- Kannada News Photo gallery Cricket photos IPL 2024 RCB registered unwanted record in kkr vs rcb match
IPL 2024: ಪವರ್ ಪ್ಲೇಯಲ್ಲಿ ಧಾರಾಳ; ಬೇಡದ ದಾಖಲೆ ಬರೆದ ಆರ್‌ಸಿಬಿ ವೇಗಿಗಳು..!
IPL 2024: ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ಆರ್‌ಸಿಬಿ ಬೌಲಿಂಗ್ ವಿಭಾಗ ಒಮ್ಮೆ ಮಾತ್ರ ಎದುರಾಳಿ ತಂಡವನ್ನು 50 ರನ್ಗಳಿಗೆ ಕಟ್ಟಿಹಾಕಿದೆ. ಅದನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ವೇಗಿಗಳು ಸರಾಗವಾಗಿ ರನ್ ಬಿಟ್ಟುಕೊಟ್ಟಿದ್ದಾರೆ. ಇದು ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ದೂಡುತ್ತಿದೆ, ಅಲ್ಲದೆ ಪವರ್ಪ್ಲೇನಲ್ಲಿ ಆರ್‌ಸಿಬಿ ವೇಗಿಗಳು ವಿಕೆಟ್ ಉರುಳಿಸಿದ್ದು ತೀರ ಕಡಿಮೆ.
Updated on: Apr 21, 2024 | 7:03 PM

2024 ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅಷ್ಟೇನೂ ವಿಶೇಷವಾಗಿಲ್ಲ. ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತು, 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇದೀಗ 8ನೇ ಪಂದ್ಯವನ್ನಾಡುತ್ತಿರುವ ಆರ್ಸಿಬಿಗೆ ಗೆಲುವು ದಕ್ಕುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಪ್ರತಿ ಆವೃತ್ತಿಯಲ್ಲಿ ಆರ್ಸಿಬಿಗೆ ತನ್ನ ಬೌಲಿಂಗ್ನದ್ದೇ ಚಿಂತೆಯಾಗಿರುತ್ತಿತ್ತು. ಆದರೆ ಈ ಬಾರಿ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗವೂ ದಯನೀಯವಾಗಿ ವಿಫಲವಾಗಿದೆ. ಹೀಗಾಗಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ.

ತಂಡದ ಬೌಲರ್ಗಳು ಸುಲಭವಾಗಿ ರನ್ ಬಿಟ್ಟುಕೊಟ್ಟು ದುಬಾರಿಯಾಗುತ್ತಿರುವುದರೊಂದಿಗೆ ಆರಂಭದಲ್ಲೇ ತಂಡವನ್ನು ಪಂದ್ಯದಿಂದ ಹೊರಹಾಕುತ್ತಿದ್ದಾರೆ. ಇದಕ್ಕೆ ಪೂರಕ ಸಾಕ್ಷಿಯಾಗಿ ತಂಡದ ಬೌಲಿಂಗ್ ವಿಭಾಗ ಇದುವರೆಗೆ ನೀಡಿರುವ ಪ್ರದರ್ಶನವನ್ನೇ ನೋಡಬಹುದು. ಅದರಲ್ಲೂ ಪವರ್ಪ್ಲೇನಲ್ಲಿ ತಂಡದ ಬೌಲಿಂಗ್ ಕಥೆ ಹೇಳತೀರದಾಗಿದೆ.

ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ಆರ್‌ಸಿಬಿ ಬೌಲಿಂಗ್ ವಿಭಾಗ ಒಮ್ಮೆ ಮಾತ್ರ ಎದುರಾಳಿ ತಂಡವನ್ನು 50 ರನ್ಗಳಿಗೆ ಕಟ್ಟಿಹಾಕಿದೆ. ಅದನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ವೇಗಿಗಳು ಸರಾಗವಾಗಿ ರನ್ ಬಿಟ್ಟುಕೊಟ್ಟಿದ್ದಾರೆ. ಇದು ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ದೂಡುತ್ತಿದೆ, ಅಲ್ಲದೆ ಪವರ್ಪ್ಲೇನಲ್ಲಿ ಆರ್‌ಸಿಬಿ ವೇಗಿಗಳು ವಿಕೆಟ್ ಉರುಳಿಸಿದ್ದು ತೀರ ಕಡಿಮೆ.

ಇಂದು ನಡೆಯುತ್ತಿರುವ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಇದೇ ದೃಶ್ಯ ಕಂಡುಬಂತು. ದುರ್ಬಲ ಆರ್‌ಸಿಬಿ ಬೌಲಿಂಗ್ ಮುಂದೆ ಕೆಕೆಆರ್ ತಂಡ ಮೊದಲ 6 ಓವರ್ಗಳಲ್ಲಿ 75 ರನ್ ಕಲೆಹಾಕಿದರು. ಪವರ್ಪ್ಲೇನಲ್ಲಿ ಅಧಿಕ ರನ್ ಬಿಟ್ಟುಕೊಡುವ ಮೂಲಕ ಆರ್‌ಸಿಬಿ ವೇಗಿಗಳು ಇದುವರೆಗೆ ಯಾವುದೇ ತಂಡದ ಹೆಸರಲ್ಲಿ ಇಲ್ಲದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ವಾಸ್ತವವಾಗಿ ಈ ಆವೃತ್ತಿಯಲ್ಲಿ ಆರ್‌ಸಿಬಿ ವೇಗಿಗಳು ಪವರ್ಪ್ಲೇನಲ್ಲಿ 75 ಕ್ಕೂ ಅಧಿಕ ರನ್ ಬಿಟ್ಟುಕೊಡುತ್ತಿರುವುದು ಇದು ನಾಲ್ಕನೇ ಬಾರಿ. ಈ ಮೂಲಕ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಒಂದು ಆವೃತ್ತಿಯಲ್ಲಿ ಪವರ್ಪ್ಲೇನಲ್ಲಿ 4 ಬಾರಿ 75ಕ್ಕೂ ಅಧಿಕ ರನ್ ಬಿಟ್ಟುಕೊಟ್ಟ ಬೇಡದ ದಾಖಲೆ ನಿರ್ಮಿಸಿದೆ.

ಅದರಲ್ಲೂ ಆಡಿರುವ 8 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ 50 ಕ್ಕೂ ಅಧಿಕ ರನ್‌ಗಳನ್ನು ಪವರ್ ಪ್ಲೇನಲ್ಲಿ ಬಿಟ್ಟುಕೊಟ್ಟಿದೆ. ಕೋಲ್ಕತ್ತಾ ನೈಟ್ ರೈಸರ್ಸ್ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲೂ ಆರ್‌ಸಿಬಿ ಪವರ್‌ಪ್ಲೇಯಲ್ಲಿ 85 ರನ್‌ಗಳನ್ನು ನೀಡಿತ್ತು.



















