- Kannada News Photo gallery Cricket photos IPL 2024 rcb bowlers conceded just 23 runs in powerplay against gujarat titans
IPL 2024: ಪವರ್‌ಪ್ಲೇನಲ್ಲಿ ಅತಿ ಕಡಿಮೆ ರನ್; ದಾಖಲೆ ಬರೆದ ಆರ್ಸಿಬಿ ವೇಗಿಗಳು..!
IPL 2024: ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದ ಗುಜರಾತ್ ತಂಡ ಮೊದಲ 6 ಓವರ್ಗಳ ಅಂತ್ಯಕ್ಕೆ ಅಂದರೆ ಪವರ್‌ಪ್ಲೇ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 23 ರನ್ ಮಾತ್ರ ಕಲೆಹಾಕಿತು. ಇದರೊಂದಿಗೆ ಈ ಆವೃತ್ತಿಯಲ್ಲಿ ಪವರ್‌ಪ್ಲೇನಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ ಬೇಡದ ದಾಖಲೆಯನ್ನು ಗುಜರಾತ್ ಬರೆಯಿತು.
Updated on: May 04, 2024 | 10:07 PM

ಐಪಿಎಲ್‌ನಲ್ಲಿ 52ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 147 ರನ್ಗಳಿಗೆ ಆಲೌಟ್ ಆಗಿದೆ.

ಮೇಲೆ ಹೇಳಿದಂತೆ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಆರ್ಸಿಬಿ ವೇಗಿಗಳ ಕರಾರುವಕ್ಕಾದ ದಾಳಿಗೆ ತತ್ತರಿಸಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಶುಭ್ಮನ್ ಗಿಲ್ ಹಾಗೂ ವೃದ್ಧಿಮಾನ್ ಸಹಾ ಒಂದಂಕಿಗೆ ಸುಸ್ತಾದರು.

ಎಂದಿನಂತೆ ಸಹಾ, ಸಿರಾಜ್ ಎದುರು ಮಂತೆ ಮಂಕಾಗಿ ಕೇವಲ 1 ರನ್ಗಳಿಗೆ ಸುಸ್ತಾದರು. ಇತ್ತ ನಾಯಕ ಶುಭ್ಮನ್ ಗಿಲ್ ಕೂಡ 2 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು.

ಮೂರನೇ ಕ್ರಮಾಂಕದಲ್ಲಿ ಬಂದ ಸಾಯಿ ಸುದರ್ಶನ್ ಕೂಡ 6 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಇದರೊಂದಿಗೆ ಗುಜರಾತ್ ತಂಡ 5.3 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡು ಕೇವಲ 19 ರನ್ ಕಲೆಹಾಕಿತ್ತು.

ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದ ಗುಜರಾತ್ ತಂಡ ಮೊದಲ 6 ಓವರ್ಗಳ ಅಂತ್ಯಕ್ಕೆ ಅಂದರೆ ಪವರ್‌ಪ್ಲೇ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಕೇವಲ 23 ರನ್ ಮಾತ್ರ ಕಲೆಹಾಕಿತು. ಇದರೊಂದಿಗೆ ಈ ಆವೃತ್ತಿಯಲ್ಲಿ ಪವರ್‌ಪ್ಲೇನಲ್ಲಿ ಅತಿ ಕಡಿಮೆ ರನ್ ಕಲೆಹಾಕಿದ ಬೇಡದ ದಾಖಲೆಯನ್ನು ಗುಜರಾತ್ ಬರೆಯಿತು.

ಇತ್ತ ಇಡೀ ಆವೃತ್ತಿಯಲ್ಲಿ ರನ್ಗಳನ್ನು ಅತಿ ಸರಾಗವಾಗಿ ನೀಡಿ ಹಲವು ಬೇಡದ ದಾಖಲೆಗಳನ್ನು ನಿರ್ಮಿಸಿದ್ದ ಆರ್ಸಿಬಿ ವೇಗಿಗಳು ಗುಜರಾತ್ ತಂಡಕ್ಕೆ ಪವರ್‌ಪ್ಲೇನಲ್ಲಿ ಕೇವಲ 23 ರನ್ ನೀಡಿ, ಈ ಆವೃತ್ತಿಯಲ್ಲಿ ಪವರ್‌ಪ್ಲೇನಲ್ಲಿ ಅತಿ ಕಡಿಮೆ ರನ್ ನೀಡಿದ ತಂಡ ಎಂಬ ದಾಖಲೆ ಬರೆಯಿತು.




