಯನ್ನು ಸೋಲಿಸಿದೆ.

1 / 6
ಈ ಆಧಾರದಲ್ಲಿ ನೋಡಿದರೆ ಕೋಲ್ಕತ್ತಾ ಉತ್ತಮವಾಗಿ ಆಡುತ್ತಿದೆಯಾದರೂ ಗೌತಮ್ ಗಂಭೀರ್ ನಿರ್ಧಾರದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇದಕ್ಕೆ ಪ್ರಮುಖ ಕಾರಣ ಮಿನಿ ಹರಾಜಿನಲ್ಲಿ 24.75 ಕೋಟಿ ರೂ ನೀಡಿ ಖರೀದಿಸಿದ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್​.

2 / 6
ಆಡಿದ ಎರಡೂ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದಿದ್ದರೂ, ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಪ್ಲೇಯರ್ ಎನಿಸಿಕೊಂಡಿರುವ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಆಡಿರುವ ಎರಡೇ ಎರಡು ಪಂದ್ಯಗಳಲ್ಲಿ ಬರೋಬ್ಬರಿ 100 ರನ್ ಬಿಟ್ಟುಕೊಟ್ಟು ಅತ್ಯಂತ ದುಬಾರಿ ಎನಿಸಿಕೊಂಡಿದ್ದಾರೆ.

3 / 6
ಮಿಚೆಲ್ ಸ್ಟಾರ್ಕ್ ಐಪಿಎಲ್ 2024 ಹರಾಜಿನಲ್ಲಿ ಮಾತ್ರವಲ್ಲದೆ ಐಪಿಎಲ್ ಇತಿಹಾಸದಲ್ಲಿಯೂ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸ್ಟಾರ್ಕ್ ತಮ್ಮ ಪ್ರದರ್ಶನದ ಮೂಲಕ ಕೋಲ್ಕತ್ತಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕೆಕೆಆರ್ ಭರವಸೆ ಹೊಂದಿತ್ತು ಆದರೆ ಮೊದಲೆರಡು ಪಂದ್ಯಗಳಲ್ಲಿ ಸ್ಟಾರ್ಕ್ ಪ್ರದರ್ಶನ ಸಂಪೂರ್ಣ ಕಳಪೆಯಾಗಿತ್ತು.

4 / 6
ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲೂ ಸ್ಟಾರ್ಕ್ 4 ಓವರ್‌ಗಳಲ್ಲಿ 53 ರನ್ ನೀಡಿದರು. ಈ ಪಂದ್ಯದಲ್ಲಿ ಅವರು ಅತ್ಯಂತ ದುಬಾರಿ ಆಟಗಾರ ಮಾತ್ರವಲ್ಲ, ಇದನ್ನು ಹೊರತುಪಡಿಸಿ ಒಂದೇ ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಲಿಲ್ಲ.

5 / 6
ಇದೀಗ ಬೆಂಗಳೂರು ವಿರುದ್ಧವೂ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಸ್ಟಾರ್ಕ್‌ ಓವರ್​ಗಳಲ್ಲಿ ಸರಾಗವಾಗಿ ರನ್ ಕಲೆಹಾಕಿದ್ದಾರೆ. ಈ ಪಂದ್ಯದಲ್ಲೂ ಸ್ಟಾರ್ಕ್ 4 ಓವರ್​ಗಳಲ್ಲಿ 47 ರನ್ ಬಿಟ್ಟುಕೊಟ್ಟಿದ್ದಾರೆ. ಈ ಪಂದ್ಯದಲ್ಲೂ ಸ್ಟಾರ್ಕ್ ಒಂದೇ ಒಂದು ವಿಕೆಟ್ ಪಡೆದಿಲ್ಲ. ಅಂದರೆ ಸ್ಟಾರ್ಕ್​ ಇದುವರೆಗೆ 8 ಓವರ್​​ ಬೌಲ್ ಮಾಡಿ ಒಂದೇ ಒಂದು ವಿಕೆಟ್ ಪಡೆಯದೆ ಬರೋಬ್ಬರಿ 100 ರನ್ ಬಿಟ್ಟುಕೊಟ್ಟಿದ್ದಾರೆ.

6 / 6