- Kannada News Photo gallery Cricket photos Ipl 2024 mumbai indians and gujarat titans announced 2 replacements
IPL 2024: ಗುಜರಾತ್, ಮುಂಬೈ ತಂಡಕ್ಕೆ ಇಬ್ಬರು ಬದಲಿ ಆಟಗಾರರು ಎಂಟ್ರಿ
IPL 2024: ಐಪಿಎಲ್ ಆರಂಭಕ್ಕೂ ಮುನ್ನ ಸ್ಟಾರ್ ಆಟಗಾರರ ಅಲಭ್ಯತೆಯಿಂದ ಸಂಕಷ್ಟಕ್ಕೊಳಗಾಗಿದ್ದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ತಮ್ಮ ತಂಡಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಮಾರ್ಚ್ 24 ರಂದು ಉಭಯ ತಂಡಗಳ ನಡುವೆ ಪಂದ್ಯ ನಡೆಯಲ್ಲಿದ್ದು, ಅದಕ್ಕೂ ಮೊದಲು ಎರಡೂ ತಂಡಗಳಿಗೆ ಹೊಸ ಆಟಗಾರರು ಎಂಟ್ರಿಯಾಗಿದ್ದಾರೆ.
Updated on: Mar 20, 2024 | 10:33 PM

ಐಪಿಎಲ್ ಆರಂಭಕ್ಕೂ ಮುನ್ನ ಸ್ಟಾರ್ ಆಟಗಾರರ ಅಲಭ್ಯತೆಯಿಂದ ಸಂಕಷ್ಟಕ್ಕೊಳಗಾಗಿದ್ದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ತಮ್ಮ ತಂಡಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಮಾರ್ಚ್ 24 ರಂದು ಉಭಯ ತಂಡಗಳ ನಡುವೆ ಪಂದ್ಯ ನಡೆಯಲ್ಲಿದ್ದು, ಅದಕ್ಕೂ ಮೊದಲು ಎರಡೂ ತಂಡಗಳಿಗೆ ಹೊಸ ಆಟಗಾರರು ಎಂಟ್ರಿಯಾಗಿದ್ದಾರೆ.

ಬುಧವಾರ ರಾತ್ರಿ ಐಪಿಎಲ್‌ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪಡೆದ ಮಾಹಿತಿಯ ಪ್ರಕಾರ, ಮುಂಬೈ ಇಂಡಿಯನ್ಸ್ ಗಾಯಗೊಂಡಿರುವ ದಿಲ್ಶಾನ್ ಮಧುಶಂಕಾ ಬದಲಿಗೆ ಎಡಗೈ ವೇಗಿ ಕ್ವೆನಾ ಮಫಕಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಮಫಕಾ ಇತ್ತೀಚೆಗೆ ಅಂಡರ್-19 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅದ್ಭುತ ಪ್ರದರ್ಶನ ನೀಡಿ, ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು.

ಮತ್ತೊಂದೆಡೆ ಮೊಹಮ್ಮದ್ ಶಮಿ ಬದಲಿಗೆ ಸಂದೀಪ್ ವಾರಿಯರ್ ಅವರನ್ನು ಗುಜರಾತ್ ತಂಡಕ್ಕೆ ಸೇರಿಸಿಕೊಂಡಿದೆ. ವಾರಿಯರ್ ಮೂಲ ಬೆಲೆ 50 ಲಕ್ಷಕ್ಕೆ ಗುಜರಾತ್ ಟೈಟಾನ್ಸ್ ಸೇರಿಕೊಳ್ಳಲಿದ್ದಾರೆ.

ಭಾರತದ ಹಿರಿಯ ವೇಗದ ಬೌಲರ್ ಶಮಿ ಇತ್ತೀಚೆಗೆ ತಮ್ಮ ಬಲ ಹಿಮ್ಮಡಿ ಸಮಸ್ಯೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಸ್ಥಾನದಲ್ಲಿ ಆಡಲ್ಲಿರುವ ಸಂದೀಪ್ ವಾರಿಯರ್ ಇದುವರೆಗೆ 5 ಐಪಿಎಲ್ ಪಂದ್ಯಗಳನ್ನು ಆಡಿದ್ದು ಕೇವಲ ಎರಡು ವಿಕೆಟ್ ಪಡೆದಿದ್ದಾರೆ.

ಸಂದೀಪ್ ವಾರಿಯರ್‌ಗೆ ಐಪಿಎಲ್‌ನಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಅವರು ಕೆಕೆಆರ್ ಪರ ಐಪಿಎಲ್‌ನಲ್ಲಿ ಆಡಿದ್ದಾರೆ. ಇದಲ್ಲದೆ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೂ ಆಡಿದ್ದಾರೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ಪರ ಆಡುತ್ತಿದ್ದಾರೆ.

ಗುಜರಾತ್ ಟೈಟಾನ್ಸ್ ತಂಡ: ಶುಭ್ಮನ್ ಗಿಲ್ (ನಾಯಕ), ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ವಿಜಯ್ ಶಂಕರ್, ಜಯಂತ್ ಯಾದವ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿನವ್ ಮನೋಹರ್, ರಶೀದ್ ಖಾನ್, ಜೋಶುವಾ ಲಿಟಲ್, ನೂರ್ ಅಹ್ಮದ್, ರಾಹುಲ್ ತೆವಾಟಿಯಾ, ದರ್ಶನ್ ನಲ್ಕಂಡೆ. ಸಾಯಿ ಕಿಶೋರ್, ಬಿ. ಸಾಯಿ ಸುದರ್ಶನ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜಾಯ್, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಸಂದೀಪ್ ವಾರಿಯರ್, ಮಾನವ್ ಸುತಾರ್, ಸ್ಪೆನ್ಸರ್ ಜಾನ್ಸನ್,